Advertisement
MIRROR FOCUS

ಅಬ್ದುಲ್ ಕಲಾಂ ಜನುಮದಿನ ಇಂದು…. | ಪ್ರತೀ ವ್ಯಕ್ತಿಯ ಸ್ಫೂರ್ತಿ ಅಬ್ದುಲ್‌ ಕಲಾಂ |

Share

‘ಯಶಸ್ವಿಯಾಗುತ್ತೇನೆ ಎಂಬ ನಿರ್ಧಾರ ನಿಮ್ಮಲ್ಲಿ ಪ್ರಬಲವಾಗಿದ್ದರೆ ಸೋಲು ಎಂದಿಗೂ ನಿಮ್ಮನ್ನು ಹಿಮ್ಮೆಟ್ಟಿಸುವುದಿಲ್ಲ. “

ಅಬ್ದುಲ್ ಕಲಾಂ. ಒಬ್ಬ ಕನಸುಗಾರನಿಗೆ, ಒಬ್ಬ ಸಾಧಕನಿಗೆ ಆ ಕ್ಷಣದ ಸಾಧನೆ ಮಾತ್ರ ಪ್ರಾಮುಖ್ಯವಾಗಿರುವುದಿಲ್ಲ. ಮುಂದಿನ ಎಷ್ಟೋ ವರುಷಗಳ ನಂತರದ ಬೆಳವಣಿಗೆಯೂ ಅಷ್ಟೇ ಮುಖ್ಯ. ಚಂದ್ರಯಾನದ ವಿಷಯದಲ್ಲಿ ಕನಸುಕಂಡ ಹಲವು ವಿಜ್ಞಾನಿಗಳಲ್ಲಿ ಪ್ರಮುಖರು ಅಬ್ದುಲ್ ಕಲಾಂ. ನಮ್ಮ ದೇಶ ಕಂಡ ಕ್ರಿಯಾಶೀಲ ರಾಷ್ಟ್ರಪತಿಯಾಗಿ ನಮ್ಮಮನದಲ್ಲಿ ಸದಾ ನೆಲೆಸಿರುವವರು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ ಪ್ರಯತ್ನದಲ್ಲಿದೆ ಎಂದು ತಿಳಿದ ನಂತರ, ಕಲಾಂ 2003 ರಲ್ಲಿ ಚಂದ್ರಯಾನದ ಚಂದ್ರನ ಅಧ್ಯಯನವು “ಇಡೀ ದೇಶವನ್ನು, ವಿಶೇಷವಾಗಿ ಯುವ ವಿಜ್ಞಾನಿಗಳು ಮತ್ತು ಮಕ್ಕಳನ್ನು ರೋಮಾಂಚನಗೊಳಿಸಲಿದೆ” ಎಂದು ಹೇಳಿಕೆ ನೀಡಿದ್ದರು. ಜೊತೆಗೆ ಭಾರತದ ಚಂದ್ರಯಾನವು “ಭವಿಷ್ಯದ ಗ್ರಹಗಳ ಅನ್ವೇಷಣೆಯ ಕಡೆಗೆ ಕೇವಲ ಒಂದು ಆರಂಭ” ಎಂದು ಪ್ರತಿಪಾದಿಸಿದರು ಮತ್ತು ಚಂದ್ರಯಾನದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದರು. ಅವರು ಜೀವಂತವಾಗಿದ್ದರೆ ಚಂದ್ರಯಾನ ೩ ರ ಯಶಸ್ಸನ್ನು ಬಹಳ ಸಂಭ್ರಮಿಸುತ್ತಿದ್ದರು. ಅಲ್ಲದೆ ಅಂತರಿಕ್ಷ ಅಧ್ಯಯನದ ಹಾದಿಯಲ್ಲಿ ದಿಟ್ಟ ಹೆಜ್ಜೆ ಇಟ್ಟು ಜಗತ್ತಿನ ಕಣ್ಣಲ್ಲಿ ಪ್ರಮುಖ ಸ್ಥಾನವನ್ನು ನಮ್ಮ ಭಾರತ ಗಳಿಸಲಿದೆ ಎಂಬ ಅವರದೇ ಕನಸು ನನಸಾಗಿತ್ತು.

ತಮಿಳುನಾಡಿನ ರಾಮೇಶ್ವರದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಹುಡುಗ ಭಾರತದ ‘ ಕ್ಷಿಪಣಿಗಳ ಜನಕ’ನಾಗಿ ಪ್ರಸಿದ್ಧರಾದರೆಂದರೆ ಸಣ್ಣ ಸಾಧನೆಯಲ್ಲ. ಈ ಪರಿಶ್ರಮದ ಹಿಂದೆ ಅಪಾರವಾದ ಜೀವನ ಪ್ರೀತಿಯಿದೆ. ಮಾತ್ರವಲ್ಲ ಸದಾ ಕ್ರಿಯಾಶೀಲತೆ ನಿರಂತರ ಪ್ರಯತ್ನ, ಸ್ಷಷ್ಟವಾದ ಭವಿಷ್ಯದ ಬಗೆಗಿನ ಕನಸುಗಳು ಅವರ ಯಶಸ್ವಿನ ಗುಟ್ಟುಗಳು.
೧೫ ಒಕ್ಟೋಬರ್ ೧೯೩೧ ರಂದು ಜೈನುಲಬ್ದೀನ್ ಹಾಗೂ ಆಶಿಮಾ ದಂಪತಿಗಳ ಪುತ್ರರಾಗಿ ಅಬ್ದುಲ್ ಕಲಾಂ ರವರು ಜನಿಸಿದರು. ಹೆತ್ತವರ ಬಡತನದ ಅರಿವಿದ್ದ ಕಲಾಂ ರು ಬೆಳಗ್ಗಿನ ತಮ್ಮ ಅಭ್ಯಾಸವನ್ನು ಮುಗಿಸಿ ಪತ್ರಿಕಾ ವಿತರಣೆಯನ್ನು ಮಾಡಿ ಶಾಲೆಗೆ ಹೋಗುತ್ತಿದ್ದರು.

“ನೆಗೆಟಿವ್ ಪರಿಸ್ಥಿತಿಗಳಲ್ಲೂ ಪಾಸಿಟಿವ್ ಆಗಿದ್ದರೆ ನೀವು ಪ್ರತಿ ಬಾರಿಯೂ ಗೆಲ್ಲುತ್ತಿರಿ” ಎಂಬ ಮಾತುಗಳನ್ನು ಹೇಳಿದ್ದು ಮಾತ್ರವಲ್ಲ ಬಾಳಿ ತೋರಿಸಿದರು. ತಮ್ಮ ಜೀವನದ ಪ್ರತಿ ಹಂತದಲ್ಲೂ , ಎಲ್ಲಾ ನಡೆಗಳಲ್ಲೂ, ನಿರ್ಧಾರಗಳಲ್ಲೂ ಪಾಸಿಟಿವ್ ಚಿಂತನೆಗಳನ್ನೇ ಪ್ರತಿಪಾದಿಸಿದರು.

ಮೂಲತಃ ಅವರೊಬ್ಬ ವಿಜ್ಞಾನಿ. ಅಂತರಿಕ್ಷಯಾನ ವಿಜ್ಞಾನಿ, ಅವರಲ್ಲೊಬ್ಬ ಉಪನ್ಯಾಸಕನಿದ್ದ, ಗಣಿತಜ್ಞ, ತಮಿಳು ಕವಿ, ಲೇಖಕ, ವೀಣಾವಾದಕ.

ನಮ್ಮ ದೇಶದ ಪ್ರತಿಷ್ಠಿತ ಸಂಸ್ಥೆಗಳಾದ DRDO ಹಾಗೂ ಇಸ್ರೋ ಸಂಸ್ಥೆಗಳ ಹೆಮ್ಮೆಯ ವಿಜ್ಞಾನಿ ನಮ್ಮ ಅಬ್ದುಲ್ ಕಲಾಂ. ಭಾರತದ ಮೊದಲ ಉಪಗ್ರಹ ಉಡಾವಣೆಯ ಯೋಜನಾ ನಿರ್ದೇಶಕರಾಗಿ ಯಶಸ್ವಿಯಾದವರು. ಭಾರತದ ಅಣುಬಾಂಬ್ ಹಾಗೂ ಕ್ಷಿಪಣಿಗಳ ಜನಕನೆಂದೇ ಖ್ಯಾತರಾದವರು. 1998 ರಲ್ಲಿ ಪೋಖ್ರಾನ್ 2 ನ್ಯೂಕ್ಲಿಯರ್ ಪರೀಕ್ಷೆಯಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದವರು ಕಲಾಂರವರು. 1997 ರಲ್ಲಿ ಅರ್ಹವಾಗಿಯೇ ಭಾರತರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನಮ್ಮ ದೇಶ ಕಂಡ ಕೆಲವೇ ಕೆಲವು ಕ್ರಿಯಾಶೀಲ ರಾಷ್ಟ್ರಪತಿ ಗಳಲ್ಲಿ ಅಬ್ದುಲ್ ಕಲಾಂರವರು ಒಬ್ಬರು. ತಮ್ಮ ಎಂದಿನ ಸರಳತೆಯನ್ನು ರಾಷ್ಟ್ರ ಪತಿಯಾಗಿದ್ದಾಗಲೂ ನಿಭಾಯಿಸಿ ಜನಮನ್ನಣೆಗೆ ಪಾತ್ರರಾಗಿದ್ದರು. ತಮ್ಮ ಭಾಷಣಗಳಿಂದ , ಉಪನ್ಯಾಸ ಗಳಿಂದ ಖ್ಯಾತರಾಗಿದ್ದರು. ತಮ್ಮ ಕೊನೆಯ ಉಸಿರನ್ನು ಕೂಡ ಭಾಷಣ ಮಾಡುತ್ತಿದ್ದಂತೆ ವೇದಿಕೆಯಲ್ಲೇ ಪ್ರಾಣ ತ್ಯಾಗ ಮಾಡಿದವರು.

ಮಕ್ಕಳ ಪ್ರೀತಿಯ ಕಲಾಂ ಅಜ್ಜ ಆಗಿದ್ದರು. ಇಂದು ಅವರ ಹುಟ್ಟು ಹಬ್ಬ. ಅವರ ಹುಟ್ಟು ಹಬ್ಬವನ್ನು ಮಕ್ಕಳ ಹಬ್ಬವಾಗಿ ಆಚರಿಸುವುದರಲ್ಲಿ ನಿಜವಾಗಿಯೂ ಒಂದು ಅರ್ಥವಿದೆಯಲ್ಲವೇ.?

ಬರಹ :
ಅಶ್ವಿನಿಮೂರ್ತಿಅಯ್ಯನಕಟ್ಟೆ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಹವಾಮಾನ ವರದಿ | 14-09-2026 | ಸೆ.18ರ ಬಳಿಕ ಮಳೆ ಚಿತ್ರಣ ಬದಲಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…

10 hours ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಮೂಲಕ ಅರಳಿದ ಗಣೇಶ

ಬಣ್ಣಗಳ ಮೂಲಕ ಅರಳಿದ ಗಣೇಶ - ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 8…

11 hours ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಲೋಕದಲ್ಲಿ ಪುಟ್ಟ ಮನಸ್ಸಿನ ಖುಷಿ

ನನ್ನ ಚಿತ್ರ – ನನ್ನ ಖುಷಿ | ಗಣೇಶನನ್ನು ಬಣ್ಣಗಳಲ್ಲಿ ಅರಳಿಸಿದ ಪುಟಾಣಿ…

12 hours ago

ವಿಘ್ನಗಳ ಆಚೆ ಕಾಣುವ ಗಣೇಶತತ್ತ್ವ

ಗಣೇಶ ಚತುರ್ಥಿಯನ್ನು ಕೇವಲ ಧಾರ್ಮಿಕ ಆಚರಣೆಯಾಗಿ ನೋಡುವುದಕ್ಕಿಂತ, ಗಣೇಶನ ರೂಪಲಕ್ಷಣಗಳಲ್ಲಿರುವ ಜೀವನದ ಸಂದೇಶಗಳನ್ನು…

15 hours ago

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ

ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್‌ನಲ್ಲಿ…

1 day ago