Advertisement
MIRROR FOCUS

ಗ್ರಾಮೀಣ ಭಾಗದ ಮಳೆಗಾಲದ ಸಂಪರ್ಕಕ್ಕೆ ಕಾಲು ಸಂಕ | 234 ಕಾಲು ಸಂಕ ನಿರ್ಮಾಣಕ್ಕೆ 60 ಕೋಟಿ

Share

ಮಲೆನಾಡು ಭಾಗದ ಗ್ರಾಮೀಣ ಭಾಗದಲ್ಲಿ ನೆಟ್ವರ್ಕ್‌ ಹಾಗೂ ಸಂಪರ್ಕ ವ್ಯವಸ್ಥೆ ಯಾವತ್ತೂ ಕಷ್ಟಕರ. ಅದರಲ್ಲೂ ಮಳೆಗಾಲದಲ್ಲಿ  ಗ್ರಾಮಗಳ ಜನರು  ಹೊಳೆಗಳನ್ನು ದಾಟಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗಲು ಹರಸಾಹಸವೇ ಸರಿ. ಇದೀಗ ಈ ಸಂಕಷ್ಟದಿಂದ ದೂರ ಮಾಡಲು ಸರ್ಕಾರವು ಕಾಲುಸಂಕ ನಿರ್ಮಾಣಕ್ಕೆ ಮುಂದಾಗಿದೆ. ಸಾಗರ ಮತ್ತು ಹೊಸನಗರ ತಾಲೂಕು ಭಾಗದಲ್ಲಿ 234 ಕಾಲು ಸಂಕಗಳನ್ನು ನಿರ್ಮಾಣ ಮಾಡಲು ಯೋಜನೆ ಸಿದ್ಧವಾಗಿದೆ.

ಶರಾವತಿ ನದಿ ತೀರದ ಕರೂರು, ಬಾರಂಗಿ, ಬೇಳೂರು, ಸಾಗರ, ಹೊಸನಗರ ಸೇರಿದಂತೆ ಸಾಕಷ್ಟು ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಹೊಳೆ ತುಂಬಿ ಹರಿಯುವುದು  ಸಾಮಾನ್ಯ. ಈ ವೇಳೆ ಶಾಲಾ ಕಾಲೇಜು ವಿದ್ಯಾರ್ಥಿಗಳು, ರೈತರು, ಮಹಿಳೆಯರು ಸೇರಿದಂತೆ ಜನರು ಹೊಳೆಗಳನ್ನು ದಾಟಲು ತೀವ್ರ ತೊಂದರೆ ಎದುರಿಸುತ್ತಾರೆ. ಈ ಸಮಸ್ಯೆ ಹಲವು ಸಮಯಗಳಿಂದ ಇದೆ. ಮಲೆನಾಡಿನ ಜನರು ಹಲವಾರು ವರ್ಷಗಳಿಂದ ಅನುಭವಿಸುತ್ತಾ ಬಂದಿದ್ದು, ಈ ಸಮಸ್ಯೆ ಬಗೆಹರಿಸಲು ಕಿರುಸೇತುವೆ ನಿರ್ಮಿಸುವಂತೆ ಈ ಭಾಗದ ಜನರು ಸ್ಥಳೀಯ ಮುಖಂಡರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು. ಅದಕ್ಕೆ ಸರ್ಕಾರ  ಸ್ಪಂದಿಸಿದ್ದು, ಕಾಲು ಸಂಕ ನಿರ್ಮಾಣ ಮಾಡಲು ಅನುದಾನ ಮಂಜೂರು ಮಾಡಿದೆ. ಈ ಭಾಗದಲ್ಲಿ ಸುಮಾರು 234 ಕಾಲು ಸಂಕ ನಿರ್ಮಾಣ ಮಾಡಲು 60 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದ್ದು, ಅದಕ್ಕೆ ಲೋಕೋಪಯೋಗಿ ಇಲಾಖೆ ಕೈಜೋಡಿಸಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ..

