ಚನ್ನಗಿರಿ ತಾಲೂಕಿನ ವ್ಯಾಪ್ತಿಯಲ್ಲಿ ಒಣಗಿದ ಮೆಕ್ಕೆಜೋಳದ ಬೆಳೆ

October 28, 2023
7:42 PM
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ವ್ಯಾಪ್ತಿಯಲ್ಲಿ ಸಮರ್ಪಕ ಮಳೆಯಾಗದ ಕಾರಣ ರೈತರು ಕಂಗಾಲಾಗಿದ್ದಾರೆ. ಮೆಕ್ಕೇಜೋಳ ಸಂಪೂರ್ಣ ಒಣಗಿ ಹೋಗಿದ್ದು ರೈತರು ನಷ್ಟ ಅನುಭವಿಸಿದ್ದಾರೆ.

ದಾವಣಗೆರೆ(Davangere) ಜಿಲ್ಲೆಯ ಚನ್ನಗಿರಿ ತಾಲೂಕಿನ ವ್ಯಾಪ್ತಿಯಲ್ಲಿ ಸಮರ್ಪಕ ಮಳೆ(Rain) ಬಾರದ ಕಾರಣ ತಾಲೂಕಿನ ಮಾವಿನಕಟ್ಟೆ, ಚನ್ನೇಶಪುರ, ದಿಗ್ಗೇನಹಳ್ಳಿ, ಮಲ್ಲಿಗೆರೆ ಲಕ್ಷ್ಮೀಸಾಗರ, ಹೊದಿಗೆರೆ, ಬೆಂಕಿಕೆರೆ ಸೇರಿದಂತೆ ದೇವರಹಳ್ಳಿ, ಸಂತೆಬೆನ್ನೂರು, ಕಸಬಾ ಹೋಬಳಿಯ ಭಾಗಗಳಲ್ಲಿ ರೈತರ(farmer) ಆಶಾದಾಯಕ ಬೆಳೆಯಾದ ಮೆಕ್ಕೇಜೋಳ(maize) ಸಂಪೂರ್ಣ ಒಣಗಿ ಹೋಗಿದ್ದು ರೈತರು ಕಂಗಾಲಾಗಿದ್ದಾರೆ.

ಚನ್ನಗಿರಿ ತಾಲೂಕು ಸಂಪೂರ್ಣ ಅಡಿಕೆಮಯವಾಗಿದ್ದರೂ, ರೈತರು ದನಕರುಗಳಿಗೆ ಮತ್ತು ಸಾಕಷ್ಟು ಮಧ್ಯಮ ರೈತರ ಆರ್ಥಿಕ ಸಂಕಷ್ಟವನ್ನು ದೂರ ಮಾಡುವ ಬೆಳೆಯೆಂದರೆ ಮೆಕ್ಕೇಜೋಳ. ಪ್ರತಿವರ್ಷವೂ ಮೆಕ್ಕೇಜೋಳ ಬೆಳೆಯು ಅಕ್ಟೋಬರ್ ತಿಂಗಳ ಅಂತ್ಯ ಮತ್ತು ನವೆಂಬರ್ ತಿಂಗಳ ಮೊದಲನೇ ವಾರದಲ್ಲಿ ರೈತರ ಕೃಷಿ ಚಟುವಟಿಕೆಗಳು ಪ್ರಾರಂಭವಾಗಿ ಬಹುತೇಕ ಕಟಾವು ಆಗಬೇಕಿತ್ತು. ಆದರೆ ವಾಡಿಕೆ ಮಳೆ ಕಡಿಮೆಯಾಗಿ ತೇವಾಂಶ ಕೊರತೆಯಾದ ಹಿನ್ನಲೆಯಲ್ಲಿ ಸಂಪೂರ್ಣ ಮೆಕ್ಕೇಜೋಳ ಮತ್ತು ಇತರೇ ಬೆಳೆಗಳಾದ ರಾಗಿ, ತೊಗರಿ ಮತ್ತು ಹತ್ತಿ ಬೆಳೆಗಳು ಸಂಪೂರ್ಣ ನೆಲಕಚ್ಚಿವೆ.

ಇದರಿಂದ ರೈತ ಮಾತ್ರವಲ್ಲದೇ ಮೆಕ್ಕೇಜೋಳವನ್ನು ತಿನ್ನುವ ಮೂಲಕ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದ ಗಿಳಿ ಮತ್ತು ಇತರೇ ಪಕ್ಷಿಗಳಿಗೂ ಅಹಾರವಿಲ್ಲದಂತೆ ಆಗಿದೆ. ಇದರಿಂದ ಮನನೊಂದ ರೈತರು ತಮ್ಮ ಹೊಲಗಳಿಗೆ ಹೋಗುವುದನ್ನು ಬಿಟ್ಟಿದ್ದು ಅಲ್ಪಸ್ವಲ್ಪ ಉಳಿದಿರುವಂತಹ ಹಸಿ ಮೆಕ್ಕೇಜೋಳವನ್ನು ಕಿತ್ತು ಬೇಯಿಸಿ ಮಾರಾಟ ಮಾಡುವ ಮಾರಾಟಗಾರರಿಗೆ ನೀಡಲು ಮುಂದಾಗಿದ್ದಾರೆ. ಮತ್ತು ಕೆಲವು ಕಡೆಗಳಲ್ಲಿ ರೈತರು ಹಾಳದ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನೆಲಸಮ ಮಾಡುತ್ತಿದ್ದಾರೆ. ಕೃಷಿ ಇಲಾಖೆಯು ತಾಲೂಕಿನ ಬರಗಾಲದ ಕುರಿತು ಸರಕಾರಕ್ಕೆ ಈಗಾಗಲೇ ಪ್ರಾಥಮಿಕ ವರದಿಯನ್ನು ಸಲ್ಲಿಸಿದ್ದು ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ.

