ಈ ಬಾರಿ ದೇಶದ ಜನತೆ ದಾಖಲೆ ಪ್ರಮಾಣದ ತಾಪಮಾನ ತಡೆದುಕೊಳ್ಳಲು ಸಿದ್ದರಾಗಬೇಕು. ಇದಕ್ಕೆ ಕಾರಣ ಎಲ್‌ನಿನೋ. ಈ ಎಲ್ ನಿನೊ ತಾಪಮಾನ ಬದಲಾವಣೆಗೆ ಹೇಗೆ ಕಾರಣ..? 2023-24 ರ ವರ್ಷದಲ್ಲಿ ಭಾರತ(India) ಸೇರಿದಂತೆ ಜಗತ್ತಿನ ಹಲವು ದೇಶಗಳು ಭೀಕರ ಬರವನ್ನು(Drought) ಎದುರಿಸಿವೆ. ಕೆಲವು ಪ್ರದೇಶಗಳಲ್ಲಿ ನಿರೀಕ್ಷೆಗೂ ಮೀರಿ ಮಳೆಯಾಗಿ(Rain) ಅನಾಹುತ ಸಂಭವಿಸಿದರೆ, ಭಾರತದ ಬಹುತೇಕ ರಾಜ್ಯಗಳು ಮಳೆ ಕೊರತೆಯನ್ನು(Rain Scarcity) ಅನುಭವಿಸಿದವು. ಈಗ ಬೇಸಿಗೆ(Summer) ಶುರುವಾಗಿದ್ದು ದಾಖಲೆಯ ತಾಪಮಾನ(Temperature) ಮತ್ತಷ್ಟು ಸಮಸ್ಯೆಗಳನ್ನು ತಂದೊಡ್ಡಿದೆ. ದಾಖಲೆಗಳ ಪ್ರಕಾರ ಕಳೆದ 100 ವರ್ಷಗಳಲ್ಲಿ, ಭಾರತವು 18 ಬಾರಿ ಬರಗಾಲಕ್ಕೆ ತುತ್ತಾಗಿದೆ ಇದರಲ್ಲಿ 13 ಬಾರಿ ಬರಗಾಲಕ್ಕೆ ಎಲ್ ನಿನೊ ಕಾರಣವಾಗಿದೆ.
ಎಲ್ ನಿನೋ ಎಂದರೇನು?: ಪೆಸಿಫಿಕ್ ಮಹಾಸಾಗರದ ಮೇಲ್ಮೈ ಸಾಮಾನ್ಯಕ್ಕಿಂತ ಹೆಚ್ಚು ಬೆಚ್ಚಗಾಗುವುದನ್ನು ಎಲ್ ನಿನೊ ಎಂದು ಕರೆಯಲಾಗುತ್ತದೆ. ಇದು ಜಾಗತಿಕ ಹವಾಮಾನದ ಮೇಲೆ ಪರಿಣಾಮ ಬೀರುತ್ತದೆ, ತಾಪಮಾನ ಹೆಚ್ಚಳಕ್ಕೆ ಕಾರಣವಾಗುತ್ತದೆ. ಎಲ್ ನಿನೋ ಪರಿಣಾಮದಿಂದ ಮಳೆ ಕೊರತೆ ಉಂಟಾಗುತ್ತದೆ, ವಾತಾವರಣದಲ್ಲಿ ಶುಷ್ಕತೆ ಹೆಚ್ಚಾಗುತ್ತದೆ. ಜಾಗತಿಕವಾಗಿ ಮಳೆ ಪ್ರಮಾಣದ ಮೇಳೆ ಪರಿಣಾಮ ಬೀರುತ್ತದೆ. ಇದರಿಂದ ಅನಾವೃಷ್ಠಿಗೆ ಕಾರಣವಾಗುತ್ತದೆ. ಎಲ್ ನಿನೋ ಉತ್ತರ ಗೋಳಾರ್ಧದಲ್ಲಿ ಶರತ್ಕಾಲದಿಂದ ಬೇಸಿಗೆಯ ಅವಧಿಯಲ್ಲಿ ಸ್ವಾಭಾವಿಕವಾಗಿ ಸಂಭವಿಸುತ್ತದೆ, ಸಾಮಾನ್ಯವಾಗಿ ಪ್ರತಿ 2-7 ವರ್ಷಗಳಿಗೊಮ್ಮೆ ಎಲ್ ನಿನೋ ಸಂಭವಿಸುತ್ತದೆ ಮತ್ತು ಸುಮಾರು 9 ರಿಂದ 12 ತಿಂಗಳವರೆಗೆ ಇರುತ್ತದೆ, ಆದರೂ ಕೆಲವೊಮ್ಮೆ ಇದು ಸತತವಾಗಿ ಎರಡು ವರ್ಷಗಳವರೆಗೆ ಇರುತ್ತದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.
ಕಡಿಮೆಯಾಗುತ್ತಿದೆ ಎಲ್ ನಿನೋ : ಕಳೆದ ವರ್ಷ ಮಳೆ ಕಡಿಮೆಯಾಗಲು ಕಾರಣವಾಗಿದ್ದ ಎಲ್ ನಿನೋ ಸದ್ಯ ದುರ್ಬಲಗೊಳ್ಳುತ್ತಿದೆ ಆದರೆ ಇದು ಈ ಬೇಸಿಗೆಯಲ್ಲಿ ಶಾಖವನ್ನು ಹೆಚ್ಚಿಸುವ ಹವಾಮಾನದ ಮೇಲೆ ಪರಿಣಾಮ ಬೀರುತ್ತದೆ. ಮೇ ತಿಂಗಳವರೆಗೆ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನವನ್ನು ನಿರೀಕ್ಷಿಸಲಾಗಿದೆ. ಏಪ್ರಿಲ್ ನಂತರ ಮೇ – ಜುಲೈ ನಡುವೆ ತಟಸ್ಥವಾಗಿರುತ್ತದೆ ಎಂದು ಹೇಳಲಾಗಿದೆ. ಎಲ್ ನಿನೋ ಕಡಿಮೆಯಾದ ನಂತರ ಲಾ ನಿನಾ ಅಭಿವೃದ್ಧಿಗೊಳ್ಳುವ ಸಾಧ್ಯತೆಗಳಿವೆ. ಎಲ್ ನಿನೊಗೆ ಲಾ ನಿನಾ ಎಂಬ ಹಿಮ್ಮುಖ ಸ್ಥಿತಿ ಇದೆ. ಪೆಸಿಫಿಕ್ ಮಹಾಸಾಗರವು ಸಾಮಾನ್ಯಕ್ಕಿಂತ ತಂಪಾಗಿರುವಾಗ ಅದನ್ನು ಲಾ ನಿನಾ ಎಂದು ಕರೆಯಲಾಗುತ್ತದೆ.
ಈ ಬಾರಿ ವಾಡಿಕೆಗಿಂತ ಉತ್ತಮ ಮಳೆ : ಈ ವರ್ಷ ಮುಂಗಾರು ಉತ್ತಮವಾಗಿರಲಿದೆ ಎಂದು ಅಂದಾಜಿಸಲಾಗಿದೆ. ಎನ್ ನಿನೋ ಪ್ರಭಾವ ಕಡಿಮೆಯಾದ ಬಳಿಕ ದೇಶಾದ್ಯಂತ ವಾಡಿಕೆಯಂತೆ ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಕೂಡ ಜೂನ್ ವೇಳೆಗೆ ಉತ್ತಮ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ.
– ಅಂತರ್ಜಾಲ ಮಾಹಿತಿ
ಅಡಿಕೆ ಹಾಳೆತಟ್ಟೆ ಅಮೇರಿಕಾದಲ್ಲಿ ನಿಷೇಧ ಹೇರಲಾಗುತ್ತಿದೆ. ಹೀಗಾಗಿ ಭಾರತದಿಂದ ಸದ್ಯ ಅಮೇರಿಕಾಕ್ಕೆ ಹಾಳೆತಟ್ಟೆ…
ಈಗಿನ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡಾಗ ಕಂಡು ಬರುವ ವಿಚಾರವೆಂದರೆ ಅಡಿಕೆಗೆ ಈಗ…
ಗಾಳಿಯ ಯದ್ವಾತದ್ವಾ ಚಲನೆಯ ಕಾರಣದಿಂದ ನಿರ್ದಿಷ್ಟ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ ಅಂತ ಹೇಳಲು ಸಾಧ್ಯವಿಲ್ಲ.…
ಅರಣ್ಯ ಉಳಿದರಷ್ಟೇ ಮಾನವ ಉಳಿಯಲು ಸಾಧ್ಯ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ…
ಮುಂಬರುವ ಜೂನ್ 30 ರೊಳಗಾಗಿ ಜಿಲ್ಲೆಯಲ್ಲಿ ಬಾಕಿ ಇರುವ ಕಂದಾಯ ಗ್ರಾಮಗಳ ರಚನೆಗೆ…
ಹೆಚ್ಚಿನ ವೈಯಕ್ತಿಕ ಸಲಹೆಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490