ಕ್ಯಾಂಪ್ಕೊ ಮಹಾಸಭೆ | ಕ್ಯಾಂಪ್ಕೊದ ಈ ಯೋಜನೆ ನಿಮಗೆ ಗೊತ್ತೇ…?

September 14, 2025
12:26 PM
ಕ್ಯಾಂಪ್ಕೊ 2024-25ನೇ ಸಾಲಿನಲ್ಲಿ 3,632 ಕೋಟಿ ರೂ.ಗಳ ವಹಿವಾಟು ನಡೆಸಿ 51.85 ಕೋಟಿ ರೂ ಲಾಭ ದಾಖಲಿಸಿ, 39.87 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದ್ದು ಶೇ. 8 ಡಿವಿಡೆಂಡ್‌ ನೀಡಲು ನಿರ್ಧರಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಘೋಷಿಸಿದರು. 

ಅಡಿಕೆ ಬೆಳೆಗಾರರ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ಮಹಾಸಭೆಯು ಸೆ.13 ರಂದು ಅಡ್ಯಾರ್‌ ಗಾರ್ಡನ್‌ನಲ್ಲಿ ನಡೆಯಿತು.  ಸಂಸ್ಥೆಯು 2024-25ನೇ ಸಾಲಿನಲ್ಲಿ 3,632 ಕೋಟಿ ರೂ.ಗಳ ವಹಿವಾಟು ನಡೆಸಿ 51.85 ಕೋಟಿ ರೂ ಲಾಭ ದಾಖಲಿಸಿ, 39.87 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದ್ದು ಶೇ. 8 ಡಿವಿಡೆಂಡ್‌ ನೀಡಲು ನಿರ್ಧರಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಘೋಷಿಸಿದರು.  ಇದರ ಜೊತೆಗೆ 2024-25 ನೇ ಸಾಲಿನಲ್ಲಿ ಅಡಿಕೆ  ಹಾಗೂ ಕೊಕ್ಕೋ ಮಾರಾಟದ ಮೇಲೆ ರೈತರಿಗೆ ಪ್ರೋತ್ಸಾಹ ಧನ ನೀಡಲು ಕೂಡಾ ನಿರ್ಧರಿಸಿದೆ, ಕ್ಯಾಂಪ್ಕೊ ಸಿಬ್ಬಂದಿಗೆ ಶೇ.14ರ ಉದಾರ ಭತ್ಯೆ ನೀಡಲು ಎಂದು ಹೇಳಿದರು.

ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ  ಅಧ್ಯಕ್ಷತೆಯನ್ನು ಸದಸ್ಯರ ಮಹಾಸಭೆ ನಡೆಯಿತು.  ಈ ಬಾರಿ ಸಂಸ್ಥೆಯು 65,675 ಮೆಟ್ರಿಕ್‌ ಟನ್‌ ಅಡಿಕೆ ಖರೀದಿ ಮಾಡಿದ್ದು 64,681 ಮೆಟ್ರಿಕ್‌ ಟನ್‌ ಅಡಿಕೆ ಮಾರಾಟ ಮಾಡಿದೆ. 1900 ಮೆಟ್ರಕ್‌ ಟನ್‌  ಹಸಿ ಕೊಕ್ಕೋ ಹಾಗೂ 5236 ಮೆಟ್ರಿಕ್‌ ಟನ್‌ ಒಣ ಕೊಕ್ಕೋ ಬೀಜ ಖರೀದಿ ಮಾಡಿದ್ದು ಚಾಕೋಲೇಟ್‌ ಕಾರ್ಖಾನೆಯಲ್ಲಿ 5047 ಮೆಟ್ರಿಕ್‌ ಟನ್‌  ಕೊಕೋ ಒಣ ಬೀಜವನ್ನು ಬಳಸಿಕೊಳ್ಳಲಾಗಿದೆ.