ಈ ಬಾರಿ ರೈತರು ಕಳೆದ ಬಾರಿ ಚನ್ನಗಿರಿ ತಾಲೂಕಿನಲ್ಲಿ 22600 ಹೆಕೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿ ಕನಿಷ್ಟ ಒಂದು ಎಕೆರೆಗೆ 20 ಕ್ವಿಂಟಾಲ್ ಇಳುವರಿ ಪಡೆದಿದ್ದರು. ಆದರೆ ಈ ಬಾರಿ 24960 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೇಜೋಳ ಬಿತ್ತನೆ ಮಾಡಲಾಗಿದ್ದು ಒಂದು ಎಕೆರೆಗೆ 18 ಕ್ವಿಂಟಾಲ್‌ರವರೆಗೂ ನಿರೀಕ್ಷೆ ಇದ್ದು ಈ ಬಾರಿ ರೈತನಿಗೆ ಒಂದು ಎಕೆರೆಗೆ 3 ಕ್ವಿಂಟಾಲ್ ಮೆಕ್ಕೇಜೋಳಸಹ ದೊರಕದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಬಾರಿ ರಾಗಿ 2600 ಹೆಕ್ಟೇರ್, ತೊಗರಿ 1180 ಹೆಕ್ಕೇರ್, ಹತ್ತಿ 40 ಹೆಕ್ಖೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದು ಬಿತ್ತನೆಯಲ್ಲಿ ನಿಗದಿತ ಗುರಿಯನ್ನು ತಲುಪಲಾಗಿದ್ದರೂ ಬೆಳೆಯ ಇಳುವರಿ ಬಾರದೇ ರೈತನ ಕೂಲಿಯು ದೊರಕದಂತಾಗಿದೆ. ಕಳೆದ ಬಾರಿ ಅಕ್ಟೋಬರ್ ತಿಂಗಳ ಅಂತ್ಯದಲ್ಲಿ ಮೆಕ್ಕೇಜೋಳವು ಕಟಾವನ್ನು ಮಾಡಲಾಗಿದ್ದು ಈ ಬಾರಿ ಮತ್ತೆ ಮಳೆ ಬಂದರೂ ಸಹ ಬೆಳೆಯನ್ನು ನಿರೀಕ್ಷಿಸದಂತಹ ಬೆಳೆಯನ್ನು ನಿರೀಕ್ಷಿಸಲು ಸಾಧ್ಯವಾಗದಂತೆ ಅಗಿದೆ. ವಾಡಿಕೆ ಮಳೆ 692 ಮಿ.ಮೀ ಇದ್ದು ಕಳೆದ ಸಾಲಿನಲ್ಲಿ 980ಮಿ.ಮೀ. ಮಳೆಯಾಗಿದ್ದು ಈ ಬಾರಿ 410 ಮಿ.ಮೀ. ಮಳೆಯಾಗಿದ್ದು ಶೇ 60 ರಷ್ಟು ಮಳೆಯ ಕೊರತೆ ಉಂಟಾಗಿದೆ ಪರಿಣಾಮ ಬೆಳೆಗಳಲ್ಲಿ ಸಂಪೂರ್ಣ ತೇವಾಂಶ ಕಡಿಮೆಯಾಗಿದೆ.

Due to lack of rain in Channagiri taluk of Davangere district, Mavinakatte, Channeshpur, Diggenahalli, Malligere, Lakshmisaagara, Hodigere, Benkkikere, Devarahalli, Santebennur, Kasaba Hobali parts of the taluk, the promising crop of farmers, maize has completely dried up. Confused.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ವಿಶ್ವದ ಶೇ.79ರಷ್ಟು ನದಿಗಳಲ್ಲಿ ಆಮ್ಲಜನಕ ಕುಸಿತ- ಉಷ್ಣವಲಯದ ನದಿಗಳಿಗೆ ಹೆಚ್ಚು ಅಪಾಯ
September 23, 2026
9:41 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 23-09-2026 | ಸೆ.30 ರಿಂದ ಮತ್ತೆ ಬದಲಾಗಲಿದೆ ಹವಾಮಾನ..!
September 23, 2026
1:58 PM
by: ಸಾಯಿಶೇಖರ್ ಕರಿಕಳ
ಕರ್ನಾಟಕದಲ್ಲಿ ಮುಂದಿನ 4 ದಿನ ಭಾರೀ ಮಳೆ ಸಾಧ್ಯತೆ..! ಎಲ್ಲೆಲ್ಲಾ ರೆಡ್‌ ಎಲರ್ಟ್..?‌ ಯಾವಾಗ..?
September 23, 2026
9:18 AM
by: ದ ರೂರಲ್ ಮಿರರ್.ಕಾಂ
₹1.65 ಲಕ್ಷದ ಐಫೋನ್‌ಗಾಗಿ ಬೆಳಗ್ಗೆಯಿಂದಲೇ ಸರದಿ..! ಬೆಂಗಳೂರಿನಿಂದ ಮುಂಬೈವರೆಗೆ ಕಂಡ ‘ಐಫೋನ್‌ ಕ್ರೇಜ್’
September 22, 2026
8:02 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror