ಇ-ಸ್ಕೂಟರ್ ಗಳ ಅಗ್ನಿ ಅನಾಹುತಕ್ಕೆ ದೋಷಪೂರಿತ ಬ್ಯಾಟರಿಗಳೇ ಕಾರಣ | ತನಿಖಾ ವರದಿ |

Advertisement

ಭಾರತದಲ್ಲಿ ಇ-ಸ್ಕೂಟರ್ ಗಳಿಗೆ ಬೆಂಕಿ ಹತ್ತಿಕೊಳ್ಳುತ್ತಿರುವುದು ದೋಷಪೂರಿತ ಬ್ಯಾಟರಿ, ಮಾಡ್ಯೂಲ್ ಗಳಿಂದ ಎಂದು ಆರಂಭಿಕ ತನಿಖೆಯಿಂದ ತಿಳಿದುಬಂದಿದೆ.ಇತ್ತೀಚಿನ ದಿನಗಳಲ್ಲಿ ಇ-ಸ್ಕೂಟರ್ ಗಳಲ್ಲಿ ಇದ್ದಕ್ಕಿದ್ದಂತೆಯೇ ಬೆಂಕಿ ಕಾಣಿಸಿಕೊಂಡು ಸ್ಕೂಟರ್ ಗಳು ಸುಟ್ಟು ಹೋಗುತ್ತಿರುವ ಪ್ರಕರಣಗಳು ಹೆಚ್ಚಾಗತೊಡಗಿವೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗಿತ್ತು.

Advertisement

Advertisement
Advertisement
Advertisement

ಈ ಮಧ್ಯೆ, ಕೇಂದ್ರ ಸರ್ಕಾರ ಈ ಅಗ್ನಿ ಅನಾಹುತಕ್ಕೆ ಕಾರಣಗಳೇನೆಂಬುದನ್ನು ಪತ್ತೆ ಮಾಡಿ ಪರಿಹಾರವಾದ ನಂತರವೇ ಇ-ಸ್ಕೂಟರ್ ಗಳನ್ನು ಮಾರುಕಟ್ಟೆಗೆ ಕಳುಹಿಸಬೇಕೆಂದು ವಾಹನ ತಯಾರಕರಿಗೆ ಮೌಖಿಕ ಸಂದೇಶ ರವಾನೆ ಮಾಡಿತ್ತು.ಅಲ್ಲದೇ, ಈ ಅನಾಹುತಗಳಿಗೆ ಕಾರಣಗಳೇನೆಂಬುದರ ಬಗ್ಗೆ ತನಿಖೆ ನಡೆಸುವಂತೆಯೂ ಸೂಚನೆ ನೀಡಿತ್ತು.

Advertisement
Advertisement

ಇದೀಗ ಸ್ವತಂತ್ರ ಸಂಸ್ಥೆಯೊಂದು ತನಿಖೆ ನಡೆಸಿದ್ದು, ಅದರ ಪ್ರಾಥಮಿಕ ವರದಿ ಪ್ರಕಾರ, ಅಗ್ನಿ ಅನಾಹುತಕ್ಕೆ ಇ-ಸ್ಕೂಟರ್ ಗಳಲ್ಲಿ ಬಳಸಲಾಗುತ್ತಿರುವ ಬ್ಯಾಟರಿ ಸೆಲ್ಸ್ ಮತ್ತು ಮಾಡ್ಯೂಲ್ ಗಳಲ್ಲಿನ ದೋಷದಿಂದ ಅನಾಹುತ ಸಂಭವಿಸುತ್ತಿದೆ ಎಂದು ವರದಿಗಳು ತಿಳಿಸಿವೆ.

Advertisement

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಇ-ಸ್ಕೂಟರ್ ಗಳ ಅಗ್ನಿ ಅನಾಹುತಕ್ಕೆ ದೋಷಪೂರಿತ ಬ್ಯಾಟರಿಗಳೇ ಕಾರಣ | ತನಿಖಾ ವರದಿ |"

Leave a comment

Your email address will not be published.


*