Opinion

ನಿಂತುಕೊಂಡು ತಿನ್ನಬೇಡಿ….| ನಿಂತು ಊಟ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ | ಸಮಯಕ್ಕೆ ಸರಿಯಾಗಿ ಜಾಗೃತರಾಗಿ…..!

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಇಂದಿನ ಧಾವಂತದ ಬದುಕಿನಲ್ಲಿ ಸಮಯದ ಅಭಾವದಿಂದ ತರಾತುರಿಯಲ್ಲಿ ಅನೇಕರು ನಿಂತುಕೊಂಡೇ(Standing) ಊಟ(Meals) ಮಾಡುತ್ತಾರೆ. ಬಫೆಯು ಅನೇಕ ವಿವಾಹ ಸಮಾರಂಭಗಳಲ್ಲಿ ಪಾಶ್ಚಿಮಾತ್ಯ ಶೈಲಿಯ(Western Style) ಆಹಾರವಾಗಿದೆ. ಆದರೆ ನಿಮ್ಮ ಅಭ್ಯಾಸ ಅಥವಾ ನಿಂತುಕೊಂಡು ತಿನ್ನುವ ವಿಧಾನವು ನಿಮ್ಮ ಆರೋಗ್ಯದ(Health) ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿಂತಿರುವಾಗ ತಿನ್ನುವುದು ದೇಹದ(Body) ಮೇಲೆ ಏನು ಮತ್ತು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ನಿಮಗೆ ಹೇಳಲಿದ್ದೇವೆ.

Advertisement
Advertisement

ಜೀರ್ಣಕ್ರಿಯೆಯಲ್ಲಿ ತೊಂದರೆಗಳು : ಮನೆಯಲ್ಲಿ ಅಥವಾ ಕಚೇರಿಯಲ್ಲಿ, ಕೆಲವರು ಆಗಾಗ್ಗೆ ಆತುರದಲ್ಲಿರುತ್ತಾರೆ. ಅವರು ನಿಂತು ತಿನ್ನಲು ಪ್ರಾರಂಭಿಸುತ್ತಾರೆ. ಆದರೆ ನಿಂತುಕೊಂಡು ತಿಂದಾಗ ತಿಂದ ಆಹಾರ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೆ, ಹಸಿವಿನಲ್ಲಿರುವ ವ್ಯಕ್ತಿಯು ಹೆಚ್ಚು ತಿನ್ನುತ್ತಾನೆ. ಆದ್ದರಿಂದ, ಅತಿಯಾಗಿ ತಿನ್ನುವುದು ಮತ್ತು ಅದರ ನಿಧಾನ ಜೀರ್ಣಕ್ರಿಯೆಯು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಬಹುದು.

ನಿಂತು ತಿನ್ನುವುದರಿಂದ ಕೆಟ್ಟ ಭಂಗಿ ಬರುತ್ತದೆ: ನಿಂತಿರುವಾಗ ತಿನ್ನುವುದು ವ್ಯಕ್ತಿಯು ಬಹಳಷ್ಟು ಬಾಗಲು ಕಾರಣವಾಗುತ್ತದೆ. ಅದರೊಂದಿಗೆ, ದೇಹದ ಒಂದು ಭಾಗಕ್ಕೆ ಆರಾಮ ಕೊಡಲು ಇನ್ನೊಂದು ಭಾಗಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ, ಇದನ್ನು ಪದೇ ಪದೇ ಮಾಡುವುದರಿಂದ ಬೆನ್ನುಮೂಳೆಯ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಅದೇ ನಾವು ಊಟ ಮಾಡುವಾಗ ಕುಳಿತುಕೊಳ್ಳುವುದರಿಂದ ದೇಹದ ನಿಲುವನ್ನು ಸುಧಾರಿಸುತ್ತದೆ. ಅದರೊಂದಿಗೆ ಕುಳಿತಲ್ಲೇ ಊಟ ಮಾಡುವುದರಿಂದ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಆಗುತ್ತದೆ. ಕಾಲು ಮಡಚಿ ಕುಳಿತುಕೊಳ್ಳುವುದು ನರಗಳ ಒತ್ತಡವನ್ನು ನಿವಾರಿಸುತ್ತದೆ ಮತ್ತು ನಿಮಗೆ ವಿಶ್ರಾಂತಿ ನೀಡುತ್ತದೆ.

ನೆಲದ ಮೇಲೆ ಕುಳಿತು ಊಟ ಮಾಡಿ: ಪ್ರತಿದಿನ ನೆಲದ ಮೇಲೆ ಕುಳಿತು ಊಟ ಮಾಡುವುದನ್ನು ರೂಢಿಸಿಕೊಳ್ಳಬೇಕು. ಪ್ರತಿ ದಿನ ಕೂತು ಊಟ ಮಾಡುವುದರಿಂದ ದೇಹ ಹೆಚ್ಚು ಫ್ಲೆಕ್ಸಿಬಲ್ ಆಗುತ್ತದೆ. ನಾವು ಕುಳಿತು ತಿನ್ನುವ ವಿಧಾನವೂ ಬೆನ್ನುಮೂಳೆಗೆ ಪ್ರಯೋಜನವನ್ನು ನೀಡುತ್ತದೆ. ಇದು ನಿಮ್ಮ ಬೆನ್ನಿನ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ತೂಕವನ್ನು ನಿಯಂತ್ರಣದಲ್ಲಿಡುತ್ತದೆ : ಇತ್ತೀಚೆಗೆ ತೂಕ ಬೆಳವಣಿಗೆ ಸಮಸ್ಯೆ ಅನೇಕರಿಗೆ ತಲೆನೋವಾಗಿ ಪರಿಣಮಿಸುತ್ತಿದೆ. ತೂಕ ಹೆಚ್ಚಾಗುವುದು ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಖಚಿತ ಸಂಕೇತವಾಗಿದೆ. ನಿಮ್ಮ ತೂಕವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ನೀವು ಬಯಸಿದರೆ, ನೀವು ಕುಳಿತುಕೊಂಡು ತಿನ್ನುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ನೀವು ಖಂಡಿತವಾಗಿಯೂ ಪ್ರಯೋಜನವನ್ನು ನೋಡುತ್ತೀರಿ. ಕೂತು ಊಟ ಮಾಡುವುದರಿಂದ ಹೊಟ್ಟೆ ಬೇಗನೆ ತುಂಬುತ್ತದೆ ಮತ್ತು ತನ್ಮೂಲಕ ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.

