Advertisement
ಸುದ್ದಿಗಳು

ವಿಕಲಚೇತನರಿಗೆ ಸರ್ಕಾರದಿಂದ ಲಭ್ಯವಿರುವ ಸೌಲಭ್ಯಗಳು

Share

ಕರ್ನಾಟಕ ಸರ್ಕಾರದ ವಿಕಲಚೇತನರು ಮತ್ತು ಹಿರಿಯ ನಾಗರಿಕ ಸಬಲೀಕರಣ ಇಲಾಖೆಯು “ಸಾಧನೆ” ಯೋಜನೆಯ ಮೂಲಕ ವಿಕಲಚೇತನ ವಿದ್ಯಾರ್ಥಿಗಳನ್ನು ಬೆಂಬಲಿಸುವ ದೃಷ್ಟಿಯಿಂದ ಅವರ ಶಿಕ್ಷಣಕ್ಕೆ ಅಗತ್ಯ ಬೆಂಬಲ ನೀಡುವುದರ ಜೊತೆಗೆ ಸಮಗ್ರ ಶಿಕ್ಷಣ ಚೌಕಟ್ಟಿನಡಿ ಕಾರ್ಯನಿರ್ವಹಿಸುವ ಈ ಉಪಕ್ರಮವು ದೃಷ್ಟಿ, ಶ್ರವಣ ಮತ್ತು ದೈಹಿಕ ವಿಕಲತೆಗಳಿರುವ ವಿದ್ಯಾರ್ಥಿಗಳಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುತ್ತದೆ.

Advertisement
Advertisement

ಯಾವೆಲ್ಲ ಸೌಲಭ್ಯಗಳು:

  • ಶುಲ್ಕ ಮರುಪಾವತಿ: SSLC ನಂತರದ ಕೋರ್ಸ್ ಗಳಲ್ಲಿ ಪ್ರವೇಶ ಶುಲ್ಕ, ಟ್ಯೂಷನ್ ಫೀಸ್, ಪ್ರಯೋಗಾಲಯ ಮತ್ತು ಲೈಬ್ರರಿ ಶುಲ್ಕಗಳನ್ನು ಸಂಪೂರ್ಣ ಮರುಪಾವತಿ ಮಾಡಲಾಗುತ್ತದೆ.
  • ಆಧುನಿಕ ಸಾಧನಗಳು: ಟಾಕಿಂಗ್ ಲ್ಯಾಪ್ ಟಾಪ್ ಗಳು, ಬ್ರೈಲ್ ಕಿಟ್ ಗಳು, ಶ್ರವಣ ಸಾಧನಗಳು ಮತ್ತು ಕೃತಕ ಅಂಗಗಳು ಉಚಿತವಾಗಿ ವಿತರಣೆ. ಕೇಂದ್ರ ಸಹಯೋಗದೊಂದಿಗೆ ಇದು ವಿಸ್ತರಣೆಗೊಂಡಿದೆ.
  • ಮೂಲಸೌಕರ್ಯ: ವಿಶೇಷ ಶಾಲೆಗಳಲ್ಲಿ ಶಿಕ್ಷಕರ ವೇತನ ಮತ್ತು ಸೌಲಭ್ಯಗಳ ಅಭಿವೃದ್ಧಿ.
  • ಇತರೆ, ಸೌಲಭ್ಯಗಳು: ಉಚಿತ ಬಸ್ ಪಾಸ್, ಪ್ರತಿಭಾ ಪುರಸ್ಕಾರ ಮತ್ತು ಪುನರ್ವಸತಿ ಸಾಧನಗಳು.
  • ವಿದ್ಯಾರ್ಥಿ ವೇತನ: 1ನೇ ತರಗತಿಯಿಂದ ಸ್ನಾತಕೋತ್ತರ ಮಟ್ಟದವರೆಗೆ ವಾರ್ಷಿಕ ಹಣಕಾಸು ನೆರವು. ಮೆರಿಟ್ ಆಧಾರದಲ್ಲಿ ಹೆಚ್ಚಿನ ಮೊತ್ತ ಸಿಗುತ್ತದೆ.

