ಸಹಕಾರಿ ಸಂಸ್ಥೆಗಳ ಮೂಲಕ ಹಲಸಿನ ಮೌಲ್ಯ ವರ್ಧನೆ ಸಾಧ್ಯವೇ?

June 19, 2025
11:42 AM
ಗ್ರಾಮೀಣ ಮತ್ತು ಸಣ್ಣ ನಗರ ಪ್ರದೇಶಗಳಲ್ಲಿ ಹಲಸಿನ ಮೌಲ್ಯ ವರ್ಧನೆ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಇದರೊಂದಿಗೆ ಹಲಸು ಮೇಳಗಳು ಹೆಚ್ಚಾಗುತ್ತಿವೆ.ಆದರೆ ಲಭ್ಯವಿರುವ ಹಲಸಿನ ಪ್ರಮಾಣಕ್ಕೆ ಹೋಲಿಸಿದರೆ ಈ ಪ್ರಯತ್ನಗಳು ಸಾಲದು.ಇಲ್ಲಿ ಇನ್ನಷ್ಟು ಯೋಜನಾಬದ್ಧವಾಗಿ ಕಾರ್ಯಗಳಾಗಬೇಕು.

1970 ರ ದಶಕ ಮತ್ತು ಅದಕ್ಕಿಂತ ಮೊದಲಿನ ಸ್ಥಿತಿಯನ್ನು ಒಮ್ಮೆ ಈಗಿನ ಯುವ ಜನಾಂಗ ಹಿರಿಯರಲ್ಲಿ ಕೇಳಿ ನೋಡಿದಾಗ ಹಲಸಿನ ಮೌಲ್ಯ ಏನೆಂಬುದರ ಬಗ್ಗೆ ಅರಿವಾಗಬಹುದು. ಆಗ ಅಕ್ಕಿ ಸರಿಯಾಗಿ ದೊರಕದೆ ದಿನದ ಮೂರೂ ಹೊತ್ತು ಹಲಸಿನ ಖಾದ್ಯಗಳದ್ದೆ ಕಾರುಬಾರು. ಗದ್ದೆ ಬೇಸಾಯಕ್ಕೆ ಇಲ್ಲವೇ ಕೃಷಿ ಕೆಲಸಗಳಿಗೆ ಬರುತ್ತಿದ್ದ ಕಾರ್ಮಿಕರು ಮುಂಜಾನೆ ಬಂದು ಹಲಸನ್ನು ಕೊಯಿದು ಅದರ ಸೊಳೆಗಳನ್ನು ಬಿಡಿಸಿ,ಅವರ ಬಳಕೆಗೆ ಸ್ಥಳೀಯವಾಗಿ ಹೇಳುವ ರೆಚ್ಚೆಯನ್ನು ಕೊಂಡು ಹೋಗಿ ಅದರ ಮೂಲಕ ಜೀವನ ಸಾಗಿಸುತ್ತಿದ್ದರು. ಯಾವಾಗ ಹಸಿರು ಕ್ರಾಂತಿ ಆಯಿತೋ ಆಗ ಹಲಸಿನ ಮಹತ್ವ ಕಡಿಮೆ ಆಗಲಾರಂಭಿಸಿತು.ಕ್ರಮೇಣ ನಗರೀಕರಣ,ಹೆಚ್ಚಿದ ಶಿಕ್ಷಣ ಸೌಲಭ್ಯ,ಸರಕಾರದ ಸವಲತ್ತು,ಹೆಚ್ಚಿದ ಆದಾಯ,ವಿಭಕ್ತ ಕುಟುಂಬ,ವಿಷಪೂರಿತ ಆಹಾರ ಸೇವನೆ,ಮಾರುಕಟ್ಟೆಯಲ್ಲಿ ಲಭ್ಯವಿರುವ ತರಕಾರಿಗಳು ಮತ್ತು ಹಣ್ಣು ಹಂಪಲು ಇವೆಲ್ಲಾ ಹಂತ ಹಂತವಾಗಿ ಹಲಸಿನ ಬಗ್ಗೆ ತಾತ್ಸಾರ ಮನೋಭಾವ ಬೆಳೆಸಿತು.