Advertisement

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ಹಿಂದೆ ಸರಿಯಾಗಿ ಕಾಲು ಮಡಚಿ ಕೆಳಗೆ ಕುಳಿತು ಊಟ ಮಾಡುತ್ತಿದ್ದರು. ಇಂದು ಈ ವಿಧಾನವು ವಿರಳವಾಗಿ ಕಂಡುಬರುತ್ತದೆ. ಏಕೆಂದರೆ ಈಗ ಅನೇಕ ಜನರು ಡೈನಿಂಗ್ ಟೇಬಲ್ ಹೊಂದಿದ್ದಾರೆ. ಆದರೆ ಕಾಲು ಮಡಚಿ ಊಟಕ್ಕೆ ಕುಳಿತುಕೊಳ್ಳುವುದು ಒಂದು ರೀತಿಯ ಯೋಗಾಭ್ಯಾಸವೆ ಸರಿ. ಕಾಲುಗಳನ್ನು ಮಡಚಿ ಕುಳಿತುಕೊಳ್ಳುವುದು, ತುತ್ತು ಬಾಯಿಗಿಡಲು ಕೆಳಗೆ ಬಾಗುವುದು ಮತ್ತು ಅದನ್ನು ಕಚ್ಚಲು ನೇರವಾಗುವುದು ಇವೆಲ್ಲವೂ ಹೊಟ್ಟೆಯಲ್ಲಿರುವ ಸ್ನಾಯುಗಳು ಜೀರ್ಣಕ್ರಿಯೆಗೆ ಅಗತ್ಯವಾದ ರಸವನ್ನು ಹೊರತೆಗೆಯಲು ಸಹಾಯ ಮಾಡುತ್ತದೆ. ಇದು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಕನ್ನಡಕ್ಕೆ: ಡಾ. ಪ್ರ. ಅ. ಕುಲಕರ್ಣಿ

Due to lack of time in today’s fast-paced life, many people eat standing meals in a hurry. Buffet is a Western style food in many wedding ceremonies. But your habit or way of eating while standing will have a bad effect on your health. We are going to tell you what and how eating while standing affects the body.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

58ನೇ ಜ್ಞಾನಪೀಠ ಪ್ರಶಸ್ತಿ  ಪ್ರದಾನ | ಜಗದ್ಗುರು ರಾಮಭದ್ರಾಚಾರ್ಯ ಅವರಿಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ

ದೆಹಲಿಯಲ್ಲಿ  ಆಯೋಜಿಸಿದ್ದ 58ನೇ ಜ್ಞಾನಪೀಠ ಪ್ರಶಸ್ತಿ  ಪ್ರದಾನ ಕಾರ್ಯಕ್ರಮದಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು…

7 hours ago

ಹೊಸರುಚಿ | ಹಲಸಿನ ಹಣ್ಣಿನ ಜಾಮ್

ಹಲಸಿನ ಹಣ್ಣಿನ ಜಾಮ್ ಗೆ ಬೇಕಾಗುವ ಸಾಮಗ್ರಿಗಳು : ಹಲಸಿನ ಹಣ್ಣು 3…

21 hours ago

ಅಡಿಕೆ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರಗಳಿಂದ ರಚಿಸಲಾದ ಸಮಿತಿಗಳು ಏನು ಹೇಳಿವೆ..?

ಅಡಿಕೆಗೆ ಸಂಬಂಧಿಸಿ ಸುಮಾರು 7 ಸಮಿತಿಗಳು-ವರದಿಗಳು ಆಗಿವೆ. ಎಲ್ಲಾ ಸಂದರ್ಭದಲ್ಲೂ ಅಡಿಕೆಯ ಪರ್ಯಾಯ…

22 hours ago

ಮೇ ಕೊನೆಯ ವಾರದಂದು ಈ ಐದು ರಾಶಿಯವರಿಗೆ ಶುಕ್ರ ದೆಸೆ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

22 hours ago

ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಬಾಗಲಕೋಟೆ ಜಿಲ್ಲೆಯ  ಶೂರ್ಪಾಲಿಯ ಶ್ರೀಲಕ್ಷ್ಮೀ ನರಸಿಂಹ ದೇವಾಲಯ

ಕೆಲ ದೇವಾಲಯಗಳು ತಮ್ಮ ಶಿಲ್ಪಕಲೆ, ಇತಿಹಾಸ, ಸೌಂದರ್ಯಕ್ಕೆ ಹೆಸರಾದರೆ ಮತ್ತೆ ಕೆಲವು ಭಕ್ತರ…

1 day ago