ಅಯ್ಯೋ.. ವಿಪರೀತ ಬಿಸಿಲು ಒಮ್ಮೆ ಮಳೆಯಾಗಲಿ…. ಯಾವಾಗ ಬರುತ್ತಂತೆ ಮಳೆ… ಹೀಗೆಲ್ಲಾ ಮಾತನಾಡುತ್ತಿರಬೇಕಾದರೆ ಕಳೆದ 3 ದಿನಗಳಿಂದ ಸತತವಾಗಿ ಕರಾವಳಿ ಜಿಲ್ಲೆಯಲ್ಲೂ 40 ಡಿಗ್ರಿ ತಾಪಮಾನ ತಲಪಿದೆ. ದ ಕ ಜಿಲ್ಲೆಯಲ್ಲಿ ಬುಧವಾರ ಬಹುತೇಕ ತಾಲೂಕುಗಳಲ್ಲಿ ತಾಪಮಾನ 40 ಡಿಗ್ರಿ ಕಂಡುಬಂದಿತ್ತು.
ಕಳೆದ ಒಂದು ವಾರದಿಂದ ಮಳೆಯ ನಿರೀಕ್ಷೆ ಇತ್ತು. ಹವಾಮಾನ ಮುನ್ಸೂಚನೆ ಪ್ರಕಾರ ಕರಾವಳಿ ಜಿಲ್ಲೆ ಅದರಲ್ಲೂ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ಎಂದಿನಂತೆ ಮಳೆಯ ನಿರೀಕ್ಷೆ ಇತ್ತು. ಆದರೆ ಎರಡು ದಿನದ ಹವಾಮಾನದ ಬದಲಾವಣೆಯ ಕಾರಣದಿಂದ ಮಳೆ ದೂರವಾಯ್ತು. ಈಗ ಕರಾವಳಿ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ತಾಪಮಾನ 40 ಡಿಗ್ರಿ ದಾಖಲಾಗಿದೆ. ವಿಶೇಷ ಎಂದರೆ ಮಂಗಳೂರು ಸೇರಿದಂತೆ ಸಮುದ್ರ ತೀರದ ಪ್ರದೇಶಗಳಲ್ಲಿ ತಾಪಮಾನ ಕಡಿಮೆ ಇತ್ತು. ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ತಾಪಮಾನ ವಿಪರೀತ ಏರಿಕೆಯಾಗಿದೆ. ಕಳೆದ ಎರಡು ವರ್ಷಗಳ ಹಿಂದಿನವರೆಗೂ ತಾಪಮಾನ 35-36 ಡಿಗ್ರಿ ದಾಖಲಾದರೆ ಮಳೆ ಖಚಿತವಾಗಿತ್ತು. ಅದಕ್ಕೂ ಹಿಂದೆ 33-35 ಡಿಗ್ರಿ ತಾಪಮಾನ ದಾಖಲಾದರೆ ಆ ದಿನ ಮಳೆ ನಿಶ್ಚಿತವಾಗಿತ್ತು. ಈಗ ಬದಲಾದ ಹವಾಮಾನದ ಕಾರಣದಿಂದ ವಿಪರೀತ ತಾಪಮಾನ ದಾಖಲಾಗುತ್ತಿದೆ. ಬೆಳಗ್ಗೆ 11 ಗಂಟೆಯ ವೇಳೆಗೇ 36 ಡಿಗ್ರಿ ತಾಪಮಾನ ದಾಖಲಾಗಿ ನಂತರ ಏರಿಕೆಯಾಗುತ್ತಾ ಸಾಗುತ್ತದೆ. ಇದೇ ವೇಳೆ ವಾತಾವರಣದ ಶುಷ್ಕತೆ ಕೂಡಾ ಕಡಿಮೆಯಾಗುತ್ತಿದೆ.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…