Advertisement

ಇದರೊಂದಿಗೆ ಅಡಿಕೆ ಬೆಳೆಗೆ ದೊರಕಿದ ಮಹತ್ವ ಮತ್ತು ಅದರಿಂದ ಲಭ್ಯವಾದ ಆದಾಯ ,ಅಲ್ಲದೆ ಹೆಚ್ಚಾದ ಕಾರ್ಮಿಕ ವೇತನ ಇವೆಲ್ಲಾ ಹಲಸಿನ ಮೌಲ್ಯವನ್ನು ಕೆಳಕ್ಕಿಳಿಸಿತು.ಹೀಗಿದ್ದರೂ ಇತ್ತೀಚಿನ ವರ್ಷಗಳಲ್ಲಿ ಇದಕ್ಕೆ ಪುನಃ ಮೌಲ್ಯ ದೊರಕಿಸಿ ಕೊಡುವ ಪ್ರಯತ್ನ ನಮ್ಮಲ್ಲಿ ಹಲಸು ಮೇಳಗಳ ಮೂಲಕ ಆಗುತ್ತಿದೆ.ಆದರೆ ಇದಿಷ್ಟೇ ಸಾಲದು.ಹಲಸಿಗೆ ನಿಜವಾದ ಮೌಲ್ಯ ದೊರಕಬೇಕಿದ್ದಾರೆ ಇಲ್ಲಿ ಇನ್ನಷ್ಟು ಪ್ರಯತ್ನಗಳಾಗಬೇಕು.

ಭಾರತ ವಿಶ್ವದಲ್ಲಿ ಇದರ ಉತ್ಪಾದನೆಯ ದೃಷ್ಟಿಯಿಂದ ಮೊದಲನೇ ಸ್ಥಾನದಲ್ಲಿದೆ. ಉತ್ಪಾದನಾ ರಾಜ್ಯಗಳ ಪೈಕಿ ಕೇರಳ ಮೊದಲನೇ ಸ್ಥಾನದಲ್ಲಿದೆ. ಕರ್ನಾಟಕ ಆರನೇ ಸ್ಥಾನದಲ್ಲಿದೆ. ಒಟ್ಟಾಗಿ ದೇಶದಲ್ಲಿ ಅಂದಾಜು ಸುಮಾರು 3,392.16 ಸಾವಿರ ಟನ್ ಉತ್ಪಾದನೆ ಆಗುತ್ತಿದೆ ಎಂದು ಸರಕಾರದ ಅಂಕಿ ಅಂಶಗಳು ಹೇಳುತ್ತಿವೆ. ಕರ್ನಾಟಕದಲ್ಲಿ ಹಲಸಿನ ಉತ್ಪಾದನೆ ಸರಕಾರದ ಅಂಕಿ ಅಂಶಗಳ ಪ್ರಕಾರ ಸುಮಾರು ಐವತ್ತು ಸಾವಿರ ಟನ್. ಇಲ್ಲಿ ಇದರ ಉತ್ಪಾದನೆಯಲ್ಲಿ ತುಮಕೂರು ಮೊದಲನೇ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಆಗಿದ್ದರೆ, ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಉತ್ತರ ಕನ್ನಡ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಉಡುಪಿಗಳಿವೆ.

ಒಂದು ಅಂದಾಜಿನ ಪ್ರಕಾರ ನಮ್ಮಲ್ಲಿ ಉತ್ಪಾದನೆ ಆಗುತ್ತಿರುವ ಹಲಸಿನ ಕಾಯಿಯ ಶೇಕಡಾ ಇಪ್ಪತೈದು ಮಾತ್ರ ಖಾದ್ಯ ಮತ್ತು ಮೌಲ್ಯ ವರ್ಧಿತ ಉತ್ಪನ್ನಗಳ ತಯಾರಿಗೆ ಬಳಕೆ ಮಾಡುತ್ತಾರೆ.ಇದರಲ್ಲಿ ಸಿಂಹ ಪಾಲು ತುಮಕೂರಿನದು ಆಗಿದೆ.ಹಾಗಿದ್ದಲ್ಲಿ ಇನ್ನುಳಿದ ಪ್ರಮಾಣ ಹಾಳಾಗಿ ಹೋಗುತ್ತಿದೆ. ಇದನ್ನು ತಪ್ಪಿಸಿ ಇದರ ಬಳಕೆಯನ್ನು ಹೆಚ್ಚಿಸುವ ಪ್ರಯತ್ನಗಳು ನಮ್ಮಲ್ಲಾಗಬೇಕು.ಇತ್ತೀಚಿನ ವರ್ಷಗಳಲ್ಲಿ ಈ ಪ್ರಯತ್ನದ ಮೊದಲ ಹೆಜ್ಜೆಯಾಗಿ ಗ್ರಾಮೀಣ ಮತ್ತು ಸಣ್ಣ ನಗರ ಪ್ರದೇಶಗಳಲ್ಲಿ ಹಲಸಿನ ಮೌಲ್ಯ ವರ್ಧನೆ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಇದರೊಂದಿಗೆ ಹಲಸು ಮೇಳಗಳು ಹೆಚ್ಚಾಗುತ್ತಿವೆ.ಆದರೆ ಲಭ್ಯವಿರುವ ಹಲಸಿನ ಪ್ರಮಾಣಕ್ಕೆ ಹೋಲಿಸಿದರೆ ಈ ಪ್ರಯತ್ನಗಳು ಸಾಲದು.ಇಲ್ಲಿ ಇನ್ನಷ್ಟು ಯೋಜನಾಬದ್ಧವಾಗಿ ಕಾರ್ಯಗಳಾಗಬೇಕು.

ಸಮಸ್ಯೆಗಳು:

Advertisement
  1. ಹಲಸಿನ ಕೊಯ್ಲು.ಇದರ ಬಳಕೆಗೆ ತೊಡಕಾಗುವ ಮೊದಲನೇ ಸಮಸ್ಯೆ ಇದು.ಕಾರ್ಮಿಕರ ಅಭಾವ ಮತ್ತು ವಯೋವೃದ್ಧ ಕೃಷಿಕರು ಹಳ್ಳಿಯಲ್ಲಿ ಇರುವ ಕಾರಣ ಕೊಯ್ಲು ಒಂದು ಅಸಾಧ್ಯ ಸಂಗತಿಯಾಗಿದೆ.
  2. ಇದೊಂದು ಶೀಘ್ರ ಹಾಳಾಗುವ ಉತ್ಪನ್ನ ಆದ್ದರಿಂದ ಮಾರುಕಟ್ಟೆಗೆ ಸಾಗಿಸುವುದು ದೊಡ್ಡ ಸಮಸ್ಯೆ.ಇದರೊಂದಿಗೆ ಸಾಗಣೆ ವೆಚ್ಚ ಕೂಡ ಅಧಿಕ.
  3. ಕಾಯಿ ಮತ್ತು ಹಣ್ಣಿನ ಸಂಸ್ಕರಣೆ.ಮೌಲ್ಯ ವರ್ಧಿತ ಉತ್ಪನ್ನಗಳ ತಯಾರಿಕಾ ಘಟಕಗಳಿಗೆ ಸಂಸ್ಕರಿಸುವುದು ಮತ್ತು ಸಾಗಿಸುವುದು ದೊಡ್ಡ ಸಮಸ್ಯೆ.
  4. ಕೊಯ್ಲು ಮತ್ತು ಸಂಸ್ಕರಣೆಗೆ ತಗಲುವ ವೆಚ್ಚ ಮತ್ತು ದೊರಕುವ ಆದಾಯ ಇವೆರಡರ ನಡುವಿನ ಅಂತರ ಕಡಿಮೆ ಆಗಿದ್ದು,ಇದು ಕೃಷಿಕನಿಗೆ ಇತರ ಬೆಳೆಗಳಿಗೆ ಹೋಲಿಸಿದರೆ ಆಕರ್ಷಣೀಯ ಆಗದೆ ಇರುವುದು.

 ಆಗಬೇಕಾದ್ದೇನು…? : ಎಳೆ ಹಲಸು,ಕಾಯಿ ಹಲಸು ಮತ್ತು ಹಣ್ಣು ಹಲಸಿಗೆ ಮಾರುಕಟ್ಟೆ ಅಗಾದವಾಗಿದ್ದು, ಈ ನಿಟ್ಟಿನಲ್ಲಿ ಇಲ್ಲಿಗೆ ಹಲವು ಪರಿಹಾರೋಪಾಯ ಗಳು ಅನಿವಾರ್ಯವಾಗಿದೆ.ಇದಕ್ಕಾಗಿ ಕೆಳಗೆ ಹೆಸರಿಸಿದ ಅಂಶಗಳು ಪೂರಕ ಆಗಬಲ್ಲವು…

  1. ಗ್ರಾಮೀಣ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಕಾರಿ ಸಂಸ್ಥೆಗಳು ಹಲಸಿನ ಮೌಲ್ಯ ವರ್ಧನೆಯತ್ತ ದೃಷ್ಟಿ ಹಾಯಿಸುವುದು.ಹೆಚ್ಚಾಗಿ ಇದರ ಸದಸ್ಯರೆಲ್ಲ ಹಲಸು ಬೆಳೆಗಾರರು ಆಗಿದ್ದು,ಈ ಸಂಸ್ಥೆಗಳು ಸಂಚಾರಿ ವಾಹನಗಳ ಮೂಲಕ ಹಲಸಿನ ಸಂಗ್ರಹ ಮಾಡಿ ಸಂಸ್ಥೆಯಲ್ಲೇ ಮೌಲ್ಯ ವರ್ಧನೆ ಗೆ ಒತ್ತು ನೀಡಬೇಕು.ಸಂಸ್ಥೆ ಮೂಲಕ ಕೊಯ್ಲನ್ನು ಮಾಡಿಸಿ ದರ ನಿಗದಿಪಡಿಸಬೇಕು.ಈ ರೀತಿಯ ವ್ಯವಸ್ಥೆ ಆದಲ್ಲಿ ಹಾಳಾಗುವ ಸಾಧ್ಯತೆ ಕಡಿಮೆ.ಇದು ಹೆಚ್ಚಿನ ಉದ್ಯೋವಕಾಶ ಸೃಷ್ಟಿಸಿ ಗ್ರಾಮದ ಆದಾಯದ ಹೆಚ್ಚಳಕ್ಕೆ ದಾರಿ ಮಾಡಿಕೊಡುತ್ತದೆ.
  2. ಹಲಸಿನ ಮೌಲ್ಯ ವರ್ಧನೆ ದೃಷ್ಟಿಯಿಂದ ವಿಟ್ಲದ ಪಿಂಗಾರ ಸಂಸ್ಥೆ ಗಣನೀಯ ಸಾಧನೆ ಮಾಡಿದ್ದು ಇದು ಇತರ ಘಟಕಗಳಿಗೆ ಮಾದರಿ ಆಗಬಹುದು. ಇದೇ ರೀತಿ ನಮ್ಮಲ್ಲಿ ಹಲವು ಗೃಹ ಉದ್ದಿಮೆಗಳು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಇವುಗಳೂ ಯಶಸ್ಸು ಕಂಡು ಕೊಳ್ಳುತ್ತಿವೆ.
  3.  ಉತ್ಪನ್ನವೊಂದು ಮಾರುಕಟ್ಟೆಯಲ್ಲಿ ಯಶಸ್ಸು ಗಳಿಸಬೇಕಿದ್ದಾರೆ ಅದರ ಪ್ಯಾಕಟಿಂಗ್ ಆಕರ್ಷಣೆಯಿಂದ ಕೂಡಿರಬೇಕು.ಇದರೊಂದಿಗೆ ಗ್ರಾಹಕ ಬಯಸುವ ರೀತಿಯಲ್ಲಿರಬೇಕು. ಉದಾಹರಣೆಗೆ, ಲೇಸ್‌ ನಂತೆ 5 ,10 ರುಪಾಯಿಗಳ ಪ್ಯಾಕೆಟುಗಳು.ಇಂತಹಾ ಪ್ಯಾಕೆಟುಗಳಿಗೆ ಶಾಲೆ, ಕಾಲೇಜು ಪರಿಸರದಲ್ಲಿ ಹೆಚ್ಚಿನ ಬೇಡಿಕೆ ಬರುತ್ತದೆ.ಈಗ ಸಾಮಾನ್ಯವಾಗಿ ಮಾರಾಟ ಆಗುವ ಹಲಸಿನ ಉತ್ಪನ್ನಗಳ ಪ್ಯಾಕೆಟ್ ಈ ರೀತಿಯದ್ದಲ್ಲ.ಇಂತಹ ಪ್ಯಾಕೆಟ್ಗಳಿಗೆ ಸ್ಥಳೀಯ ಗ್ರಾಹಕರು ದೊರೆಯಬಹುದು.ಆದರೆ ಮಾರುಕಟ್ಟೆ ವಿಸ್ತರಣೆ ಇದರಿಂದ ಅಸಾಧ್ಯ.
  4. ಮಹಾನಗರಗಳ ಮಾಲ್,ಹೋಟೆಲ್,ಗೂಡಂಗಡಿ ಇಲ್ಲೆಲ್ಲಾ ಈ ಉತ್ಪನ್ನಗಳಿಗೆ ಖಚಿತವಾದ ಬೇಡಿಕೆ ಇದ್ದು,ಈ ನಿಟ್ಟಿನಲ್ಲಿ ಆಕರ್ಷಣೀಯ,ಬೇರೆ ಬೇರೆ ತೂಕದ ಪ್ಯಾಕೆಟುಗಳ ಪೂರೈಕೆ ಆದಲ್ಲಿ ಮಾರಾಟ ಹೆಚ್ಚಾಗಬಹುದು.
  5. ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಖಾರದ ಚಿಪ್ಸ್ ಹೆಚ್ಚು ಮಾರಾಟ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರಯತ್ನ ಆಗಬೇಕು.
  6. ಹೋಟೆಲ್ ಗಳಲ್ಲಿ ಹಪ್ಪಳಕ್ಕೂ ಬೇಡಿಕೆ ಕಂಡು ಕೊಳ್ಳಬಹುದು.ಸಂಜೆ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವ ಸಂಚಾರಿ ಅಂಗಡಿಗಳು ಇವಕ್ಕೆ ಹೆಚ್ಚಿನ ಬೇಡಿಕೆ ಸಲ್ಲಿಸಬಹುದು.ಇದಕ್ಕೆ ಪೂರಕವಾದ ಮಾರುಕಟ್ಟೆ ತಂತ್ರಜ್ಞಾನ ಆಗಬೇಕಿದೆ.
  7. ಉಪ್ಪಲ್ಲಿ ಹಾಕಿದ ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳೂ ಮೇಲೆ ತಿಳಿಸಿದ ಕೇಂದ್ರಗಳಲ್ಲಿ ಬೇಡಿಕೆ ಸಲ್ಲಿಸಬಹುದು.
  8. ನಾನು ಕಂಡುಕೊಂಡಂತೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ,ಲಾಲ್ಬಾಗ್,ಮುಂತಾದ ಪ್ರದೇಶಗಳ ಕ್ಯಾಂಟೀನ್ ಗಳಲ್ಲಿ ಇಂತಹ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದೆ.
  9. ಹೆಚ್ಚು ಹೆಚ್ಚು ಹಲಸು ಮೇಳಗಳ ಆಯೋಜನೆ ಆದಲ್ಲಿ ಅಧಿಕ ಪ್ರಚಾರ ದೊರಕಿ ಬೇಡಿಕೆ ಹೆಚ್ಚಾಗಬಹುದು.ಈ ಮೇಳಗಳು ಕಾಲೇಜುಗಳಲ್ಲಿ,ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಮತ್ತು ಮಹಾ ನಗರಗಳಲ್ಲಿ ನಡೆಯಬೇಕು.ಇದಕ್ಕಾಗಿ ತೋಟಗಾರಿಕಾ ಇಲಾಖೆಯ ಸಹಾಯ ಪಡಕೊಳ್ಳುವುದು.
  10. ಹಲಸಿನ ಮಹತ್ವವನ್ನು ಮತ್ತು ಇಲ್ಲಿ ಹಾಳಾಗುತ್ತಿರುವ ಪ್ರಮಾಣ,ಮತ್ತು ಅದರಿಂದ ದೊರಕಬಹುದಾದ ಮೌಲ್ಯವನ್ನು ಸರಕಾರದ ಇಲಾಖೆಗಳಿಗೆ ಮನದಟ್ಟು ಮಾಡಿ ಮೌಲ್ಯ ವರ್ಧನೆ ಘಟಕಗಳ ಹೆಚ್ಚಳಕ್ಕೆ ಸಬ್ಸಿಡಿ,ಪ್ರೋತ್ಸಾಹ ಇತ್ಯಾದಿಗಳನ್ನು ಕೇಳಿಕೊಳ್ಳುವುದು.
  11. ಹಲಸು ಬೆಳೆಗಾರರ ಸಂಘಟನೆ ಮಾಡಿ ಅದರ ಮೂಲಕ ಇದರ ನಾನಾ ವಿಚಾರಗಳ ಬಗ್ಗೆ ಅಧ್ಯಯನ ಮಾಡುವುದು.

ಹಲಸಿಗೆ ಮತ್ತು ಅದರ ಉತ್ಪನ್ನಗಳಿಗೆ ಆಂತರಿಕ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆ ಇದ್ದು,ಇದರ ಸದುಪಯೋಗ ಪಡಕೊಳ್ಳುವ ಪ್ರಯತ್ನಗಳು ಇಂದು ಆಗಬೇಕಿದೆ. ಈ ನಿಟ್ಟಿನಲ್ಲಿ ಇಲ್ಲಿಗಿಂದು ಕೊಯ್ಲೊತ್ತರ ತಂತ್ರಜ್ಞಾನದ ಅಭಿವೃದ್ಧಿ ಆಗಬೇಕು.ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆ ಆಗಬೇಕಿದ್ದಲ್ಲಿ ಪ್ರಚಾರ, ಗ್ರಾಹಕ ಸ್ನೇಹಿ ಗುಣಮಟ್ಟದ ಪ್ಯಾಕೆಟ್,ಹಿತಮಿತವಾದ ಬೆಲೆ,ನಿರಂತರ ಪೂರೈಕೆ,ವೈವಿದ್ಯಮಯ ಉತ್ಪನ್ನಗಳೂ ಇವೆಲ್ಲಾ ಬೇಕು.ಇದಕ್ಕಾಗಿ ಒಂದು ದೂರ ದೃಷ್ಟಿಯ ಯೋಜನೆ ಆದಲ್ಲಿ ಯಶಸ್ಸು ಖಚಿತ.ಭಾರತದಲ್ಲಿ ಇಂದು ಹಲಸಿನ ಉದ್ದಿಮೆಯಲ್ಲಿ ಖಾಸಗಿ ಉದ್ದಿಮೆದಾರರು ಇದ್ದು,ಅವರು ಆಂತರಿಕ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಉತ್ಪನ್ನಗಳ ಮಾರಾಟ ಮಾಡುತ್ತಾರೆ.ಈ ರೀತಿಯ ಪ್ರಯತ್ನಕ್ಕೆ ನಮ್ಮ ಸಹಕಾರಿ ಸಂಸ್ಥೆಗಳು ಇಳಿಯಬೇಕಿದೆ. ಇದಾದಲ್ಲಿ ಸಂಸ್ಥೆಯ ಬೆಳವಣಿಗೆ ಒಂದಿಗೆ ಬೆಳೆಗಾರರ ಅಭಿವೃದ್ದಿ ಆಗಿ ಈಗ ಹಾಳಾಗುತ್ತಿರುವ ಹಲಸಿನ ಸದ್ಬಳಕೆ ಆಗಬಹುದು.

