ಅಡಿಕೆ ಹಳದಿಎಲೆ ರೋಗ ಹಾಗೂ ಎಲೆಚುಕ್ಕಿ ರೋಗದ ಬಗ್ಗೆ ಅಡಿಕೆ ಬೆಳೆಗಾರರಿಗೆ ಆತಂಕ ಇದೆ.ಈ ಬಗ್ಗೆ ಅಧ್ಯಯನಕ್ಕೆ ಸೂಕ್ತವಾದ ಪ್ರಯೋಗಾಲಯಗಳು ಸಿಪಿಸಿಆರ್‌ಐಯಲ್ಲಿ ಕೂಡಾ ಇಲ್ಲ. ಇದಕ್ಕಾಗಿ ಸಂಶೋಧನೆಗೆ ಕ್ಯಾಂಪ್ಕೋ ಸಹಾಯ ಮಾಡಿದರೆ ಉತ್ತಮ, ಇದಕ್ಕಾಗಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.
ಕ್ಯಾಂಪ್ಕೋ ಮಹಾಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಸಂಜೀವ ಮಠಂದೂರು, ಕ್ಯಾಂಪ್ಕೋ ಸಂಸ್ಥೆಯು 12 ಕೋಟಿ ನಷ್ಟ ಹೊಂದಿದೆ. ಈ ಬಾರಿ ಅಡಿಕೆ ಧಾರಣೆ ಸ್ಥಿರತೆ ಇದ್ದರೂ, ಅಡಿಕೆ ಖರೀದಿಯಾಗಿದ್ದರೂ ನಷ್ಟ ಆಗಿರುವುದಕ್ಕೆ ಎಚ್ಚರಿಕೆ ವಹಿಸಬೇಕು. ವಾರಣಾಸಿ ಸುಬ್ರಾಯ ಭಟ್ಟರು ಅಡಿಕೆ ಧಾರಣೆ ಕುಸಿತವಾದ ಸಂದರ್ಭದಲ್ಲಿ ಕ್ಯಾಂಪ್ಕೋ ಸ್ಥಾಪನೆ ಮಾಡಿ ಬೆಳೆಗಾರರಿಗೆ ಧೈರ್ಯ ತುಂಬಿದ್ದರು ಎಂದರು. ಈಗ ಸಂಸ್ಥೆಯ ನಿರ್ದೇಶಕರನ್ನು ಹೆಚ್ಚು ತೊಡಗಿಸಿಕೊಳ್ಳಬೇಕು ಎಂದರು.
ಅಡಿಕೆ ಧಾರಣೆಯ ಜೊತೆ ಇದೀಗ ಅಡಿಕೆ ಬೆಳೆಗಾರರಿಗೆ ಆತಂಕವಾಗಿರುವುದು ಎಲೆಚುಕ್ಕಿ ರೋಗ ಹಾಗೂ ಹಳದಿ ಎಲೆ ರೋಗದ ಸಮಸ್ಯೆ. ಹೀಗಾಗಿ ಇದೀಗ ಸಂಶೋಧನೆಗೆ ಕ್ಯಾಂಪ್ಕೋ ಸಹಾಯ ಮಾಡಿದರೆ ಉತ್ತಮ. ಸೂಕ್ತ ಪರಿಹಾರ ಕ್ರಮಗಳು ಆಗಬೇಕು ಎಂದು ಸಂಜೀವ ಮಠಂದೂರು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಅಡಿಕೆ ಹಳದಿ ಎಲೆ ರೋಗಕ್ಕೆ ಸಂಬಂಧಿಸಿ ಸೂಕ್ತ ಪರಿಹಾರ ಕ್ರಮ ಆಗಬೇಕು ಎಂದು ಅಡಿಕೆ ಬೆಳೆಯುವ ಪ್ರದೇಶದ ಎಲ್ಲಾ ಶಾಸಕರುಗಳಿಗೆ ಈ ಹಿಂದೆ ಮನವಿ ಮಾಡಿದ್ದೆವು. ಈ ಹಿಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ 25 ಕೋಟಿ ರೂಪಾಯಿ ಇಂದಿಗೂ ಸರಿಯಾಗಿ ಬಳಕೆಯಾಗಿಲ್ಲ. ಆದರೆ ಈ ಭಾಗದ ಶಾಸಕರುಗಳು ಈ ಅನುದಾನ ಬಳಕೆಗೆ ನೆರವು ಮಾಡಿಲ್ಲ ಎಂಬ ನೋವಿದೆ ಎಂದರು. ಕ್ಯಾಂಪ್ಕೋದಿಂದಲೇ ನೆರವು ಮಾಡಲು ಸಾಧ್ಯವಿಲ್ಲ. ಕ್ಯಾಂಪ್ಕೋ ಸಂಸ್ಥೆಯಲ್ಲಿ ಪ್ರಯೋಗಾಲಯ ಇಲ್ಲ. ಏಕಾಏಕಿ ಸ್ಥಾಪನೆಗೂ ಸಾಧ್ಯವಿಲ್ಲ. ಹಣ ಕೊಡುವುದು ಆಡಳಿತ ಮಂಡಳಿ. ಎಲ್ಲಾ ಮಾಡುವುದು ಕ್ಯಾಂಪ್ಕೋಗೂ ಸಾಧ್ಯವಿಲ್ಲ.ಕ್ಯಾಂಪ್ಕೋ ಸೂಕ್ತವಾದ ಜಿಎಸ್ ಟಿ ಪಾವತಿ ಮಾಡಿಯೇ ಅಡಿಕೆ ಖರೀದಿ, ಮಾರಾಟ ಮಾಡುತ್ತದೆ. ಈ ಜಿಎಸ್‌ಟಿ ಸರ್ಕಾರಕ್ಕೆ ಪಾವತಿಯಾಗುತ್ತದೆ. ಇದಕ್ಕಾಗಿ ಸರ್ಕಾರದ ವತಿಯಿಂದಲೇ ಅಡಿಕೆಗೆ ನೆರವು ನೀಡಬೇಕಿದೆ, ಇದಕ್ಕೆ ಪ್ರಯತ್ನ ನಡೆಸಬೇಕು ಎಂದರು.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…