ಒಂದೇ ಕುಟುಂಬದ ಮೂವರ ಮೃತ್ಯು | ತರಕಾರಿಗೆ ಸಿಂಪಡಿಸಿದ್ದ ಕ್ರಿಮಿನಾಶಕ ಜೀವಕ್ಕೇ ಕುತ್ತಾಯಿತೇ ?

July 22, 2025
9:52 PM

ರಾತ್ರಿ ಊಟ ಮಾಡಿ ಮಲಗಿದ್ದ ಒಂದೇ ಕುಟುಂಬದ ಮೂವರು ಹೊಟ್ಟೆ ನೋವಿನಿಂದ ಸಾವನಪ್ಪಿದ  ಘಟನೆ ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಕೆ. ತಿಮ್ಮಾಪುರದಲ್ಲಿ ನಡೆದಿದೆ. ಅಸ್ವಸ್ಥಗೊಂಡ 6 ಮಂದಿಯ ಪೈಕಿ ಮೂವರಿಗೆ ಚಿಕಿತ್ಸೆ ಮುಂದುವರೆದಿದೆ.

ಬೆಂಗಳೂರಿನಲ್ಲಿ ವಾಸವಿದ್ದ ರಮೇಶ್ ಕುಟುಂಬ 4 ದಿನಗಳ ಹಿಂದೆ ರಾಯಚೂರಿನ ಸ್ವಗ್ರಾಮಕ್ಕೆ ಮರಳಿತ್ತು. ಸೋಮವಾರ ಮನೆಯ ಯಜಮಾನ ಹೊಲದಲ್ಲಿ ತೊಗರಿಬೆಳೆಗೆ ಕೀಟನಾಶಕ ಸಿಂಪಡಿಸಿದ್ದರು. ರೈತ ಕುಟುಂಬದ ಇವರು ಹತ್ತಿ ಹಾಗೂ ತೊಗರಿ ಬೆಳೆಯುತ್ತಾರೆ. ತೋಟದ ಅಂಚಿನಲ್ಲಿ ತರಕಾರಿ ಕೃಷಿಯನ್ನೂ ಮಾಡುತ್ತಿದ್ದರು.  ಸೋಮವಾರ ರಾತ್ರಿ  ತಮ್ಮದೇ ಹೊಲದಲ್ಲಿ ಬೆಳೆದಿರುವ ತರಕಾರಿಯನ್ನು ತಂದು ಪಲ್ಯ, ಸಾರು ಮಾಡಿದ್ದರು. ಊಟದ ಬಳಿಕ  ರಾತ್ರಿ ಕುಟುಂಬ ಮಲಗಿತ್ತು. ತಡ ರಾತ್ರಿ ಕುಟುಂಬದ ಎಲ್ಲಾ ಸದಸ್ಯರು ಹೊಟ್ಟೆನೋವಿನಿಂದ ಬಳಲಿದ್ದರು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ ರಮೇಶ್(35), ಪುತ್ರಿ ನಾಗಮ್ಮ(8) , ದೀಪಾ(6) ಮೃತಪಟ್ಟಿದ್ದಾರೆ. ಉಳಿದವರಿಗೆ ಚಿಕಿತ್ಸೆ ಮುಂದುವರಿಯುತ್ತಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಕ್ಕಳ ಆಟದ ಹಿಂದೆ ಅಡಗಿರುವ ಅಪಾಯ ಗೊತ್ತಾ? ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಇರಲಿ ಎಚ್ಚರಿಕೆ
April 3, 2026
9:24 PM
by: ಮಹೇಶ್ ಪುಚ್ಚಪ್ಪಾಡಿ
ಹವಾಮಾನ ವರದಿ | 03-04-2026 | ಕರ್ನಾಟಕದಲ್ಲಿ ಗುಡುಗು-ಮಳೆಯ ಸರಣಿ | ಎ.5 ರಿಂದ ವಿರಾಮ, 10 ರಿಂದ ಮಳೆ ವಾಪಸ್..!
April 3, 2026
4:02 PM
by: ಸಾಯಿಶೇಖರ್ ಕರಿಕಳ
ಅಡಿಕೆ ಮಾರುಕಟ್ಟೆ ಜಿಗಿತ | ಮಂಗಳೂರು ಹೊಸ ಚಾಲಿ ₹500 ದಾಟಿತು – ಏಪ್ರಿಲ್‌ನಲ್ಲಿ ಮತ್ತಷ್ಟು ಏರಿಕೆ ಸೂಚನೆ!
April 3, 2026
11:59 AM
by: ದ ರೂರಲ್ ಮಿರರ್.ಕಾಂ
ರಸ್ತೆ ಬದಿ ಕಸ ಎಸೆದ್ರೆ ಜಾಗ್ರತೆ..! ದಂಡ ಕೊಡ್ಲಿಲ್ಲ ಅಂದ್ರೆ FIR ಫಿಕ್ಸ್..!
April 3, 2026
8:00 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror