ಅಗ್ರಿಕಲ್ಚರ್ ಬಿಎಸ್ಸಿ ಮಾಡಲು ಮನಸ್ಸಿದ್ದರು ಸಿಇಟಿ ಬರೆದು ರೇಂಕ್ ತೆಗೆದು ಸೀಟು ತೆಗೆದುಕೊಳ್ಳುವುದೆಂದರೆ ಎಲ್ಲರಿಗೂ ಆಗದ ಕೆಲಸ. ಆದ್ರೆ ಎಷ್ಟೋ ವಿದ್ಯಾರ್ಥಿಗಳಿಗೆ ಕೃಷಿ(Agriculture) ಸಂಬಂಧಿತ ಕೋರ್ಸ್ ಮಾಡಬೇಕು ಅನ್ನುವ ಆಸೆ ಇರುತ್ತದೆ. ಯಾರಿಗೆಲ್ಲಾ ಈ ಕನಸು ಇದೆಯೋ ಅವರೆಲ್ಲಾ ಈಗ ನನಸು ಮಾಡಿಕೊಳ್ಳಬಹುದು. 2024 ಹಾಗೂ 25ನೇ ವರ್ಷದ ಕೋರ್ಸ್ಗೆ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು(Agricultural university Bengaluru) ಅಧಿಸೂಚನೆ ಹೊರಡಿಸಿದೆ. ಹೊರಡಿಸಿದ ಅಧಿಸೂಚನೆ ಪ್ರಕಾರ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನೀವೂ ಕೂಡ ಅಗ್ರಿಕಲ್ಚರ್ ಸಂಬಂಧಿತ ಕೋರ್ಸ್(Agriculture Diploma) ಮಾಡಲು ಆಸಕ್ತಿ ಹೊಂದಿದ್ದರೆ ಈ ಕೋರ್ಸ್ಗೆ ಸೇರಿಕೊಳ್ಳಬಹುದು. ಅದಕ್ಕೂ ಮುನ್ನ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ.
ಕನ್ನಡ ಮಾಧ್ಯಮದಲ್ಲಿ ನೀವು ಈ ಕೋರ್ಸ್ ಮಾಡಬಹುದಾಗಿದೆ. ಈ ಕೋರ್ಸ್ನಲ್ಲಿ ನಾಲ್ಕು ಸೆಮಿಸ್ಟರ್ಗಳು ಇರುತ್ತದೆ. ಅದನ್ನಾಧರಿಸಿ ನೀವು ಈ ಕೋರ್ಸ್ಗೆ ಸೇರಿಕೊಳ್ಳಬಹುದು. ಈ ಕೋರ್ಸ್ಗೆ ಸೇರಿಕೊಳ್ಳಲು ನೀವು ಹತ್ತನೇ ತರಗತಿಯಲ್ಲಿ ಕನ್ನಡ ಮಾಧ್ಯಮದಲ್ಲಿ 45 ಪ್ರತಿಷತ ಅಂಕ ಗಳಿಸಿರಬೇಕಾಗುತ್ತದೆ. ಮೆರಿಟ್ ಆಧಾರದ ಮೇಲೆ ರೋಸ್ಟರ್ ಪದ್ಧತಿ ಅಳವಡಿಸಿ, ಪ್ರವೇಶಕ್ಕೆ ಆಯ್ಕೆ ಮಾಡಲಾಗುವುದು. ಆಯ್ಕೆ ಆದ ವಿದ್ಯಾರ್ಥಿಗಳಿಗೆ ಪತ್ರ ಹಾಗೂ ವೆಬ್ಸೈಟ್ ಮೂಲಕ ನೀವು ಆಯ್ಕೆ ಆಗಿದ್ದೀರಾ ಎನ್ನುವುದನ್ನು ತಿಳಿಸಲಾಗುವುದು. ಸಾಮಾನ್ಯ ವರ್ಗದವರಿಗೆ 500 ರೂ ಶುಲ್ಕವಿರುತ್ತದೆ. ಶುಲ್ಕ ಕಟ್ಟಲು ದಿನಾಂಕ 11 .8. 2024 ಕೊನೆ ದಿನವಾಗಿರುತ್ತದೆ. ಈ ದಿನಾಂಕಕ್ಕೂ ಮುನ್ನ ನೀವು ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಬೇಕಾಗುತ್ತದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…