ತುಂಗಾ ಮೇಲ್ದಂಡೆ ಯೋಜನೆ ವೃತ್ತ ಅಧೀಕ್ಷಕ ಅಭಿಯಂತರ ನಟರಾಜ್ ಎಸ್ ಪಾಟೀಲ್ಈ ಬಗ್ಗೆ ಮಾತನಾಡಿ, ಸಾಗರ ಮತ್ತು ಹೊಸನಗರ ತಾಲೂಕು ಭಾಗದಲ್ಲಿ 234 ಕಾಲು ಸಂಕಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಸರ್ಕಾರದಿಂದ ಅರವತ್ತು ಕೋಟಿ ರೂಪಾಯಿ ಹಣ ಮಂಜೂರಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ಶರಾವತಿ ನೀರಿನ ಪ್ರದೇಶದಲ್ಲಿ ಕಾಲು ಸೇತುವೆ ನಿರ್ಮಾಣ ಮಾಡುತ್ತಿರುವುದು ಸಂತಸದ ಸಂಗತಿ, ಸ್ಥಳೀಯರ ಬಹುದಿನಗಳ ಕನಸನ್ನು ರಾಜ್ಯ ಸರ್ಕಾರ ನನಸು ಮಾಡುತ್ತಿದೆ. ವ್ಯವಸ್ಥಿತವಾಗಿ ನಿರ್ಮಾಣ ಮಾಡಿದರೆ ಅನುಕೂಲವಾಗಲಿದೆ ಎಂದು ಸ್ಥಳೀಯರಾದ ದೇವೇಂದ್ರ ಮಾರಲಗೋಡು ಹೇಳುತ್ತಾರೆ.

ಮಳೆಗಾಲದಲ್ಲಿ ಸಣ್ಣ ಹೊಳೆಯನ್ನೂ ದಾಟಲು ಸ್ಥಳೀಯರು ಸಾಕಷ್ಟು ಹರಸಾಹಸ ಪಡಬೇಕಿತ್ತು. ಕಿರುಸೇತುವೆ ನಿರ್ಮಾಣ ಮಾಡುತ್ತಿರುವುದರಿಂದ  ಈ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಸಾಮಾಜಿಕ ಕಾರ್ಯಕರ್ತ ಓಂಕಾರ್ ಜೈನ್ ಹೇಳುತ್ತಾರೆ.

ಮಲೆನಾಡಿನ ಜನರು ವಿಶೇಷವಾಗಿ  ಮಳೆಗಾಲದಲ್ಲಿ  ಹೊಳೆ ದಾಟಲು ಎದುರಿಸುತ್ತಿದ್ದ ಸಮಸ್ಯೆ ನಿವಾರಣೆಗೆ ಸರ್ಕಾರ  ಎಚ್ಚೆತ್ತುಕೊಂಡಿರುವುದು ಆ ಭಾಗದ ಜನರಲ್ಲಿ ಸಂತಸ ಮೂಡಿಸಿದೆ.  ಮಲೆನಾಡಿದ ಹಲವು ಕಡೆಗಳಲ್ಲಿಇಂತಹ ಸಮಸ್ಯೆ ಇದೆ. ಎಲ್ಲಾ ಕಡೆಯಲ್ಲೂ ಇಲಾಖೆ, ಆಯಾ ಕ್ಷೇತ್ರದ ಪ್ರತಿನಿಧಿಗಳು ಗಮನಹರಿಸಿದರೆ ಸಮಸ್ಯೆ ಪರಿಹಾರ ಸಾಧ್ಯ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ..

