ವಿಶ್ವದ ಶ್ರೇಷ್ಠ ಕಲೆಗಳಲ್ಲಿ ಯಕ್ಷಗಾನವೂ ಒಂದಾಗಿದೆ.ಜಗತ್ತಿನ ಅತ್ಯಂತ ಶ್ರೀಮಂತ ಮೌಖಿಕ ಕಲೆಗಳಲ್ಲಿ ಒಂದು ಯಕ್ಷಗಾನ ತಾಳಮದ್ದಳೆ ಎಂದು ವಿಶ್ರಾಂತ ಪ್ರಾಧ್ಯಾಪಕ ಹಾಗೂ ಕಲಾವಿದ ಡಾ.ಪ್ರಭಾಕರ ಜೋಷಿ ಹೇಳಿದರು.
ಅವರು ವಿವೇಕಾನಂದ ಮಹಾವಿದ್ಯಾಲಯದ ಐಕ್ಯೂಎಸಿ ಘಟಕ ಹಾಗೂ ವಿವೇಕಾನಂದ ಸಂಶೋಧನ ಕೇಂದ್ರದ ಆಶ್ರಯಲ್ಲಿ ‘ದೇರಾಜೆ ಸೀತಾರಾಮಯ್ಯ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಭಾರತೀಯ ಸಂಸ್ಕೃತಿ ಮತ್ತು ಲಲಿತಕಲೆಗಳ ಅಧ್ಯಯನ ಕೇಂದ್ರ ಇದರ ಉದ್ಘಾಟನೆ ಹಾಗೂ ಸನ್ಮಾನ ಸಮಾರಂಭ’ವನ್ನು ಉದ್ಘಾಟಿಸಿ ಮಾತನಾಡಿದರು. ಕಲೆಗೆ ಅದರದ್ದೇ ಆದ ಭಾಷೆಯಿದೆ. ಭರತನಾಟ್ಯ, ಕಥಕ್ಕಳಿ, ಯಕ್ಷಗಾನ ಇನ್ನು ಹಲವು ಕಲೆಗಳು ಸಾಮಾನ್ಯ ಜನರಿಗೆ ಒಂದೇ ರೀತಿ ಕಾಣುತ್ತದೆ. ಈ ಕಲೆಯ ಸ್ವರೂಪಗಳು ಇದನ್ನು ಭಿನ್ನವಾಗಿಸಿದೆ.ಕಲೆಯ ಸ್ವರೂಪವನ್ನುಅರಿತವರಿಗೆ ಮಾತ್ರ ಈ ನಾಟ್ಯಗಳನ್ನು ಅರ್ಥೈಸಲು ಸಾಧ್ಯ.ಆ ಭಾಷೆಯನ್ನು ಅರ್ಥೈಸಿಕೊಳ್ಳುವುದನ್ನು ಕಲಿಯಬೇಕು ಎಂದರು.
ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷಡಾ.ಶ್ರೀಪತಿ ಕಲ್ಲೂರಾಯ ಮಾತನಾಡಿ, ದೇರಾಜೆ ಸೀತರಾಮಯ್ಯ ಅವರ ಹೆಸರಿನಲ್ಲಿ ಯಕ್ಷಗಾನ ಅಧ್ಯಯನ ಕೇಂದ್ರ, ಭಾರತೀಯ ಸಂಸ್ಕೃತಿ ಮತ್ತು ಲಲಿತಕಲೆಗಳ ಅಧ್ಯಯನ ಕೇಂದ್ರಗಳ ಉದ್ಘಾಟನೆಯ ಮೂಲಕ ಕಾಲೇಜಿನ ಕನಸೊಂದು ನನಸಾಗುತ್ತಿದೆ ಎಂದರು.
ದೇರಾಜೆ ಸೀತಾರಾಮಯ್ಯ ಅವರ ಪುತ್ರ, ರಂಗಕರ್ಮಿ ಮೂರ್ತಿದೇರಾಜೆ ಮಾತನಾಡಿ, ನನ್ನಅಪ್ಪಯ್ಯಅಂದರೆ ದೇರಾಜೆ ಸೀತರಾಮಯ್ಯ ಅವರಿಗೆ ಚೊಕ್ಕಾಡಿಯಲ್ಲಿ ಯಕ್ಷಗಾನ ಅಧ್ಯಯನ ಕೇಂದ್ರವನ್ನು ಸ್ಥಾಪಿಸಬೇಕು ಅನ್ನುವ ಕನಸಿತ್ತು. ಯಕ್ಷಗಾನಕ್ಕೆ ಪ್ರಚಾರವನ್ನುಕೊಡಬೇಕು ಅನ್ನುವ ಉದ್ದೇಶ ಅವರದ್ದಾಗಿತ್ತು.ಅವರ ಕನಸ್ಸನ್ನು ನಗರದ ಪ್ರತಿಷ್ಠಿತ ಕಾಲೇಜು ನನಸು ಮಾಡಿದ್ದು ತುಂಬಾ ಸಂತೋಷದ ವಿಚಾರ. ಕಲೆಯ ಮೂಲ ಹಾಗೂ ಸ್ವರೂಪವನ್ನುಎಲ್ಲರು ತಿಳಿದಿರಬೇಕು. ಇಲ್ಲದಿದ್ದಲ್ಲಿ ಕಲೆಯು ತನ್ನ ಮಹತ್ವವನ್ನು ಕಳೆದುಕೊಳ್ಳುವ ಸಾಧ್ಯತೆಗಳು ಇದೆ ಎಂದರು.ವಿವೇಕಾನಂದ ಸಂಶೋಧನ ಕೇಂದ್ರದ ನಿರ್ದೇಶಕ ಡಾ.ಎಚ್.ಜಿ.ಶ್ರೀಧರ್ ಪ್ರಸ್ತಾವಿಸಿದರು.ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್ ಸ್ವಾಗತಿಸಿ, ಕನ್ನಡ ವಿಭಾಗದ ಉಪನ್ಯಾಸಕ ಡಾ. ಮನಮೋಹನ್ ಎಂ ವಂದಿಸಿದರು.ಸ್ನಾತಕೋತ್ತರ ವಾಣಿಜ್ಯ ಶಾಸ್ತ್ರವಿಭಾಗದ ಸಂಯೋಜಕಿಡಾ. ವಿಜಯ ಸರಸ್ವತಿ ಕಾರ್ಯಕ್ರಮ ನಿರೂಪಿಸಿದರು.
ಕಳೆದ ಒಂದು ವಾರದಲ್ಲಿ ಚಾರ್ಮಾಡಿ ಘಾಟ್ನಲ್ಲಿ ಉಂಟಾದ ಎರಡನೇ ಕಾಡ್ಗಿಚ್ಚು ಪ್ರಕರಣ ಇದಾಗಿದೆ.…
ಅಡಿಕೆ ಆಮದು ವ್ಯವಹಾರದಲ್ಲಿ ತಪ್ಪು ಮಾಹಿತಿ ನೀಡಿ ವಿದೇಶದಿಂದ ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಕರಣದಲ್ಲಿ ತೂತುಕುಡಿಯ…
ಸಾರಡ್ಕದ ಆರಾಧನಾ ಕಲಾಭವನದಲ್ಲಿ ಜ.26 ರಂದು ಕೃಷಿ ಹಬ್ಬ ನಡೆಯಲಿದೆ.ಬೆಳಗ್ಗೆ ಉದ್ಘಾಟನೆಗೊಳ್ಳುವ ಕೃಷಿ…
ಆಮದು ಸುಂಕವನ್ನು ತಪ್ಪಿಸಲು ಹುರಿದ ಅಡಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಹುರಿದ ಅಡಿಕೆಯ ಆಮದು…
ಇತ್ತೀಚಿನ ಅಧ್ಯಯನಗಳ ಪ್ರಕಾರ, ಭಾರತವು ಜಾಗತಿಕವಾಗಿ ಪ್ಲಾಸ್ಟಿಕ್ ತ್ಯಾಜ್ಯದ ಅಗ್ರ ಉತ್ಪಾದಕ ಎಂದು…
115 ವರ್ಷಗಳ ಇತಿಹಾಸ ಇರುವ ಹಾಗೂ ರಾಜ್ಯದಲ್ಲಿ ನಿರ್ಮಾಣವಾದ ಮೊದಲ ಜಲಾಶಯ ವಾಣಿವಿಲಾಸ…