ಪಂಜ ಹಾಗೂ ಸುಳ್ಯ ತಾಲೂಕಿನಾದ್ಯಂತ ಪ್ರಸಿದ್ಧರಾಗಿದ್ದ ಡಾ. ದೇವಿಪ್ರಸಾದ್ ಕಾನತ್ತೂರು ಅವರ ವಿರುದ್ಧ ಪಿತೂರಿ ನಡೆದು ಸೇವೆಯಿಂದ ಅಮಾನತಾಗುವಂತೆ ಮಾಡಲಾಗಿತ್ತು. ದಾಖಲೆ ತಿದ್ದುಪಡಿ ಮಾಡಿ ಜಾನುವಾರು ಸಾಗಾಣಿಕೆಗೆ ದೃಢೀಕರಣ ಪತ್ರ ಕೊಡಲಾಗಿದೆ ಎಂದು ಆರೋಪಿಸಲಾಗಿತ್ತು. 3 ವರ್ಷದ ಹಿಂದಿನ ದಾಖಲೆಯ ತಿದ್ದುಪಡಿ ಮಾಡಲಾಗಿತ್ತು. ಈ ದೂರಿನ ಆಧಾರದ ಮೇಲೆ ಡಾ. ದೇವಿಪ್ರಸಾದ್ ಕಾನತ್ತೂರು ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು.
ಇದೀಗ ಈ ಅಮಾನತು ಆದೇಶವನ್ನು ಹಿಂಪಡೆದು ಕರ್ತವ್ಯಕ್ಕೆ ಹಾಜರಾಗಲು ಇಲಾಖಾ ಆಯುಕ್ತರು ಆದೇಶ ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.
ಡಾ.ದೇವಿಪ್ರಸಾದ್ ಕಾನತ್ತೂರು ಅವರು ಪಂಚ ಪರಿವಾರ ದೇವಸ್ಥಾನದ ಆಡಳಿತಾಧಿಕಾರಿಯಾಗಿ, ಪಂಜ ಗ್ರಾಮ ಪಂಚಾಯತ್ ಆಡಳಿತಾಧಿಕಾರಿಯಾಗಿ ಉತ್ತಮ ಕೆಲಸ ಮಾಡಿ ಜನಾನುರಾಗಿಯಾಗಿದ್ದರು.
ಅಡಿಕೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್‌ಐ ಪ್ರಾತ್ಯಕ್ಷಿಕೆ ಮುಂದುವರಿದಿದೆ. ವೈಜ್ಞಾನಿಕ ಕ್ರಮಗಳು ಮತ್ತು…
ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಮತ್ತು ಆಲಿಕಲ್ಲು ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದೆ.…
ಕರ್ನಾಟಕದಲ್ಲಿ ಏಪ್ರಿಲ್ 6ರಿಂದ ಮಳೆ ಕಡಿಮೆಯಾಗಲಿದೆ. ರಾಜ್ಯಾದ್ಯಂತ ಬಿಸಿಲು ಮತ್ತು ತಾಪಮಾನ ಏರಿಕೆ…
ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಸಮಾಜದ ನಿಜವಾದ ಸಂಸ್ಕೃತಿಯನ್ನು ತೋರಿಸುತ್ತದೆ. ಸಣ್ಣ ಸಣ್ಣ ಸರಿಯಾದ…
ಗುಜ್ಜೆ ಮತ್ತು ಕಡಲೆ ಬಳಸಿ ತಯಾರಿಸುವ ಸಾಂಪ್ರದಾಯಿಕ ಗಸಿ ರುಚಿಕರ ಆಹಾರ. ಚಪಾತಿ…
ದೇಶದಲ್ಲಿ 19 ರಾಜ್ಯಗಳಲ್ಲಿ 9.25 ಕೋಟಿ ರೈತ ಐಡಿ ನಿರ್ಮಾಣವಾಗಿದೆ. ಮುಂದಿನ 6…