ಮಿತ್ತೂರಿನ ವೇದಮೂರ್ತಿ ತಿರುಮಲೇಶ್ವರ ಭಟ್ ವೇದ ಗಣಿತದ ಪುಸ್ತಕವನ್ನು ಅನಾವರಣಗೊಳಿಸಿದರು.
ಪ್ರತಿಯೊಬ್ಬ ಮನುಷ್ಯನೂ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಶೀಲನಾಗಬೇಕು. ಚಿನ್ನವಾದರೂ ಅದನ್ನು ಸಂಸ್ಕರಿಸಿದಾಗ ಮಾತ್ರ ಅದು ಆಭರಣವಾಗುತ್ತದೆ. ಹಾಗೆಯೇ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಟ್ಟರೆ ಮಾತ್ರ ಸುಸಂಸ್ಕೃತರಾಗುತ್ತಾರೆ ಎಂದು ಮಿತ್ತೂರಿನ ವೇದಮೂರ್ತಿ ತಿರುಮಲೇಶ್ವರ ಭಟ್ ಇವರು ಹೇಳಿದರು.
ಅವರು ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯಲ್ಲಿ ಬುಧವಾರ ‘ವರ್ಣಿಕ ಮತ್ತು ಗಣಿತ’ ಕಾರ್ಯಕ್ರಮವನ್ನು ಉದ್ಘಾಟಿಸಿ, ವೇದ ಗಣಿತದ ಪುಸ್ತಕವನ್ನು ಅನಾವರಣಗೊಳಿಸಿ ಮಾತನಾಡಿದರು.
ಅತಿಥಿಯಾಗಿ ಆಗಮಿಸಿದ್ದ ವಿಶ್ರಾಂತ ಮುಖ್ಯೋಪಾಧ್ಯಾಯಿನಿ ರೂಪಕಲಾ ಮಾತನಾಡಿ ಹಳೆ ಬೇರು ಹೊಸ ಚಿಗುರು ಎಂಬ ಕವಿವಾಣಿಯಂತೆ ಆಧುನಿಕ ಜ್ಞಾನ ಎಷ್ಟೇ ಬೆಳೆದರೂ ಪುರಾತನ ಜ್ಞಾನವನ್ನು ಅಡಿಪಾಯವಾಗಿ ಬಳಸಬೇಕು. ಸರಳ ಸೂತ್ರಗಳ ಮೂಲಕ ಗಣಿತ ಅಧ್ಯಯನ ಮಾಡುವ ಸುಲಭ ವಿಧಾನವನ್ನು ನಮಗೆಲ್ಲರಿಗೂ ಪರಿಚಯಿಸಿಕೊಟ್ಟವರು ಶ್ರೀ ಭಾರತೀ ಕೃಷ್ಣತೀರ್ಥರು. ಅದೇ ಸೂತ್ರಗಳ ಮುಖಾಂತರ ಸುಲಭವಾಗಿ ಗಣಿತದ ಸವಾಲುಗಳನ್ನು ಪರಿಹರಿಸಬಹುದು ಎಂದು ತಿಳಿಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಕೈಬರಹವು ಮುಖದ ಕನ್ನಡಿ ಇದ್ದಂತೆ. ಹಾಗಾಗಿ ಉತ್ತಮ ಕೈ ಬರೆಹವು ಒಬ್ಬ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎಂದು ನುಡಿದರು.
ಶಾಲಾ ಪ್ರಾಂಶುಪಾಲೆ ಮಾಲತಿ ಡಿ ಭಟ್ ಪ್ರಾಸ್ತವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿಗಳಾದ ಸುಧನ್ವಾ.ಕೆ ಸ್ವಾಗತಿಸಿ, ಸಾನ್ವಿ ಜಿ. ವಂದಿಸಿದರು. ಯಶ್ವೀ ಭುಟ್ ಕಾರ್ಯಕ್ರಮವನ್ನು ನಿರೂಪಿಸಿದರು.
2047ರ ವೇಳೆಗೆ 4 ಟ್ರಿಲಿಯನ್ ಡಾಲರ್ ಆರ್ಥಿಕತೆಯಿಂದ 32 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ…
ತುಂಗ-ಭದ್ರಾ ಎರಡೂ ಜಲಾಶಯಗಳಿಂದ ನದಿಗೆ ಯಾವುದೇ ಕ್ಷಣದಲ್ಲಾದರೂ ೮೦ ಸಾವಿರಕ್ಕೂ ಅಧಿಕ ಕ್ಯೂಸೆಕ್…
ಇತ್ತೀಚಿನ ವಿಜ್ಞಾನ ಮತ್ತು ಹೊಸ ವಿಧಾನಗಳನ್ನು ಬಳಸಿಕೊಂಡು ಜಾಗತಿಕವಾಗಿ ವೇಗವಾಗಿ ಬೆಳೆಯುವ ಮರಗವನ್ನು…
ತನ್ನಲ್ಲಿರುವುದನ್ನು ಸಮ್ಮನಸ್ಸಿನಿಂದ ನೀಡುವುದು ದಾನ. ಪಡಕೊಂಡವನ ತೃಪ್ತಿಯು ದಾನಿಗೆ ಹಾರೈಕೆ. ಇಲ್ಲಿ ಪ್ರಚಾರದ…
ಚಂದನ್ ಕೆ ಪಿ, 8 ನೇ ತರಗತಿ, ರೋಟರಿ ಪ್ರೌಢಶಾಲೆ, ಪಡ್ಡಂಬೈಲು |…
ಗೋಕರ್ಣ ಮಂಡಲಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಯವರ 32ನೇ ಚಾತುರ್ಮಾಸ್ಯ ವ್ರತ ಆಷಾಢ…