Advertisement
ಮಾಹಿತಿ

ಮಣ್ಣು ಕೊರೆಯುವ ಜೀವಿಗಳು | ನಮ್ಮ ಜಮೀನಿನಲ್ಲಿ ಇವುಗಳಿದ್ದರೆ ಆಗುವ ಪ್ರಯೋಜನಗಳೇನು..?

Share

ಮಣ್ಣು(Soil) ಭೂಮಿಯ(Earth)ಪರಿಸರದ(Environment) ಒಂದು ಪ್ರಮುಖ ಅಂಶ.  ಇದು ಜೀವಂತ ಜೀವಿಗಳಿಗೆ ಆವಾಸಸ್ಥಾನವನ್ನು ಒದಗಿಸುತ್ತದೆ. ಇದು ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಮತ್ತು ಎರೆಹುಳುಗಳಂತಹ ಸಣ್ಣ ಪ್ರಾಣಿಗಳನ್ನು ಒಳಗೊಂಡಂತೆ ಸೂಕ್ಷ್ಮಜೀವಿಗಳ ಜೀವನದಿಂದ ತುಂಬಿದೆ. ಈ ಜೀವಿಗಳು ಮಣ್ಣಿನ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಸಸ್ಯಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ ಮತ್ತು ಕಾರ್ಬನ್ ಮತ್ತು ಇತರ ವಸ್ತುಗಳ ಸೈಕ್ಲಿಂಗ್ನಲ್ಲಿ ಸಹಾಯ ಮಾಡುತ್ತವೆ. ಈ ಎಲ್ಲಾ ಜೀವಿಗಳು ಆಶ್ರಯ, ಆಹಾರ ಮತ್ತು ಸಂತಾನೋತ್ಪತ್ತಿಗೆ ಸ್ಥಳವನ್ನು ಒದಗಿಸಲು ಮಣ್ಣಿನ ಮೇಲೆ ಅವಲಂಬಿತವಾಗಿವೆ. ಮಣ್ಣು ಪರಿಸರದ ಅತ್ಯಗತ್ಯ ಭಾಗವಾಗಿದೆ. ಮಣ್ಣು ಕೊರೆಯುವ ಜೀವಿಗಳು ಮಣ್ಣೊಳಗಿನ ಮತ್ತು ಮಣ್ಣು ಮೇಲಿನ ಪ್ರಾಕೃತಿಕ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ವ್ಯವಸ್ಥೆಯಲ್ಲಿ ಎರೆಹುಳುಗಳು ಪ್ರಮುಖ ಪಾತ್ರ ವಹಿಸುತ್ತವೆ.

Advertisement
Advertisement

ನಮ್ಮ ಹೊಲದ ಮಣ್ಣುಗಳಲ್ಲಿ ಎರೆಹುಳುಗಳಿದ್ದರೆ ಆಗುವ ಲಾಭವೇನು ಗೊತ್ತೇ? :

