ಮನೆಯ ಅಡುಗೆ ಮಾತು | ಇಡ್ಲಿ ಕಟ್ಲೇಟ್

January 17, 2026
8:07 AM
"ಉಳಿದ ಇಡ್ಲಿಯಿಂದ ಏನು ಮಾಡೋದು?” ಇಲ್ಲಿದೆ ನೋಡಿ ರೆಸಿಪಿ..

ಇಡ್ಲಿ ಕಟ್ಲೇಟ್ ಬೇಕಾಗುವ ಸಾಮಗ್ರಿಗಳು:

  • ಇಡ್ಲಿ – 3/4 ಕಪ್ (ಚೂರು ಮಾಡಿ)

  • ಈರುಳ್ಳಿ – 1 (ಚಿಕ್ಕದಾಗಿ ಕತ್ತರಿಸಿದ)

  • ಕೊತ್ತಂಬರಿ ಸೊಪ್ಪು – ಸ್ವಲ್ಪ (ಸಣ್ಣಗೆ ಕತ್ತರಿಸಿದ)

  • ಆಲೂಗಡ್ಡೆ – 1/4 ಕಪ್ (ತುರಿದ)

  • ಕಡಲೆ ಹಿಟ್ಟು – 1/2 ಕಪ್

  • ಗರಂ ಮಸಾಲಾ – 1 ಚಮಚ

  • ಕಿಚನ್ ಕಿಂಗ್ ಮಸಾಲಾ – 1 ಚಮಚ

  • ಜೀರಿಗೆ ಪುಡಿ – ಸ್ವಲ್ಪ

  • ಉಪ್ಪು – ರುಚಿಗೆ ತಕ್ಕಷ್ಟು

  • ಎಣ್ಣೆ – ಫ್ರೈ ಮಾಡಲು ಅಗತ್ಯವಷ್ಟು

ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಇಡ್ಲಿ ಚೂರು, ಈರುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ತುರಿದ ಆಲೂಗಡ್ಡೆ ಹಾಕಿ.

  2. ಇದಕ್ಕೆ ಕಡಲೆ ಹಿಟ್ಟು, ಗರಂ ಮಸಾಲಾ, ಕಿಚನ್ ಕಿಂಗ್ ಮಸಾಲಾ, ಜೀರಿಗೆ ಪುಡಿ ಹಾಗೂ ಉಪ್ಪು ಸೇರಿಸಿ.

  3. ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ, ಕಟ್ಲೇಟ್ ಶೇಪ್‌ಗೆ ತಟ್ಟಿ ತಯಾರಿಸಿ.

  4. ಕಬ್ಬಿಣದ ಕಾವಲಿಯನ್ನು ಚೆನ್ನಾಗಿ ಕಾದ ನಂತರ ಸ್ವಲ್ಪ ಎಣ್ಣೆ ಹಾಕಿ.

  5. ತಯಾರಿಸಿದ ಕಟ್ಲೇಟ್‌ಗಳನ್ನು ಕಾವಲಿಯಲ್ಲಿ ಇಟ್ಟು, ಎರಡೂ ಬದಿಯೂ ಚಿನ್ನದ ಬಣ್ಣ ಬರುವವರೆಗೆ ನಿಧಾನವಾಗಿ ಫ್ರೈ ಮಾಡಿ.

  6. ಕಟ್ಲೇಟ್‌ಗಳು ಚೆನ್ನಾಗಿ ಬೇಯಿದ ನಂತರ ತೆಗೆದು ಬಿಸಿ ಬಿಸಿಯಾಗಿ ಸರ್ವ್ ಮಾಡಿ.

ಟಿಪ್: ಟೊಮೆಟೊ ಸಾಸ್ ಅಥವಾ ಹಸಿರು ಚಟ್ನಿಯ ಜೊತೆ ಸರ್ವ್ ಮಾಡಿದರೆ ರುಚಿ ಇನ್ನಷ್ಟು ಹೆಚ್ಚುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದಿವ್ಯ ಮಹೇಶ್

ದಿವ್ಯಾ ಮಹೇಶ್ ಅವರು ಗೃಹಿಣಿ. ಅಡುಗೆಯಲ್ಲಿ ಹೊಸರುಚಿ ಅವರ ಆಸಕ್ತಿಯ ಕ್ಷೇತ್ರ. ಸೋಶಿಯಲ್‌ ಮೀಡಿಯಾಗಳಲ್ಲಿ ಹೊಸರುಚಿ ಅಡುಗೆಯ ಮೂಲಕ ಗಮನ ಸೆಳೆದವರು. ಈಗಾಗಲೇ 700 ಕ್ಕೂ ಅಧಿಕ ರಿಸಿಪಿಗಳ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ನೀಡುವ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದಾರೆ. ಸಂಗೀತ ಆಲಿಸುವುದು, ಭರತನಾಟ್ಯ, ಓದುವುದು ಇತ್ಯಾದಿ ಅವರ ಆಸಕ್ತಿಯ ವಿಷಯ.

ಇದನ್ನೂ ಓದಿ

ಅಡಿಕೆ ದರ ಇಳಿಯುತ್ತದೆ, ಕೂಲಿ ಏರುತ್ತದೆ ; ಬೆಳೆಗಾರನಿಗೆ ಉಳಿಯುವುದೇನು?
October 4, 2026
6:58 AM
by: ಪ್ರಬಂಧ ಅಂಬುತೀರ್ಥ
ಮಲೆನಾಡಿನಲ್ಲಿ ಅಡಿಕೆ ಕಷ್ಟ…!, ಬಯಲುಸೀಮೆಯಲ್ಲಿ ಅಡಿಕೆ ಇಷ್ಟು ಸುಲಭವೇ? ಕಾರಣ ತಿಳಿದರೆ ಅಚ್ಚರಿಯಾಗುತ್ತೆ!
September 27, 2026
10:34 AM
by: ಪ್ರಬಂಧ ಅಂಬುತೀರ್ಥ
ಕುಟುಂಬದ ಸೌಂದರ್ಯ ವೈಭವದಲ್ಲಲ್ಲ, ಸೌಹಾರ್ದತೆಯಲ್ಲಿ: ಸಂಬಂಧ ಉಳಿಸುವುದೇ ನಿಜವಾದ ಗೆಲುವು
September 26, 2026
7:21 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ನಾಗರಿಕ ಪ್ರಜ್ಞೆ ಎಂದರೆ ಕಾನೂನು ಪಾಲನೆ ಮಾತ್ರವಲ್ಲ – ನಮ್ಮ ನಡವಳಿಕೆಯೇ ಸಮಾಜದ ಕನ್ನಡಿ
September 26, 2026
9:36 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror