ಸಿನೆಮಾ(Cinema) ನಟರ(Actor) ಬಗ್ಗೆ ಅಭಿಮಾನ(Fan) ಇಟ್ಕೊಳ್ಳೋದು ಒಳ್ಳೇದೇ..ಹಾಗಂತ ಅದು ಹುಚ್ಚಾಟ ಆಗಬಾರದು. ಸಿನೆಮಾ ನಟರೂ ಕೂಡಾ ನಮ್ಮಂಗೆ ಮನುಷ್ಯರೇ(Human Beings) ಅಲ್ವೇ? ಅವರ ಸಿನೆಮಾ ಬಂದಾಗ ಸಿನೆಮಾ ಮಂದಿರಕ್ಕೆ(Theatre) ಹೋಗಿ ನೋಡಿ ಚಪ್ಪಾಳೆ(Claps), ಶಿಳ್ಳೆ ಹೊಡೀರಿ ಸಾಕು..ಅದು ಬಿಟ್ಟು ಅದು ಇದು ಅಂತ ಹುಚ್ಚಾಟ ಮಾಡೋದು ತರವಲ್ಲ. ಈ ವಿಷಯದಲ್ಲಿ ಉಡುಪಿ(Udupi) ಮತ್ತು ಮಂಗಳೂರಿಗರು(Manglore) ಬೆಸ್ಟ್..ಯಾವನೇ ಸ್ಟಾರ್(Star) ಬರಲಿ ಇಲ್ಲಿ..ಆ ತರಹ ಹುಚ್ಚಾಟ ಯಾವತ್ತೂ ಮಾಡಲ್ಲ. ಯಾರಾದರೂ ಸ್ಟಾರ್ ಇಲ್ಲಿಗೆ ಬಂದ್ರೂ ಇಲ್ಲಿನವರು ಅಷ್ಟೊಂದು ತಲೆ ಕೆಡಿಸಿಕೊಳ್ಳಲ್ಲ. ಯಶ್(Yash) ಬಂದಿದ್ದಾರೆ..ದರ್ಶನ್(Darshan) ಬಂದಿದ್ದಾರೆ..ಸುದೀಪ್(Sudeep) ಬಂದಿದ್ದಾರೆ..ಅಂದ್ರೂ..ಇಲ್ಲಿನವರು, ಓ ಹೌದಾ..ಸರಿ ಬಿಡು..ನಂಗೆ ನಂದೇ ಕೆಲಸ ಜಾಸ್ತಿ ಇದೆ..ಅವರನ್ನು ನೋಡೋಕೆ ಯಾವನು ಹೋಗ್ತಾನೆ ಅನ್ನೋ ಮನಸ್ಥಿತಿ ಇಲ್ಲಿಯವರದ್ದು.
ಅದಕ್ಕೆ ಯಾರೂ ಇಲ್ಲಿ ತಮ್ಮ ಸಿನೆಮಾ ಪ್ರೊಮೋಟ್ ಮಾಡೋಕೆ ಬರಲ್ಲ..ಅವರಿಗೂ ಗೊತ್ತು ಇಲ್ಲಿ ಯಾವುದೇ ಸಿನೆಮಾ ಜಾಸ್ತಿ ದಿನ ನಿಲ್ಲಲ್ಲ. ಉಡುಪಿ ಮಂಗಳೂರಿನಲ್ಲಿ ಯಾವುದಾದರೂ ಸಿನೆಮಾ ಜಾಸ್ತಿ ದಿನ ನಿಂತು ಅಂತ ಅಂದ್ರೆ ಆ ಸಿನೆಮಾ ಅಷ್ಟು ಚೆನ್ನಾಗಿದೆ ಅನ್ಕೋಬಹುದು. ಆ ಸಿನೆಮಾ ಸೂಪರ್ ಡೂಪರ್ ಹಿಟ್ ಅಂತ ಹೇಳಬಹುದು. ಇಲ್ಲಿನವರ ಟೇಸ್ಟೇ ಅಂತಾದ್ದು. ಯಾವುದೋ ಕಾಂಜಿ ಪೀಂಜಿ ಸಿನೆಮಾಗಳನ್ನು ನೋಡೋಕೆ ಹೋಗಲ್ಲ. ಇಲ್ಲಿನವರ ಹತ್ರ ಸಮಯ ಇಲ್ಲ ಅಂತ ಅಲ್ಲ..ತುಳು ನಾಟಕ, ಯಕ್ಷಗಾನ ಇದ್ರೆ ಕಿಕ್ಕಿರಿದು ತುಂಬ್ಕೋತಾರೆ.. ನಾಟಕ ನೋಡುವ ಆ ಮೂರು ಗಂಟೆ ಮೂತ್ರ ಬಂದ್ರೂ ಎದ್ದು ಹೋಗಲ್ಲ…ಅಂತಹ ಪ್ರೇಕ್ಷಕರಿವರು. ಕಿರುಚಾಡೋದು..ಬೊಬ್ಬೆ ಹೊಡೆಯೋದು..ನೋ ಚಾನ್ಸ್..ಸಭ್ಯ ಪ್ರೇಕ್ಷಕರು… ಹಾಸ್ಯಕ್ಕೆ ಇಲ್ಲಿ ಪ್ರಾಧಾನ್ಯತೆ. ಕಾಂಜಿ ಪೀಂಜಿ ಸೊಂಟದ ಕೆಳಗಿನ ಹಾಸ್ಯ ಇಲ್ಲಿ ನಡೆಯಲ್ಲ. ರಂಗಭೂಮಿಯನ್ನು ಎತ್ತಿ ಎದೆಯಲ್ಲಿಟ್ಟುಕೊಂಡ ಪ್ರಬುದ್ಧ ಪ್ರೇಕ್ಷಕರಿವರು. ಹಾಗಾಗಿಯೇ ಉಡುಪಿ ಮಂಗಳೂರಿನಲ್ಲಿ ಇರುವಷ್ಟು ನಾಟಕ ತಂಡಗಳು ಪ್ರಾಯಶ: ಎಲ್ಲೂ ಇರಲಿಕ್ಕಿಲ್ಲ.
ಕೆಲ ನಾಟಕಗಳು ಅಸಂಬದ್ಧ ಎಣಿಸಿದರೂ ತುಳುನಾಡಿನ ಅನೇಕ ನಾಟಕ ತಂಡಗಳು ಸದಭಿರುಚಿಯ ನಾಟಕ ನೀಡುತ್ತಿದೆ. ಜನರು ಅವನ್ನು ಪೋಷಿಸುತ್ತಿದ್ದಾರೆ. ನಾಟಕಗಳಲ್ಲಿ ಇಷ್ಟೊಂದು ಕ್ರೇಜ್ ಹುಟ್ಟು ಹಾಕಲು ಮುಖ್ಯ ಕಾರಣ ತುಳು ನಾಟಕದ ಭೀಷ್ಮ ದೇವದಾಸ್ ಕಾಪಿಕಾಡ್. ಅವರ ನಾಟಕ ಇದ್ರೆ ಅಂತೂ ಜನ ಎಲ್ಲಾ ಕೆಲಸ ಬದಿಗೊತ್ತಿ ಬರ್ತಾರೆ. ತುಳು ಸಿನೆಮಾ ಕೂಡಾ ನೋಡ್ತಾರೆ ಆದರೆ ಅದೂ ಅಷ್ಟಕಷ್ಟೇ..ತುಂಬಾ ಚೆನ್ನಾಗಿದ್ದರೆ ಹೌಸ್ ಫ಼ುಲ್ ಓಡುತ್ತೆ ಇಲ್ಲಾ ಅಂದ್ರೆ ಸಿನೆಮಾದವರೇ ಸುಮ್ನೆ ಓಡಿಸುತ್ತಾರೆ ಹೆಸರಿಗಾಗಿ… ಹಾಗಂತ ತುಳು ಸಿನೆಮಾದ ಕಲಾವಿದರ ಮೇಲೂ ಹುಚ್ಚು ಅಭಿಮಾನ ಇಲ್ಲ. ಎಷ್ಟು ಬೇಕೋ ಅಷ್ಟೇ.. ಉತ್ತರ ಕರ್ನಾಟಕದ ಜನ ಇಲ್ಲಿ ಇರೋದರ ಪರಿಣಾಮ ಕನ್ನಡ ಸಿನೆಮಾಗಳು ಕೆಲ ದಿನ ಹೌಸ್ ಫ಼ುಲ್ ಓಡುತ್ತೆ ಇಲ್ಲ ಅಂದ್ರೆ ಅದೂ ಇಲ್ಲ.
ಇಲ್ಲಿನವರು ನಾವಾಯ್ತು..ನಮ್ಮ ಕೆಲಸ ಆಯ್ತು ಅಂತಾನೇ ಇರೋರು..ಆದರೂ ಕೋಲ, ಕಂಬುಲ, ಬ್ರಹ್ಮ ಕಲಶ, ನಾಗ ಮಂಡಲ ಎಲ್ಲದಕ್ಕೂ ಹೋಗ್ತಾರೆ.. ತುಳುನಾಡಿನ ಸಂಸ್ಕೃತಿಯ ಎಲ್ಲೂ ಬಿಟ್ಟು ಕೊಡಲ್ಲ.. ಹಾಗಂತ ಬೇರೆಯದನ್ನು ಮೂದಲಿಸೋದೂ ಇಲ್ಲ. ತುಳು ಭಾಷೆಯನ್ನು ಎದೆಗಪ್ಪಿಕೊಂಡು ಮಿಕ್ಕೆಲ್ಲಾ ಭಾಷೆಗಳನ್ನು ಮಡಿಲಲ್ಲಿಟ್ಟು ಬದುಕೋ ಜನರೇ ಈ ತುಳುನಾಡಿಗರು. ಬೇರೆ ಕಡೆಯವರ ಹುಚ್ಚು ಅಭಿಮಾನ ನೋಡಿ ಯಾಕೋ ಹೇಳೋಣ ಅನಿಸ್ತು..ಅಷ್ಟೇ..
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…