Advertisement
  • ಮಣ್ಣಲ್ಲಿ ಗಾಳಿಯಾಡುವಿಕೆ: ಎರೆಹುಳುಗಳು ಮಣ್ಣಲ್ಲಿ ಓಡಾಡುವಲ್ಲೆಲ್ಲಾ ಸಣ್ಣ ಸುರಂಗ ನಿರ್ಮಾಣವಾಗುತ್ತದೆ. ಈ ಸುರಂಗದೊಳಗೆ ಗಾಳಿಯಾಡುತ್ತದೆ. ಜೊತೆಗೆ ಮಳೆನೀರು ಕೂಡಾ ಮಣ್ಣೊಳಗೆ ಸುರಂಗದ ಮೂಲಕ ಮಣ್ಣೊಳಗೆ ಹರಿಯುತ್ತಾ ಮಣ್ಣಿನಾಳಕ್ಕೆ ಇಳಿಯುತ್ತದೆ. ಇದರಿಂದ ಗಟ್ಟಿ ಪದರವಿರುವ ಮಣ್ಣು ಸಡಿಲವಾಗುತ್ತದೆ. ಇಂತಹ ಸಡಿಲ ಮಣ್ಣೊಳಗೆ ಗಿಡದ ಬೇರುಗಳು ಇಳಿಯಲು ಬೆಳೆಯಲು ಸಹಕಾರಿ.
  • ಮಣ್ಣಲ್ಲಿ ಪೋಷಕಾಂಶಗಳ ಸೃಷ್ಟಿ: ಎರೆಹುಳುಗಳು ಒಣವಸ್ತುಗಳನ್ನು ಮೆಲ್ಲುತ್ತಾ ನಿಧಾನವಾಗಿ ಅವುಗಳನ್ನು ವಿಘಟಿಸುತ್ತದೆ. ಹೀಗೆ ಚೂರುಚೂರಾಗುವ ಸಾವಯವ ಒಣವಸ್ತುಗಳು ಕ್ರಮೇಣ ಮಣ್ಣಲ್ಲಿ ಬೆರೆತು ಕರಗಿ ಗೊಬ್ಬರವಾಗುತ್ತದೆ. ಈ ಗೊಬ್ಬರದಲ್ಲಿ ಹಲವು ಬಗೆಯ ಪೋಷಕಾಂಶಗಳು ಸೃಷ್ಟಿಯಾಗುತ್ತವೆ. ಮಣ್ಣಲ್ಲಿರುವ ಈ ಪೋಷಕಾಂಶಗಳನ್ನು ಗಿಡದ ಬೇರುಗಳು ಹೀರಿ ಗಿಡದ ಮೇಲ್ಭಾಗಕ್ಕೆ ರವಾನಿಸುತ್ತವೆ.
  • ಮಣ್ಣಿನ ರಚನೆ: ಎರೆಹುಳುಗಳು ಮಣ್ಣಿನ ರಚನೆಯನ್ನು ಸುಧಾರಿಸುತ್ತವೆ ಹಾಗೂ ಮಣ್ಣಲ್ಲಿ ನೀರು ಹೀರುವ ಹಾಗೂ ದೀರ್ಘಕಾಲ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಲು ಸಹಕರಿಸುತ್ತವೆ. ಈ ಬೆಳವಣಿಗೆಗಳ ಕಾರಣದಿಂದ ಮಣ್ಣು ಫಲವತ್ತಾಗುತ್ತದೆ. ಅದರ ಉತ್ಪಾದನಾ ಶಕ್ತಿ ಹೆಚ್ಚುತ್ತದೆ.
  • ಮಣ್ಣಲ್ಲಿ ಸಿಂಗಾರದ ಮನೆಯ ನಿರ್ಮಾಣ: ಎರೆಹುಳುಗಳು ತಾವಿರುವ ತಾಣವನ್ನು ಉತ್ತಮವಾಗಿ ಹಾಗೂ ತಂಪಾಗಿರಿಸುವದರ ಮೂಲಕ ಇನ್ನಿತರ ಮಣ್ಣು ಜೀವಿಗಳೂ ಸಹ ತಾನಿರುವ ಮಣ್ಣಲ್ಲೇ ನೆಲೆಯೂರುವಂತೆ ಮಣ್ಣನ್ನು ಸಿಂಗರಿಸುತ್ತವೆ.
  • ಜೀವಿವೈವಿಧ್ಯತೆ: ಎರೆಹುಳುಗಳು ಮಣ್ಣಲ್ಲಿ ಗುಣಮಟ್ಟದ ಆಹಾರಚಕ್ರವನ್ನು ಸೃಷ್ಟಿಸುವ ಮೂಲಕ ಮಣ್ಣಲ್ಲಿ ವೈವಿಧ್ಯಮಯ ಜೀವಿಗಳು ನೆಲೆಯೂರುವಂತೆ ಮಾಡುತ್ತವೆ.
  • ಬೇಸಾಯ: ಎರೆಹುಳುಗಳನ್ನು ಗೊಬ್ಬರದ ಉತ್ಪಾದನೆಗಾಗಿ ಬೆಳೆಸಲಾಗುತ್ತಿದೆ. ಎರೆಹುಳುಗಳು ಸೃಷ್ಟಿಸುವ ಗೊಬ್ಬರದ ಗುಣಮಟ್ಟ ಅತ್ಯುತ್ತಮ ಎಂದು ಹೆಸರು ಪಡೆದಿದೆ.

ಮಣ್ಣಿನ ಅರೋಗ್ಯ ಸ್ಥಿತಿಯನ್ನು ಪರಿಶೀಲಿಸುವಾಗ, ತಜ್ಞರು ಮಣ್ಣಲ್ಲಿ ಎರೆತಜ್ಞರು ಮಣ್ಣಿನ ಸ್ಥಿತಿಗತಿಯನ್ನು ಪರಿಶೀಲಿಸುವಾಗ, ಮಣ್ಣಲ್ಲಿ ಎರೆಹುಳುಗಳಿವೆಯೇ ಎಂದು ಮೊದಲು ಗಮನಿಸುತ್ತಾರೆ. ಮಣ್ಣಲ್ಲಿ ಎರೆಹುಳುಗಳಿದ್ದಲ್ಲಿ, ಆ ಮಣ್ಣಿನ ಗುಣಮಟ್ಟ ಚೆನ್ನಾಗಿದೆ ಎಂದೇ ಅರ್ಥ.

Source: Teacher Michael Gold

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಗ್ರಾಮಗಳಲ್ಲಿ ನೀರಿನ ಹೊಂಡ | ಚಿತ್ರದುರ್ಗ ಜಿಲ್ಲೆಯ 7 ಹಳ್ಳಿಗಳಲ್ಲಿ ವಿಶ್ವಬ್ಯಾಂಕ್ ನೆರವಿನ ಯೋಜನೆ ಅನುಷ್ಟಾನ |

ಚಿತ್ರದುರ್ಗ ಜಿಲ್ಲೆಯ 7 ಹಳ್ಳಿಗಳಲ್ಲಿ 5 ಸಾವಿರದ 171 ಹೆಕ್ಟೇರ್ ಪ್ರದೇಶದಲ್ಲಿ ಯೋಜನೆ…

14 hours ago

ಕಿಸಾನ್‌ ಸಮ್ಮಾನ್‌ ನಿಧಿಯ ಮೂಲಕ ರೈತರಿಗೆ 21,000 ಕೋಟಿ ರೂಪಾಯಿ |

ಕಿಸಾನ್‌ ಸಮ್ಮಾನ್‌ ನಿಧಿಯಿಂದ 9 ಕೋಟಿ 50 ಲಕ್ಷ  ರೈತರಿಗೆ  21 ಸಾವಿರ…

15 hours ago

ತುಮಕೂರು ಜಿಲ್ಲೆಯಲ್ಲಿ ದಾಖಲೆಯ ಹಾಲು ಉತ್ಪಾದನೆ

ತುಮಕೂರು ಜಿಲ್ಲೆಯಲ್ಲಿ 1351 ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿನಿತ್ಯ 9.40…

15 hours ago

ಕೋಲಾರದಲ್ಲಿ ಸಾವಿರಕ್ಕೂ ಅಧಿಕ ನಕಲಿ ವೈದ್ಯರ ವಿರುದ್ಧ ಪ್ರಕರಣ |

ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿನ  ಜೈವಿಕ ತ್ಯಾಜ್ಯಗಳನ್ನು ನಗರಸಭೆ ಕಸ ಹಾಗೂ ಜನನಿಬಿಡ ಪ್ರದೇಶಗಳಲ್ಲಿ…

15 hours ago

ಹೊರನಾಡು ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿ

ಚಿಕ್ಕಮಗಳೂರು ಜಿಲ್ಲೆಯ ಹೊರನಾಡಿನ ಪ್ರಸಿದ್ದ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರಲಾಗಿದೆ…

16 hours ago