ಭಾರತದಲ್ಲಿ ಚೀತಾಗಳ ತಳಿ ವಿನಾಶದಂಚಿಗೆ ತಲುಪಿದ್ದ ಕಾರಣ ದಕ್ಷಿಣ ಆಫ್ರೀಕಾದ ನಮೀಬಿಯಾದಿಂದ ಚೀತಾಗಳನ್ನು ತರಲಾಗಿತ್ತು. ಅದರ ಆರೈಕೆಗಾಗಿ ಅವುಗಳನ್ನು ಉದ್ಯಾನವನದಲ್ಲೇ ಇರಿಸಿಕೊಳ್ಳಲಾಗಿತ್ತು. ಇದೀಗ ಒಂದೋಂದೇ ಚೀತಾಗಳನ್ನು ಕಾಡಿಗೆ ಬಿಡುವ ಮೂಲಕ ಅದರ ಮೂಲ ವಾಸಸ್ಥಾನಗಳಲ್ಲಿ ಜೀವಿಸಲು ಅನುವು ಮಾಡಿಕೊಡಲಾಗುತ್ತಿದೆ.
ಮಧ್ಯಪ್ರದೇಶದ ಶಿಯೋಪುರ ಜಿಲ್ಲೆಯ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿದ್ದ (ಕೆಎನ್‌ಪಿ) ಇನ್ನೊಂದು ಚೀತಾವನ್ನು ಕಾಡಿಗೆ ಬಿಡಲಾಗಿದ್ದು, ಒಟ್ಟು ಏಳು ಚೀತಾಗಳನ್ನು ಈಗಾಗಲೇ ಕಾಡಿಗೆ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾದ 3-4 ವರ್ಷ ವಯಸ್ಸಿನ ಹೆಣ್ಣು ಚೀತಾ ನೀರವವನ್ನು ಭಾನುವಾರ ಸಂಜೆ ಕೆಎನ್‌ಪಿಯ ಆವರಣದಿಂದ ಕಾಡಿಗೆ ಬಿಡಲಾಯಿತು ಎಂದು ರಾಷ್ಟ್ರೀಯ ಉದ್ಯಾನವನದ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್‌ಒ) ಪ್ರಕಾಶ್ ಕುಮಾರ್ ವರ್ಮಾ ತಿಳಿಸಿದ್ದಾರೆ. ಇಲ್ಲಿಯವರೆಗೆ, ಏಳು ಚೀತಾಗಳನ್ನು ಮುಕ್ತಗೊಳಿಸಲಾಗಿದೆ. ಆದರೆ ಇನ್ನೂ 10 ಚೀತಾಗಳು ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಇದೆ ಎಂದು ಹೇಳಿದ್ದಾರೆ.
5 ಹೆಣ್ಣು ಮತ್ತು 3 ಗಂಡು ಚೀತಾಗಳನ್ನು ಒಳಗೊಂಡ ಎಂಟು ನಮೀಬಿಯಾದಿಂದ ತರಲಾದ ಚೀತಾಗಳನ್ನು ಕೆಎನ್‌ಪಿಗೆ ತಂದು ಬಿಡಲಾಗಿತ್ತು, ಈ ಜಾತಿಯ ಚೀತಾಗಳು ಭಾರತದಲ್ಲಿ ನಾಶವಾದ ಕಾರಣ, ಮತ್ತೆ ಇದನ್ನು ಭಾರತದಲ್ಲಿ ಪರಿಚಯಿಸುವ ಕಾರಣದಿಂದ ಕಳೆದ ವರ್ಷ ಸೆಪ್ಟೆಂಬರ್ 17 ಮಹತ್ವದ ಚೀತಾಗಳನ್ನು ಕೆಎನ್‌ಪಿ ತಂದು ಬಿಡುವ ಕಾರ್ಯಕ್ರಮಗಳನ್ನು ಮಾಡಲಾಗಿತ್ತು.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…