ಅಡಿಕೆ ಬೆಳೆಗಾರರಿಗೆ ಇದೊಂದು ಯೋಜನೆ ಹೊಸದಲ್ಲ, ಆದರೆ ಹೆಚ್ಚು ಅಡಿಕೆ ಬೆಳೆಗಾರರಿಗೆ ಈ ಯೋಜನೆಯ ಬಗ್ಗೆ ಮಾಹಿತಿ ಇರಲಿಲ್ಲ. ಸಂಸ್ಥೆಯ ಸದಸ್ಯ ಗ್ರಾಹಕರು ಅಡಿಕೆಯನ್ನು 2 ಕ್ವಿಂಟಾಲ್ ವರೆಗೆ ಅಡಮಾನವಾಗಿ ಕ್ಯಾಂಪ್ಕೊದಲ್ಲಿ ಇರಿಸಲು ಅವಕಾಶ ಇದೆ.  ಹಿಂದೆ ಇದು 10 ಕ್ವಿಂಟಾಲ್ ಮಿತಿಯನ್ನು ಹೊಂದಿತ್ತು. ಸಾಮಾನ್ಯ ಅಡಿಕೆ ಬೆಳೆಗಾರರಿಗೆ ಅನುಕೂಲವಾಗಲು ಅದನ್ನು ಈಗ 200 ಕಿಲೋಗೆ ಮಿತಿ ನಿಗದಿಪಡಿಸಲಾಗಿದೆ. ಧಾರಣೆ ಹೆಚ್ಚಳವಾದಾಗ ಅಥವಾ ತಮಗೆ ಬೇಕೆನಿಸಿದಾಗ ಆ ಅಡಿಕೆಯನ್ನು ಮಾರಾಟ ಮಾಡಲು ಅವಕಾಶ ಇದೆ. ನೈಟ್ರೋಜನ್ ಸ್ಟೋರೇಜ್ ವ್ಯವಸ್ಥೆ ಮೂಲಕ ಅಡಿಕೆ ದಾಸ್ತಾನು ಹಾಗೂ ಅಡಮಾನ ಸೌಲಭ್ಯವನ್ನು ಹೊಂದಿದೆ. ಅಡಮಾನ ಇರಿಸಿದ ರೈತರಿಗೆ ಶೇ.60 ರಷ್ಟು ಮೊತ್ತವನ್ನು ಮುಂಗಡ ರೂಪದಲ್ಲಿ ನೀಡಲಾಗುತ್ತದೆ. ಶೇ.30 ರಷ್ಟು ಮುಂಗಡ ಸಾಲ ಕಡ್ಡಾಯವಾಗಿ ಪಡೆಯಬೇಕು. ಅಡಿಕೆ ದರ ಹೆಚ್ಚಳವಾದಾಗ ತಮಗೆ ಬೇಕಾದ ದಿನ ಮಾರಾಟ ಮಾಡಬಹುದು. ಆದರೆ ಸದ್ಯ 6 ತಿಂಗಳ ಅವಧಿಯನ್ನು ಹೊಂದಿದೆ. 6 ತಿಂಗಳ ಅವಧಿಯಲ್ಲಿ ಯಾವಾಗ ಬೇಕಾದರೂ ಅಡಿಕೆ ಮಾರಾಟ ಮಾಡಬಹುದು.  ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ ಸೇರಿಕೊಳ್ಳಿ…. 