ಬೇಕಾಗುವ ದಾಖಲೆಗಳು:
• ವಿಕಲಚೇತನ ಗುರುತಿನ ಚೀಟಿ
• ಆಧಾರ್ ಕಾರ್ಡ್
• ಜಾತಿ ಮತ್ತು ಆದಾಯ ಪ್ರಮಾಣಪತ್ರ
• ಬ್ಯಾಂಕ್ ಪಾಸ್ ಬುಕ್ ಪ್ರತಿ
• ಶೈಕ್ಷಣಿಕ ಪ್ರಮಾಣಪತ್ರಗಳು ಮತ್ತು ಹಿಂದಿನ ಅಂಕಪಟ್ಟಿ
• ಪಾಸ್ ಪೋರ್ ಸೈಜ್ ಫೋಟೋ
• ಕುಟುಂಬದ ಸಂಖ್ಯೆ ಅಥವಾ ಕಾಲೇಜು ನೋಂದಣಿ ಸಂಖ್ಯೆ
ಅರ್ಜಿ ಸಲ್ಲಿಸುವ ವಿಧಾನ:
• ಅಧಿಕೃತ ವೆಬ್ ಸೈಟ್ ನಲ್ಲಿ ಇಲಾಖೆಯ ಸೇವೆಗಳ ವಿಭಾಗ ಇದರಲ್ಲಿ ವಿಕಲಚೇತನರ ಸಬಲೀಕರಣ ಇಲಾಖೆ ಆಯ್ಕೆಮಾಡಿ. ಅಗತ್ಯ ದಾಖಲೆಗಳಲ್ಲಿ ಅಪ್ ಲೋಡ್ ಮಾಡುವುದು.  ಅರ್ಜಿಯ ಕೊನೆಯ ದಿನಾಂಕ: 31.112026

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಅಂಕಗಳಾಚೆಗೂ ಒಂದು ಲೋಕವಿದೆ : ಇದು ಮಕ್ಕಳಿಗೆ ಬದುಕನ್ನು ಕಲಿಸುವ ಶಿಕ್ಷಣ

ಶಾಲೆಯ ಹಂತದಲ್ಲಿ ಮಕ್ಕಳಿಗೆ ಕಲಿಸಬೇಕಾದ ಶಿಕ್ಷಣ ಏನು..?.  ಈ ಪ್ರಶ್ನೆಗೆ ಹಲವರದು ಹಲವು…

6 hours ago

ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ | ದ.ಕ ದಲ್ಲಿ “ಚೆಸ್ ಇನ್ ಸ್ಕೂಲ್” ಆರಂಭ | ಗ್ರಾಮೀಣ ಮಕ್ಕಳಿಗೆ ಬೌದ್ಧಿಕ ಅವಕಾಶ

ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಚೆಸ್ ಆಟವನ್ನು ಪರಿಚಯಿಸುವ “ಚೆಸ್…

13 hours ago

ಕೊಳೆ ರೋಗ ನಿಯಂತ್ರಣಕ್ಕೂ ತೆರಿಗೆ…? ಮೈಲುತುತ್ತಿಗೆ ಸುಂಕ – ಅಡಿಕೆ ರೈತನಿಗೆ ಮತ್ತೊಂದು ಹೊರೆ..!

ಅಡಿಕೆ ಬೆಳೆಗಾರ ಇಂದು ಕೇವಲ ಬೆಳೆಗಾರನಲ್ಲ. ಅವನು ಹವಾಮಾನ ಬದಲಾವಣೆ, ರೋಗದ ಸಮಸ್ಯೆ,…

20 hours ago

ದೇಶದಲ್ಲಿ ರಬಿ ಋತು ಬಿತ್ತನೆ ದಾಖಲೆ ಹೆಚ್ಚಳ | 660.48 ಲಕ್ಷ ಹೆಕ್ಟೇರ್‌ಗೆ ಏರಿದ ಒಟ್ಟು ವಿಸ್ತೀರ್ಣ

ಕೇಂದ್ರ ಕೃಷಿ ಸಚಿವಾಲಯವು ಜನವರಿ 23, 2026ರವರೆಗಿನ ರಬಿ ಬೆಳೆ(ಚಳಿಗಾಲದ ಬಿತ್ತನೆ) ಬಿತ್ತನೆಯ…

20 hours ago

ಯೂರಿಯಾ ಮಾರಾಟ 3.8% ಏರಿಕೆ | ದೇಶೀಯ ಉತ್ಪಾದನೆ ಕುಸಿತ, ಆಮದು 85% ಹೆಚ್ಚಳ

ದೇಶದಲ್ಲಿನ ಕೃಷಿ ಬೆಳೆಗಳಿಗೆ ಅಗತ್ಯವಾದ ಪೋಷಕಾಂಶ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ರಸಗೊಬ್ಬರ ವಲಯವು ದೇಶೀಯ…

20 hours ago

ಶುದ್ಧ ಹಿಮಾಲಯವೂ ಸುರಕ್ಷಿತವಲ್ಲ..! ಮರುಭೂಮಿ ಧೂಳಿನೊಂದಿಗೆ ಹರಡುವ ರೋಗಕಾರಕಗಳು

ಹಿಮಾಲಯವನ್ನು ಶುದ್ಧ ಮತ್ತು ಸುರಕ್ಷಿತ ವಾತಾವರಣದ ಪ್ರತೀಕವೆಂದುಕೊಂಡಿದ್ದರೂ, ಜಾಗತಿಕ ಹವಾಮಾನ ಬದಲಾವಣೆ ಹಾಗೂ…

21 hours ago