ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ಯಕ್ಷ ಕಲಾಭಿಮಾನಿ ಮಿತ್ರರು ಎಲಿಮಲೆ-ಗುತ್ತಿಗಾರು ಇವರ ಆಶ್ರಯದಲ್ಲಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹನುಮಗಿರಿ ಇವರಿಂದ ಯಕ್ಷಗಾನ ಬಯಲಾಟ ವೇದೋದ್ಧರಣ ಶಿವಪಂಚಾಕ್ಷರೀ ಮಹಿಮೆ ಯಕ್ಷಗಾನ ನಡೆಯಿತು. ಈ ಸಂದರ್ಭ ಯಕ್ಷಗಾನ ಕಲಾವಿದ ಉಮೇಶ್ ಶೆಟ್ಟಿ ಉಬರಡ್ಕ ಅವರನ್ನು ಗೌರವಿಸಲಾಯಿತು.
ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಕ್ಷೇತ್ರ ಹನುಮಗಿರಿ ಮೇಳದ ಪ್ರಬಂಧಕ ಹರೀಶ್ ಬಳಂತಿಮೊಗರು,
ಕಲಾಭಿಮಾನಿಗಳ ಗೌರವ ಸ್ವೀಕರಿಸಿದ ಕಲಾವಿದ ಉಮೇಶ್ ಶೆಟ್ಟಿ ಉಬರಡ್ಕ,ಒಬ್ಬ ಕಲಾವಿದ ರೂಪುಗೊಳ್ಳಲು ಎಲ್ಲರ ಸಹಕಾರ ಬೇಕು. ಎಲ್ಲರ ಪ್ರಿತಿಯಿಂದ ಮಾತ್ರವೇ ಕಲಾವಿದ ಬೆಳೆಯಲು ಸಾಧ್ಯ. ಕಲಾವಿದರ ಆಸ್ತಿ ಕಲಾಭಿಮಾನಿಗಳು. ಅಭಿಮಾನಕ್ಕೆ ಕಲಾವಿದ ಖುಷಿ ಪಡುತ್ತಾನೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ವಿಷ್ಣು ಪ್ರಸಾದ್ ಬರೆಕೆರೆ, ಕಲೆಯ ಆರಾಧನೆ ಉತ್ತಮವಾದ ಕೆಲಸ. ಕಲಾವಿರನ್ನು ಗೌರವಿಸುವು ಕೂಡಾ ಉತ್ತಮ ಕೆಲಸ. ಕಲೋಪಾನೆ ನಡೆಯಬೇಕು ಎಂದರು.
ವೇದಿಕೆಯಲ್ಲಿ ಯಕ್ಷ ಕಲಾಭಿಮಾನಿ ಮಿತ್ರರು ಎಲಿಮಲೆ-ಗುತ್ತಿಗಾರು ಸಂಘಟನೆಯ ಹರಿಸುಬ್ರಹ್ಮಣ್ಯ ಪುಚ್ಚಪ್ಪಾಡಿ, ಪಿ ಎಸ್ ಚಂದ್ರಶೇಖರ ಪುಚ್ಚಪ್ಪಾಡಿ, ಗಂಗಾಧರ ಪುಚ್ಚಪ್ಪಾಡಿ, ವೆಂಕಟೇಶ ಪುಚ್ಚಪ್ಪಾಡಿ, ಸುಬ್ರಹ್ಮಣ್ಯ ಪ್ರಸಾದ ಚಣಿಲ, ಉದಯಕುಮಾರ್ ಕಮಿಲ, ಸತ್ಯನಾರಾಯಣ ಹೊನ್ನಾಡಿ, ಕೃಷ್ಣ ಭಟ್ ಹೊನ್ನಡಿ, ಸತ್ಯನಾರಾಯಣ ಮಾತೃಮಜಲು, ಮತ್ತಿತರರು ಉಪಸ್ಥಿತರಿದ್ದರು. ಅಪರ್ಣಾ ಪುಚ್ಚಪ್ಪಾಡಿ ನಿರೂಪಿಸಿದರು.
ಭಾಗವತರಾಗಿ ಗಾನಸುರಭಿ ರವಿಚಂದ್ರ ಕನ್ನಡಿಕಟ್ಟೆ, ಚಿನ್ಮಯ ಭಟ್ ಕಲ್ಲಡ್ಕ, ಚೆಂಡೆ-ಮದ್ದಳೆಯಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್, ಚೈತನ್ಯಕೃಷ್ಣ ಪದ್ಯಾಣ, ಶ್ರೀಧರ ವಿಟ್ಲ, ಕೌಶಲ್ ರಾವ್ ಪುತ್ತಿಗೆ, ಚಕ್ರತಾಳದಲ್ಲಿ ನಿಶ್ವತ್ ಜೋಗಿ ಜೋಡುಕಲ್ಲು ಇದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಸರಕಾರಿ ಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು…
ಭಾರತದ ವಿವಿಧ ಕಡೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯ ಇರುವ ಡ್ರಾಗನ್ ಫ್ರುಟ್(ಕಮಲಂ) ಹಾಗೂ…
ಏಪ್ರಿಲ್ ಮಧ್ಯದ ವೇಳೆಗೆ ದೆಹಲಿಯಲ್ಲಿ ತಾಪಮಾನವು 40 ಡಿಗ್ರಿಗಿಂತ ಹೆಚ್ಚಾಗಬಹುದು, ಈ ಬಾರಿ…
ಗುಜ್ಜೆ ರೋಲ್ ಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಮೊದಲಿಗೆ ಗುಜ್ಜೆ ಕಟ್…
ಹಿಂದೂಗಳ ಪವಿತ್ರ ಯಾತ್ರಾಸ್ಥಳ, ವಾರ್ಷಿಕ ಪವಿತ್ರ ಅಮರನಾಥ ಯಾತ್ರೆ ಜೂನ್ 29 ರಿಂದ, …