ದೇಲಂಪಾಡಿ: ಗಡಿನಾಡ ಗ್ರಾಮೀಣ ಭಾಗದಲ್ಲಿ ‘ಧರ್ಮಸಿಂಧು’ ಪ್ರತಿಷ್ಠಾನ ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಇವರ ಆಶಿರ್ವಚನದೊಂದಿಗೆ ಶ್ರೀ ರಾಮ ಭಜನಾ ಮಂದಿರ ದೇಲಂಪಾಡಿಯಲ್ಲಿ ಉದ್ಘಾಟನೆಗೊಂಡಿತು.
ಕಾರ್ಯಕ್ರಮವು ಸುಮಂಗಲೆಯರಿಂದ ಗೋಪೂಜೆಯಿಂದ ಪ್ರಾರಂಭವಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶಿವರಾಮ ಕಲ್ಲೂರಾಯ ವಹಿಸಿದ್ದರು. ರವಿಕುಮಾರ್ ಬಂದ್ಯಡ್ಕ ಉಪಸ್ಥಿತರಿದ್ದರು. ಈ ಸಂದರ್ಭ 2021ರ ಕೇರಳ ರಾಜ್ಯ ಅಧ್ಯಾಪಕ ಪುರಸ್ಕೃತರಾದ ನಾರಾಯಣ ಮಾಸ್ಟರ್ ದೇಲಂಪಾಡಿ ಇವರನ್ನು ಅಭಿನಂದಿಸಲಾಯಿತು.
ಧರ್ಮಸಿಂಧು ಪ್ರತಿಷ್ಠಾನದ ಅಧ್ಯಕ್ಷರಾಗಿ ಪದ್ಮನಾಭ ರಾವ್ ಮಯ್ಯಾಳ,ಉಪಾಧ್ಯಕ್ಷರಾಗಿ ಗಣೇಶ್ ದೇಲಂಪಾಡಿ, ಕಾರ್ಯದರ್ಶಿ ಅಜಿತ್ ಮೆಣಸಿನಕಾನ, ಜತೆ ಕಾರ್ಯದರ್ಶಿ ವಿಕ್ರಾಂತ್ ಮಯ್ಯಾಳ, ಖಜಾಂಜಿ ಧನಂಜಯ ಬೆಳ್ಳಿಪ್ಪಾಡಿ, ಸಂಚಾಲಕರಾಗಿ ಚಂದ್ರಶೇಖರ ನೂಜಿಬೆಟ್ಟು, ನಿರ್ದೇಶಕರಾಗಿ ವಸಂತ ಅಡ್ಡಂತ್ತಡ್ಕ, ಬಾಲಕೃಷ್ಣ ಮಯ್ಯಾಳ, ಸಂಪತ್ ಊಜಂಪಾಡಿ, ಕೌಶಿಕ್ ಬೆಳ್ಳಿಪ್ಪಾಡಿ, ಅಭಿಷೇಕ್ ದೇಲಂಪಾಡಿ ಆಯ್ಕೆಯಾಗಿದ್ದಾರೆ.
ವಿಕ್ರಾಂತ್ ಮಯ್ಯಾಳ ಸ್ವಾಗತಿಸಿ, ಪದ್ಮನಾಭ ಮಯ್ಯಾಳ ಪ್ರಾಸ್ತಾವಿಕ ಮಾತನಾಡಿ ಪ್ರತಿಷ್ಠಾನದ ಮುಂದಿನ ಯೋಜನೆ ಮುಷ್ಠಿ ಬಿಕ್ಷಾಭಿಯಾನ ಲಕ್ಷವೃಕ್ಷ ಅಭಿಯಾನ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಿದರು. ಧನಂಜಯ ಬೆಳ್ಳಿಪ್ಪಾಡಿ ವಂದಿಸಿದರು. ಚಂದ್ರಶೇಖರ ನೂಜಿಬೆಟ್ಟು ನಿರೂಪಿಸಿದರು.
ಕೃಷಿಕರಿಗೆ ಹವಾಮಾನದ ಬದಲಾವಣೆಯ ಮಾಹಿತಿ ಇರುವುದಿಲ್ಲ. ಇದಕ್ಕಾಗಿ ಡಿಸೀಸ್ ಫಾರ್ಕಾಸ್ಟ್ ಅಂದರೆ ಯಾವ…
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯ ಅನ್ವಯ, ಉತ್ತರ ಕನ್ನಡ…
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ ಮಿಶ್ರಿತ ಬಿಸಿಲಿನ ವಾತಾವರಣದ ಮುನ್ಸೂಚನೆ…
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆಯನ್ನು…