ಕೃಷಿಕರಿಗೆ ಬೇಕಾದ ಪೋಷಕಾಂಶ ಗೊಬ್ಬರಗಳ ಕಚ್ಚಾವಸ್ತುಗಳನ್ನು ಸದ್ಯ ಕಾಂಪ್ಕೊ ಹೊರಗಿನಿಂದ ಖರೀದಿಸಿ ಕಾಂಪ್ಕೊ ಬ್ಯಾಂಡ್‌ನಲ್ಲಿ ನೀಡುತ್ತಿದೆ. ಇನ್ನು ಮುಂದೆ ಸ್ವತಃ ಕಾಂಪ್ಕೊ ಸಂಸ್ಥೆ ಸಾವಯವ ಗೊಬ್ಬರ ಉತ್ಪಾದಿಸುವ ಯೋಜನೆ ಹಾಕಿಕೊಂಡಿದೆ. ಇದಕ್ಕಾಗಿ ಚಿತ್ರದುರ್ಗದ ಹಿರಿಯೂರಿನಲ್ಲಿ 18 ಎಕರೆ ಜಾಗ ಖರೀದಿಗೆ ನಿರ್ಧರಿಸಿದೆ . ಕೃಷಿಕರಿಗೆ ನೆರವಾಗಲು ಕಾಂಪ್ಕೊ ವತಿಯಿಂದ ಪುತ್ತೂರಿನಲ್ಲಿ ಅತ್ಯಾಧುನಿಕ ಮಾದರಿಯ ಮಣ್ಣು ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಇದನ್ನು ಕಾಂಪ್ಕೊದ ಎಲ್ಲ ಶಾಖೆಗಳಿಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದರು.

ಅಡಿಕೆ ಕೊಳೆರೋಗದಿಂದ ಬಾಧಿಸಿದ ಕೃಷಿಕರ ನೆರವಿಗೆ ಕಾಂಪ್ಕೊ ಹೆಜ್ಜೆ ಇರಿಸಿದೆ. ಅಡಿಕೆ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡುವಂತೆ ಕೇಂದ್ರ ಹಾಗೂ ಕೇರಳ ಮತ್ತು ಕರ್ನಾಟಕ ರಾಜ್ಯ ಸರಕಾರವನ್ನು ಒತ್ತಾಯಿಸಲಾಗಿದೆ ಎಂದು ಕಿಶೋರ್‌ ಕುಮಾರ್‌ ಕೊಡ್ಗಿ ಹೇಳಿದರು. …… ಮುಂದೆ ಓದಿ……

ಕ್ಯಾಂಪ್ಕೊ ಮೈಲುತುತ್ತು ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ಸಿಬಂದಿಗಳು, ಪ್ರತೀ ಬ್ಯಾಚ್‌ ಮೈಲುತುತ್ತನ್ನೂ ಪರೀಕ್ಷೆಗೆ ಒಳಪಡಿಸಿಯೇ ಮಾರಾಟ ಮಾಡಲಾಗುತ್ತಿದೆ. ಗುಣಮಟ್ಟ ಕಾಯ್ದುಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ ಸೇರಿಕೊಳ್ಳಿ…. 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹಿಂದೂ ಮಹಾಸಾಗರದ ಹವಾಮಾನದಲ್ಲಿ ಹಠಾತ್ ಬದಲಾವಣೆ – ಮತ್ತೆ ಮಹಾಮಳೆಗೆ ಕಾರಣವಾಗುತ್ತಿದೆಯೇ?
August 3, 2026
12:03 PM
by: ಸಾಯಿಶೇಖರ್ ಕರಿಕಳ
ರಾಜ್ಯದಲ್ಲಿ ಭಾರೀ ಮಳೆ ಆರ್ಭಟ – ಕೆಲವು ಜಿಲ್ಲೆಗಳಲ್ಲಿ ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ
August 3, 2026
7:20 AM
by: ದ ರೂರಲ್ ಮಿರರ್.ಕಾಂ
ಆಹಾರ-ನಿದ್ರೆ ಪರಸ್ಪರ ಪೂರಕ; ಉತ್ತಮ ನಿದ್ರೆಗೆ ಹಸಿವು ಅಗತ್ಯ: ರಾಘವೇಶ್ವರ ಶ್ರೀ
August 2, 2026
9:50 PM
by: ದ ರೂರಲ್ ಮಿರರ್.ಕಾಂ
ಕೃಷಿಕರ ಮಿತ್ರ ಸಾಯಿಶೇಖರ್‌ ಕರಿಕಳ ಅವರಿಗೆ ರೈತ ರತ್ನ ಪ್ರಶಸ್ತಿ
August 2, 2026
9:41 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror