ನಾವು ಸ್ವಾತಂತ್ರ್ಯ ದಿನಾಚರಣೆಯನ್ನು(Independence day) ದೇಶದ ಸ್ವ್ಯಾತಂತ್ರ್ಯಕ್ಕಾಗಿ ಮಡಿದ ಹೋರಾಟಗಾರರಿಗೆ ನಮನ ಸಲ್ಲಿಸಲು ಮಾಡುತ್ತಿದ್ದೇವೆಯಾ..? ಇಲ್ಲಾ ನಮ್ಮ ಪ್ರಕೃತಿಯನ್ನು ಹಾಳು ಮಾಡಲು ಮಾಡುತ್ತಿದ್ದೇವಾ ಅನ್ನುವ ಅನುಮಾನ ಮೂಡುತ್ತದೆ. ಮುಂಬರುವ ದಿನಗಳಲ್ಲಿ ನಾಡಹಬ್ಬ, ಗಣ್ಯಾತಿಗಣ್ಯರು ಮಾಡುವ ಕಾರ್ಯಕ್ರಮ, ಸಾಮೂಹಿಕವಾಗಿ ಮಾಡುವ ಯಾವುದೇ ಕಾರ್ಯಕ್ರಮಗಳಲ್ಲಿ ಅದಕ್ಕಾಗಿ ಬಳಸುವ, ದಾನ, ಮಂಟಪಗಳು, ಚಿತ್ರಗಳು, ಸರ್ಕಾರೀ ಕಟ್ಟಡಗಳು, ಸಾರ್ವಜನಿಕ ಸ್ಥಳಗಳಲ್ಲಿ, ಕಣ್ಣಿಗ ಕಾಣುವಂತೆ ಚಿತ್ರಸಹಿತ, ಪ್ಲಾಸ್ಟಿಕ್, ರಬ್ಬರ್ ಇತರೆ ತ್ಯಾಜ್ಯದಿಂದಾಗುವ ತೊಂದರೆಗಳ ವಿವರಣೆ ಇರುವ ಫಲಕ ಕಡ್ಡಾಯ ಮಾಡಬೇಕು.
ಈ ಮಾಹಿತಿಯನ್ನು ಓದಿದ ಕೆಲವೇ ಕೆಲವರಾದರು ಸಹೖದಯಿಗಳು, ಕಾರ್ಯುಪ್ರವೃತ್ತರಾದರೆ ಸಾಕು. ಒಬ್ಬರಿಂದ ಒಬ್ಬರನ್ನು ಜಾಗೃತಗೊಳಿಸಲು ಸಾಧ್ಯವಾದರೆ ಆ ಜಾಗೃತದಿಂದಾಗುವ ಮುಂದಿನ ಕಾರ್ಯ ಸದಾ ಸಾಕಾರದೆಡೆ ಇರುತ್ತದೆ. ಇದು ಸರಿ ಎನಿಸಿದರೆ, ಇದಕ್ಕೆ ಪೂರಕವಾದ ಚಿತ್ರಗಳು, ಸೂಕ್ತ ಸಾಕ್ಷಚಿತ್ರಗಳನ್ನು ಕಲೆಹಾಕಿ, ಸಂಭಂದ ಪಟ್ಟ ಅಧಿಕಾರಿಗಳಿಗೆ ಸವಿವರ, ಸಚಿತ್ರಸಹಿತ, ದೂರು ನೀಡಿ. ಹಾನಿ ಕಾರಕ ವಸ್ತುಗಳನ್ನಳ ತಯಾರಿಕೆ ಖಡ್ಡಾಯವಾಗಿ ನಿಲ್ಲಿಸಲು, ಬಳಕೆಗೆ ನಿರ್ದೇಶನಗಳನ್ನು ಹೇರಲು ಪತ್ರಮುಕೇನ ಆಗ್ರಹಿಸೋಣ. ಆಂದೋಲನಗಳನ್ನು ಮಾಡೋಣ, ತಯಾರಿಕಾ ಘಟಕಗಳೆದುರು ಸತ್ಯಾಗ್ರಹ ಮಾಡೋಣ. ಮಾರಾಟಗಾರರಿಗೆ ಮಾರದಂತೆ ತಾಕೀತು ಮಾಡೋಣ.
ಇದಕ್ಕಾಗಿ ಸಹಕರಿಸಲು, ಸಲಹೆ, ಸಲಕರಣೆಗೆ, ಸಹಭಾಗಿತ್ವಕ್ಕೆ ಕೈಜೋಡಿಸಿ, ಆದಿ ಇಂದ ಅಂತ್ಯದವರೆಗೆ ಕೈ ಕೊಡದೆ, ಕೈ ಬಿಡದೆ ಸರಪಳಿಯಂತೆ, ತಡೆ ಗೋಡೆಗಳಂತೆ ನಿಂತು ನಿಭಾಯಿಸುವುದಕ್ಕೆ ಬದ್ದರಾಗಿ ಬನ್ನಿ. ನಮ್ಮಿಂದಾದ ಅಳಿಲು ಸೇವೆ ಒಬ್ಬರಿಗೆ ಒಂದು ಕ್ಷಣ ಹಾಯಾಗಿದೆ ಎಂದೆನಿಸಿದರೂ ನಮ್ಮ ಕಾರ್ಯ, ಜೀವನ ಸಾರ್ಥಕವಾದಂತೆ.
ಬನ್ನಿ ಕೖ ಜೋಡಿಸಿ, ನಡೆಸಿ, ವಿಪುಲವಾದ ಫಲ ನೀಡಲು ಪಣತೊಟ್ಟು ನಿಲ್ಲಿ…
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…