 

Absolutely, jackfruit value addition can definitely be boosted through cooperatives. Picture this: a group of farmers coming together, each bringing their expertise and resources. They can pool their produce and invest in processing units to make everything from jackfruit chips to canned jackfruit or even jackfruit flour. By sharing the costs and benefits, they can minimize risks and maximize profits. Cooperatives can help in accessing better market linkages and more negotiating power. Members can exchange knowledge and learn new techniques for improving quality and productivity. Plus, they can leverage group branding to attract more customers. Training programs can be organized, focusing on hygiene and quality standards for processed products. They can also work collectively on marketing strategies to create brand awareness and demand. Overall, it’s a win-win, with better income for farmers and more jackfruit products for consumers.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

ಡಾ|ವಿಘ್ನಶ್ವರ ಭಟ್ ವರ್ಮುಡಿ ಅವರು ಕೃಷಿಕರು. ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದವರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನ ಸಂಸ್ಥೆಯದ ಪೆರ್ಲದ ನಲಂದಾ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಅರ್ಥಶಾಸ್ತ್ರಜ್ಞರಾಗಿ ಗುರುತಿಸಿಕೊಂಡಿದ್ದಾರೆ. ಹಲವು ಸಂಶೋಧನಾ ಬರಹಗಳು ಪ್ರಕಟವಾಗಿದೆ. ಅಡಿಕೆ ಮಾರುಕಟ್ಟೆ ಬಗ್ಗೆ ಅಧಿಕೃತವಾಗಿ ಮಾತನಾಡುವ ವ್ಯಕ್ತಿಯಾಗಿದ್ದಾರೆ. ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಅಡಿಕೆಯ ಬಗ್ಗೆ ವಿವಿಧ ಬರಹಗಳನ್ನು ಪ್ರಕಟಿಸಿದ್ದಾರೆ.

ಇದನ್ನೂ ಓದಿ

ಮೆಕ್ಕೆಜೋಳ ಸಮಾವೇಶ | ಕನಿಷ್ಠ ಬೆಂಬಲ ಬೆಲೆ ಮೂಲಕ ರೈತರ ಹಿತರಕ್ಷಣೆ
July 7, 2025
9:17 PM
by: The Rural Mirror ಸುದ್ದಿಜಾಲ
ತೆಂಗು ಬೆಳೆ ಬಾಧಿಸುವ ಕೀಟಗಳನ್ನು ಹತೋಟಿಗೆ ತರಲು ಕ್ರಮ
July 7, 2025
11:01 AM
by: The Rural Mirror ಸುದ್ದಿಜಾಲ
2047 ರ ವೇಳೆಗೆ ಕೇಂದ್ರ ಸರ್ಕಾರದಿಂದ 32 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ
July 6, 2025
10:40 AM
by: ದ ರೂರಲ್ ಮಿರರ್.ಕಾಂ
ಬದುಕು ಪುರಾಣ | ದಾನಕ್ಕೆ ಬಂದ ಮಾನ 
July 6, 2025
8:00 AM
by: ನಾ.ಕಾರಂತ ಪೆರಾಜೆ

You cannot copy content of this page - Copyright -The Rural Mirror

Join Our Group