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

“ಕೃಷಿ ಕೂಳೆ ಸುಡುವುದು ಮುಗಿದುಹೋಯ್ತು…!” | ರೈತರಿಗೆ ಹೊಸ ಆದಾಯದ ದಾರಿ, ಕೂಳೆಯಿಂದ ಬಿಟುಮೆನ್ ತಯಾರಿ

ಕೃಷಿ ಕೂಳೆ ಈಗ ಮಾಲಿನ್ಯದ ಮೂಲವಲ್ಲ, ರೈತರಿಗೆ ಆದಾಯದ ಮೂಲವಾಗುತ್ತಿದೆ. ಬಯೋ-ಬಿಟುಮೆನ್ ತಂತ್ರಜ್ಞಾನ…

20 hours ago

“ಮಹಿಳೆಯರಿಗೆ ಶಕ್ತಿ ನೀಡಿದರೆ ಕೃಷಿ ಬಲವಾಗುತ್ತದೆ..!” | ವಿಶ್ವದ ಗಮನ ಸೆಳೆಯುತ್ತಿದೆ ಇನ್‌ಕ್ಲೂಸಿವ್‌ ಅಗ್ರಿಕಲ್ಚರ್‌ ಮಾದರಿ

ಮಹಿಳೆಯರನ್ನು ಕೃಷಿ ಮೌಲ್ಯ ಸರಪಳಿಯಲ್ಲಿ ಸೇರಿಸಿದರೆ ಆದಾಯ ಮತ್ತು ಉತ್ಪಾದನೆ ಹೆಚ್ಚುತ್ತದೆ. Inclusive…

20 hours ago

‘ಗ್ರೀನ್ ಕ್ರೈಮ್’ | ಹವಾಮಾನ ಸಂಕಷ್ಟವಲ್ಲ, ಇದು “ಪರಿಸರ ಅಪರಾಧ” | ಮನೋವಿಜ್ಞಾನಿಯ ಪುಸ್ತಕ ಜಗತ್ತಿಗೆ ಎಚ್ಚರಿಕೆ

ಪರಿಸರ ನಾಶವು ಕೇವಲ ಸಮಸ್ಯೆಯಲ್ಲ, ಅದು ಅಪರಾಧ ಎಂಬುದನ್ನು “ಗ್ರೀನ್ ಕ್ರೈಮ್” ಪುಸ್ತಕ…

20 hours ago

ಘಾನಾದಲ್ಲಿ ಮರ ಬೆಳೆ ವೈವಿಧ್ಯೀಕರಣ ಅಭಿಯಾನಕ್ಕೆ ಚಾಲನೆ | ಕೃಷಿ ಕ್ಷೇತ್ರದಲ್ಲಿ ಮಹತ್ವದ ಪರಿವರ್ತನೆ

ಘಾನಾದಲ್ಲಿ ಮರ ಬೆಳೆ ವೈವಿಧ್ಯೀಕರಣ ಯೋಜನೆ ಆರಂಭಗೊಂಡಿದ್ದು, ರೈತರ ಆದಾಯ ಹೆಚ್ಚಿಸಲು ಮತ್ತು…

1 day ago

ಹವಾಮಾನ ವರದಿ | 30-03-2026 | ಇವತ್ತಿನ ಮಳೆ ಎಲ್ಲಿ…? ಎಷ್ಟು ದಿನ ಇದೆ ಮಳೆ…?

ಕರ್ನಾಟಕದ ವಿವಿಧ ಭಾಗಗಳಲ್ಲಿ ಮತ್ತೆ ಮಳೆಯ ಚಟುವಟಿಕೆ ಹೆಚ್ಚಾಗಿದ್ದು, ಕರಾವಳಿ, ಮಲೆನಾಡು ಹಾಗೂ…

2 days ago

ರಾಜ್ಯದ ಹಲವೆಡೆ ಮಳೆ ; ಬೆಂಗಳೂರಿನಲ್ಲಿ ಹಗುರ ಮಳೆ ಸಾಧ್ಯತೆ

ರಾಜ್ಯದ ಹಲವೆಡೆ ಮಳೆಯಾಗಿದ್ದು, ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳಲ್ಲಿ ಹಗುರ ಮಳೆಯ ಸಾಧ್ಯತೆ…

2 days ago