Advertisement
Opinion

ಕರಾವಳಿಗೆ ವಾಡಿಕೆ ಮಳೆ, ಮಲೆನಾಡು ದಾಟದ ಮುಂಗಾರು ಮೋಡ..!

Share

ಎಲ್ ನಿನೋ ಪರಿಣಾಮದಿಂದ ಈ ಬಾರಿ ಮಳೆ ಕಡಿಮೆಯಾಗಬಹುದು ಎಂಬ ಮುನ್ಸೂಚನೆಗಳ ನಡುವೆಯೂ ಕರಾವಳಿ ಜಿಲ್ಲೆಗಳಲ್ಲಿ ವಾಡಿಕೆಯಷ್ಟು ಮಳೆ ಬಂದಿರುವುದು ಹವಾಮಾನ ಲೆಕ್ಕಾಚಾರದಲ್ಲಿ ಕುತೂಹಲ ಮೂಡಿಸಿದೆ. ಆದರೆ ಕರಾವಳಿಗೆ ಬಂದ ಮಳೆ ಮಲೆನಾಡು ದಾಟಿ ಹೆಚ್ಚು ಒಳನಾಡಿಗೆ ಸಾಗಲಿಲ್ಲ. ದುರ್ಬಲ ಗಾಳಿ ಮತ್ತು ಮಧ್ಯಮ ಮಟ್ಟದ ಮೋಡಗಳ ಚಲನೆಯೇ ಇದಕ್ಕೆ ಪ್ರಮುಖ ಕಾರಣ ಎಂದು ಹವಾಮಾನ ವಿಶ್ಲೇಷಕ ರಘುರಾಮ ಕಂಪದಕೋಡಿ ವಿಶ್ಲೇಷಿಸಿದ್ದಾರೆ.

ಎಲ್ ನಿನೋ ಈ ಸಲ ಮಳೆ ಇಲ್ಲ ಅಂತ ವರದಿಗಳು ಇದ್ದರೂ ಎಲ್ಲವೂ ಲೆಕ್ಕಾಚಾರ ತಪ್ಪಿ ವಾಡಿಕೆ ಮಳೆ ಬಂತು ಅಂತ ಕರಾವಳಿ ಜಿಲ್ಲೆಯವರು ಹೇಳುತ್ತಿದ್ದಾರೆ. ಆದರೇ ಕರಾವಳಿಗೆ ಮಾತ್ರ ಮಳೆ ಬಂದಿದೆ ಮಲೆನಾಡಿಗಿಂತ ಮುಂದೆ ಮಳೆ ಹೋಗಲಿಲ್ಲ. ದುರ್ಬಲ ಗಾಳಿ,ಮಧ್ಯಮ ಸ್ಥರದ ಮೋಡದ ಕಾರಣದಿಂದ ಒಳನಾಡಿಗೆ ಮಳೆ ಕಡಿಮೆಯಾಗಿದೆ. ಇದಕ್ಕೆ ಕಾರಣ ಎಲ್ ನಿನೋ.

ಕರಾವಳಿ ಜಿಲ್ಲೆಗಳಲ್ಲಿ ಸುಳ್ಯ ಬೆಳ್ತಂಗಡಿ ತಾಲ್ಲೂಕು ಹೊರತುಪಡಿಸಿ ಉಳಿದ ತಾಲ್ಲೂಕುಗಳಲ್ಲಿ ಇಂದಿಗೂ 26-30% ಮಳೆ ಕೊರತೆ ಇದೆ. ಆಗಸ್ಟ್ ತಿಂಗಳು ವಾಡಿಕೆ ಮಳೆ ಬಂದರೂ ಜೂನ್ ಜುಲೈ ಕೊರತೆ ಆಗಿತ್ತು. ಐಎಂಡಿ ಮೇಯಲ್ಲಿ ಕರಾವಳಿ ಭಾಗದಲ್ಲಿ ಮಳೆಯಾಗಬಹುದು. ಒಳನಾಡು ಜಿಲ್ಲೆಗಳಲ್ಲಿ ಕೊರತೆ ಆಗಬಹುದು ಅಂತ ಹೇಳಿತ್ತು.

ಜೂನ್ ತಿಂಗಳಿನಲ್ಲಿ ಮುಂಗಾರು ಮೋಡವೇ ಬಾರದಿದ್ದರೂ ಜುಲೈ ಆಗಸ್ಟ್ ತಿಂಗಳಿನಲ್ಲಿ ಬಂಗಾಳಕೊಲ್ಲಿಯ ಹವಾಮಾನ ವೈಪರೀತ್ಯಗಳಿಂದ ಮತ್ತು ಪೆಸಿಫಿಕ್ ಸಾಗರದ ಸತತ ಚಂಡಮಾರುತಗಳ ಪ್ರಭಾವದಿಂದಾಗಿ ಈ ವರ್ಷ ಭಾರತದಲ್ಲಿ ಸಾಧಾರಣ ಮಳೆ ಬಂತು. ಉತ್ತರ ಭಾರತದಲ್ಲಿ ಸರ್ಕ್ಯುಲೇಷನ್ ಆದಾಗ ಮೋಡವು ನೈರುತ್ಯ – ಈಶಾನ್ಯ ದಿಕ್ಕಿಗೆ ವಿರುದ್ಧವಾಗಿ ವಾಯುವ್ಯ – ಅಗ್ನೇಯ ದಿಕ್ಕಿಗೆ ಚಲಿಸುವ ಕಾರಣ ಕಾಸರಗೋಡು ಗಡಿಭಾಗಗಳು ಸುಳ್ಯ ಪುತ್ತೂರು ತಾಲ್ಲೂಕಿಗೆ ಅಧಿಕ ಮಳೆ ಬಂದಿದೆ.

ಎಲ್ ನಿನೋ ಹೇಳಿದ್ರೆ ಕೆಲವೆಡೆ ಮಳೆ ಇಲ್ಲದೆ ಬರಗಾಲವೂ ಬರುತ್ತದೆ ಕೆಲವೆಡೆ ಭಾರಿ ಮಳೆಯೂ ಬರುತ್ತದೆ. ಅಂದರೇ ಸ್ವಾಭಾವಿಕ ಮಳೆ ಕಡಿಮೆ ಅಂತ ಅರ್ಥ ಹೊರತು ಮಳೆಯೇ ಇಲ್ಲ ಅಂತ ಅಲ್ಲ. ಎಲ್ ನಿನೋ ಅಂದರೇ ಕಾರಣದಿಂದ ಭಾರತದಲ್ಲಿ ದುರ್ಬಲ ಮತ್ತು ಅಸ್ವಾಭಾವಿಕ ಗಾಳಿಯ ಚಲನೆಯಿಂದ ಮಳೆಯ ಅಸಮರ್ಪಕ ಹಂಚಿಕೆ ಆಗುತ್ತದೆ ಅಂತ ಅರ್ಥ. ಎಲ್ ನಿನೋ ಮುಗಿದಿಲ್ಲ ನವೆಂಬರ್ ತಿಂಗಳು ಗರಿಷ್ಠ ಮಟ್ಟ ತಲುಪಿ ನಂತರ ಕಡಿಮೆ ಆಗುತ್ತಾ ಹೋದರೂ ಮುಂದಿನ ಮೇ ತನಕ ಪ್ರಭಾವ ಇರಬಹುದು.

ಹವಾಮಾನ ವೈಪರೀತ್ಯಗಳಿಂದ ನಮಗೆ ಸ್ವಲ್ಪ ಮಳೆಯೂ ಮುಂದುವರೆಯಬಹುದು. ಹಾಗಾಗಿ ಎಲ್ ನಿನೋ ಇದ್ದರೂ ಬೇಸಿಗೆಯಲ್ಲಿಯೂ ಮಳೆ ಬರಬಹುದು ಅಂತ ಪಾಸಿಟಿವ್ ಥಿಂಕಿಂಗ್ ಮಾಡೋಣ.

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

Despite concerns over El Niño reducing monsoon rainfall, coastal Karnataka has received near-normal rainfall in August, although much of the rain has not progressed beyond the Western Ghats into the Malnad and interior districts. Weak winds, mid-level cloud conditions and changing weather systems have resulted in an uneven distribution of rainfall. El Niño does not mean that rainfall will completely disappear; rather, it can contribute to weaker or irregular atmospheric circulation and an uneven distribution of rainfall, with some regions experiencing deficits while others may receive heavy rain.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 06-10-2026 | ಕರ್ನಾಟಕದಲ್ಲಿ ಮಳೆ ಎಲ್ಲೆಲ್ಲಿ? ಅ.9 ರಿಂದ ಕರಾವಳಿಯಲ್ಲಿ ಮಳೆ ಹೆಚ್ಚಾಗುತ್ತಾ?

ಕರಾವಳಿ ಹಾಗೂ ಮಲೆನಾಡಿನ ಕೆಲವೆಡೆ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆಯಿದ್ದು, ಅ.9…

9 minutes ago

ರಾಜ್ಯದಲ್ಲಿ ನೈಋತ್ಯ ಮುಂಗಾರು ಸಕ್ರಿಯ ; ಕರಾವಳಿ, ಮಲೆನಾಡು ಸೇರಿದಂತೆ ಹಲವೆಡೆ ಭಾರೀ ಮಳೆ

ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಸಕ್ರಿಯವಾಗಿದ್ದು, ಕರಾವಳಿ ಮತ್ತು ಮಲೆನಾಡು ಸೇರಿದಂತೆ ಹಲವೆಡೆ ಉತ್ತಮ…

7 hours ago

ರಾಜ್ಯದಲ್ಲಿ ವಿದ್ಯುತ್ ಲೋಡ್‌ಶೆಡ್ಡಿಂಗ್ ಇಲ್ಲ: ಇಂಧನ ಸಚಿವ ಕೆ.ಜೆ.ಜಾರ್ಜ್

ರಾಜ್ಯದಲ್ಲಿ ಸದ್ಯ ಯಾವುದೇ ರೀತಿಯ ವಿದ್ಯುತ್ ಲೋಡ್‌ಶೆಡ್ಡಿಂಗ್ ಇಲ್ಲ ಎಂದು ಇಂಧನ ಸಚಿವ…

7 hours ago

ನವೋದಯ ವಿದ್ಯಾಲಯದ 9, 11ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ – ಅ.15 ಕೊನೆಯ ದಿನ

2027-28ನೇ ಸಾಲಿನಲ್ಲಿ ನವೋದಯ ವಿದ್ಯಾಲಯಗಳ 9 ಮತ್ತು 11ನೇ ತರಗತಿಯ ಖಾಲಿ ಸ್ಥಾನಗಳಿಗೆ…

7 hours ago

1973 ರ ಅಡಿಕೆ ಬಿಕ್ಕಟ್ಟು 2026ಕ್ಕೆ ನೀಡುವ ಎಚ್ಚರಿಕೆ ಏನು..?

1973ರ ಅಡಿಕೆ ಮಾರುಕಟ್ಟೆ ಬಿಕ್ಕಟ್ಟು ಉತ್ಪಾದನೆ ಹೆಚ್ಚಳಕ್ಕೆ ತಕ್ಕಂತೆ ಮಾರುಕಟ್ಟೆ ಹೀರಿಕೊಳ್ಳುವ ಸಾಮರ್ಥ್ಯವೂ…

17 hours ago

ಹವಾಮಾನ ವರದಿ | 05-10-2026 | ಅರಬ್ಬಿ ಸಮುದ್ರದ ಮೇಲ್ಮೈ ಸುಳಿಗಾಳಿಯಿಂದ ಮಳೆ – ಅ.6 ರ ಬಳಿಕ ಏನಾಗಲಿದೆ?

ಅರಬ್ಬಿ ಸಮುದ್ರದ ಉಡುಪಿ–ದಕ್ಷಿಣ ಕನ್ನಡ ಕರಾವಳಿ ಸಮೀಪ ರೂಪುಗೊಂಡಿರುವ ಮೇಲ್ಮೈ ಸುಳಿಗಾಳಿಯಿಂದ ಕರಾವಳಿ,…

1 day ago