ಅಡಿಕೆ ವಹಿವಾಟಿನಲ್ಲಿ ಈಚೆಗೆ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಅಡಿಕೆ ಬೆಳೆಯುವ ಪ್ರದೇಶದಲ್ಲಿ ಮಾತ್ರವಲ್ಲ ಖರೀದಿ-ಮಾರಾಟ ಎರಡೂ ಕಡೆಗಳಲ್ಲಿ ವಂಚನೆ ನಡೆಯುತ್ತಿದೆ.ಇದೀಗ ಅಡಿಕೆ ವ್ಯಾಪಾರದ ಮದ್ಯವರ್ತಿಗೂ 30 ಲಕ್ಷ ರೂಪಾಯಿ ವಂಚಿಸಿದ ಘಟನೆಯೊಂದು ಮುಂಬೈಯಲ್ಲಿ ನಡೆದಿದೆ.
ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಅಡಿಕೆ ಪೂರೈಸುವುದಾಗಿ ನಂಬಿಸಿ , ಉತ್ತಮ ಲಾಭ ಗಳಿಸುವ ಆಮಿಷವೊಡ್ಡಿ ಮುಂಬೈಯ ಅಂಧೇರಿಯ ಉದ್ಯಮಿಯೊಬ್ಬರಿಗೆ ಮೂವರು ವ್ಯಕ್ತಿಗಳು 30 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಆರ್ ಗುಪ್ತಾ, ಮನೋಜ್ ಪಟೇಲ್ ಮತ್ತು ಮಹೇಂದ್ರ ಶಾ ಆರೋಪಿಗಳು. ಪ್ರಕಾಶ್ ಶುಕ್ಲಾ ವಂಚನೆಗೊಳಗಾದವರು.
ಅಡಿಕೆ ವ್ಯವಹಾರದಲ್ಲಿ ಹೂಡಿಕೆ ಮಾಡುವುದಾಗಿ ಆಮಿಷವೊಡ್ಡಿ ಹಾಗೂ ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಅಡಿಕೆ ಮಾಡಿ ಭಾರಿ ಲಾಭದ ಭರವಸೆ ನೀಡಿ 30 ಲಕ್ಷ ವಂಚಿಸಿದ್ದಾರೆ. ಸೊಮಾಲಿಯಾದ ವ್ಯಾಪಾರಿಯೊಂದಿಗೆ 1.3 ಕೋಟಿ ಮೌಲ್ಯದ 52 ಟನ್ ಅಡಿಕೆಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಇದಕ್ಕಾಗಿ 30 ಲಕ್ಷ ನಗದು ಮುಂಗಡ ಹಣ ನೀಡುವಂತೆ ಆರೋಪಿಗಳು ಹೇಳಿದ್ದರು. ಅದಕ್ಕೂ ಮೊದಲು ನಂಬಿಕೆ ಬರುವಂತೆ ನಟಿಸಿದ್ದರು, ವಿವಿಧ ಬಾರಿ ಸಭೆ ಸೇರಿ ಮಾತುಕತೆ ನಡೆಸಿದ್ದರು. ಹಣ ಪಾವತಿಯಾದ ಬಳಿಕ ಆರೋಪಿಗಳು ಯಾವುದೇ ಕರೆಗಳಿಗೆ ಸ್ಪಂದಿಸುತ್ತಿರಲಿಲ್ಲ ಎಂದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರತೀ ಸಭೆಯಲ್ಲಿ ಆರೋಪಿಗಳು 52 ಟನ್ ಅಡಿಕೆಯನ್ನು ಪ್ರತಿ ಕಿಲೋಗ್ರಾಂಗೆ 250 ರೂ.ಗೆ ಬರುವುದಾಗು ಹೇಳಿದ್ದರು. ಅಂದರೆ 1.30 ಕೋಟಿ ರೂ. ಮೌಲ್ಯದ್ದಾಗಿದೆ. ಆದರೆ 30 ಲಕ್ಷ ರೂ. ಮುಂಗಡ ನಗದು ನೀಡುವಂತೆ ಹೇಳಿದ್ದರು. ಉಳಿದ ಮೊತ್ತವನ್ನು ಚೆಕ್ ಅಥವಾ ಆರ್‌ಟಿಜಿಎಸ್ ಮೂಲಕ ಅಡಿಕೆ ತಲುಪಿದ ನಂತರ ಪಾವತಿಸಬಹುದು ಎಂದು ಭರವಸೆ ನೀಡಿದ್ದರು.ಇದೀಗ ಪ್ರಕರಣ ದಾಖಲಾಗಿದೆ.
Source: Indian Express
ಸರಿಗಮಪ ಲಿಟಲ್ ಚಾಂಪ್ಸ್ 2026ರ ವಿಜೇತ ಅಶ್ಮಿತ್ ಎ. ಜೆ. ಅವರನ್ನು ಮಂಗಳೂರಿನ…
ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…
ಬಣ್ಣಗಳ ಮೂಲಕ ಅರಳಿದ ಗಣೇಶ - ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 8…
ನನ್ನ ಚಿತ್ರ – ನನ್ನ ಖುಷಿ | ಗಣೇಶನನ್ನು ಬಣ್ಣಗಳಲ್ಲಿ ಅರಳಿಸಿದ ಪುಟಾಣಿ…
ಗಣೇಶ ಚತುರ್ಥಿಯನ್ನು ಕೇವಲ ಧಾರ್ಮಿಕ ಆಚರಣೆಯಾಗಿ ನೋಡುವುದಕ್ಕಿಂತ, ಗಣೇಶನ ರೂಪಲಕ್ಷಣಗಳಲ್ಲಿರುವ ಜೀವನದ ಸಂದೇಶಗಳನ್ನು…
ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್‌ನಲ್ಲಿ…