ಬೆಲೆ ಕುಸಿದಾಗ ನಷ್ಟ ಬೇಡ – ರಂಬುಟಾನ್‌ ಫ್ರೀಜ್‌ ಮಾಡಿ, ನಂತರ ಮಾರಾಟ ಮಾಡಿ..! ಕೃಷಿಕನ ಹೊಸ ಪ್ರಯೋಗ

June 28, 2026
6:57 AM
ರಂಬುಟಾನ್‌ ಬೆಲೆ ಕುಸಿದಾಗ ಹಣ್ಣನ್ನು ಫ್ರೀಜ್‌ ಮಾಡಿ ನಂತರ ಮಾರಾಟ ಮಾಡಿದರೆ ಉತ್ತಮ ಆದಾಯ ಗಳಿಸಬಹುದು ಎಂಬ ಪ್ರಯೋಗವನ್ನು ವಿಟ್ಲ ಸಮೀಪದ ಕೃಷಿಕ ಕಿನಿಲ ಅಶೋಕ್‌ ಪರಿಚಯಿಸಿದ್ದಾರೆ. ಇದು ರೈತರಿಗೆ ಮೌಲ್ಯವರ್ಧನೆಯ ಮೂಲಕ ನಷ್ಟ ತಪ್ಪಿಸುವ ಸರಳ ಮಾರ್ಗವಾಗಬಹುದು.

ಯಾವುದೇ ಮಾರುಕಟ್ಟೆಯಲ್ಲಿ ಉತ್ಪಾದನೆ ಹೆಚ್ಚಾದಾಗ ಬೆಲೆ ಕುಸಿತವಾಗುವುದು ಸಹಜ. ಆದರೆ ಮಾರುಕಟ್ಟೆ ವ್ಯವಸ್ಥೆ ಇಲ್ಲದೆಯೂ ಸೂಕ್ತವಾದ ಧಾರಣೆ ಸಿಗದೆ ಕೃಷಿಕ ಸೋಲುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ ಪರ್ಯಾಯದ ದಾರಿಗಳು ನಷ್ಟವನ್ನು ಕಡಿಮೆ ಮಾಡುತ್ತವೆ. ಅದಕ್ಕೊಂದು ಉದಾಹರಣೆ ರಂಬುಟಾನ್‌ ಹಣ್ಣು.  ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಕೃಷಿಕ ಅಶೋಕ್‌ ಕಿನಿಲ ಅವರು ಮಾಡಿರುವ ಹೊಸ ಪ್ರಯತ್ನ ಈಗ ಗಮನ ಸೆಳೆದಿದೆ.

ಅವರ ಸಲಹೆ ಬಹಳ ಸರಳ. ರಂಬುಟಾನ್‌ ಹಣ್ಣಿನ ಸಿಪ್ಪೆ ತೆಗೆದು ಒಳಗಿನ ತಿರುಳನ್ನು ಫ್ರೀಜರ್‌ನಲ್ಲಿ ಸಂಗ್ರಹಿಸಿಡಬೇಕು. ಈ ರೀತಿ ಫ್ರೋಜನ್‌ ರಂಬುಟಾನ್‌ ಹೆಚ್ಚು ದಿನಗಳವರೆಗೆ ಗುಣಮಟ್ಟ ಕಾಪಾಡಿಕೊಳ್ಳುವುದರ ಜೊತೆಗೆ, ಬೇಕಾದಾಗ ತಿನ್ನಲು ರುಚಿಕರವಾಗಿರುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಹೆಚ್ಚಿನ ಕೃಷಿಕರ ಮನೆಯಲ್ಲಿ ಈಚೆಗೆ ಸೀಮಿತವಾದ ರಂಬುಟಾನ್‌ ಹಣ್ಣಿನ ಗಿಡವನ್ನು ಬೆಳೆಸಿದ್ದಾರೆ. ಅದನ್ನೇ ಕೃಷಿ ಎಂದು ಮಾಡಿದವರು ಕಡಿಮೆ. ಆದರೆ  ಹಣ್ಣಾದ ಬಳಿಕ ಮನೆಯವರು ತಿಂದು, ಗೆಳೆಯರಿಗೂ ಹಂಚಿ ಉಳಿದ ಹಣ್ಣು ಹಾಳಾಗುವುದು ಕಂಡಾಗ ಬೇಸರವೂ ಆಗುತ್ತದೆ. ಇಂತಹದ್ದೇ ಅನುಭವ ಕೃಷಿಕ ಅಶೋಕ್‌ ಕಿನಿಲ ಅವರಿಗೆ ಆಯಿತು. ರಂಬುಟಾನ್‌ ಹಂಚಿದ ಬಳಿಕ ಮಾರಾಟಕ್ಕೆ ಅಂತ ಹೋದಾಗ ಬೆಲೆ ಕಡಿಮೆ, ಅದೂ ಸರಿಯಾದ ವ್ಯವಸ್ಥೆಗಳು ಇರಲಿಲ್ಲ. ಇದಕ್ಕಾಗಿಉಳಿದ ಹಣ್ಣುಗಳಂತೆ ರಂಬುಟಾನ್‌ನ ಹೊರಗಿನ ಸಿಪ್ಪೆ ತೆಗೆದು ಪ್ರೀಜರ್‌ ನಲ್ಲಿಟ್ಟರು. ಸುಮಾರು ಒಂದು ತಿಂಗಳ ಬಳಿಕ ಅದನ್ನು ತೆಗೆದಾದ ಅದೇ ತಾಜಾತನ ಉಳಿದುಕೊಂಡಿತ್ತು, ತಿನ್ನಲೂ ಬಹಳ ರುಚಿಯಾಗಿತ್ತು. ಹೀಗಾಗಿ ಈ ಮಾಹಿತಿಯನ್ನು ಕೃಷಿಕರೊಂದಿಗೆ ಹಂಚಿಕೊಂಡಿದ್ದಾರೆ.

ಈ ಪ್ರಯೋಗ ಕೇವಲ ಮನೆಯ ಬಳಕೆಗೆ ಮಾತ್ರವಲ್ಲ. ಮಾರುಕಟ್ಟೆಯಲ್ಲಿ ಬೆಲೆ ಕುಸಿದಾಗ ಹಣ್ಣನ್ನು ಕಡಿಮೆ ದರಕ್ಕೆ ಮಾರಾಟ ಮಾಡುವ ಬದಲು, ಫ್ರೋಜನ್‌ ಉತ್ಪನ್ನವಾಗಿ ಸಂಸ್ಕರಿಸಿ ಸಂಗ್ರಹಿಸಿಡಬಹುದು. ಬಳಿಕ ಆಫ್‌-ಸೀಸನ್‌ನಲ್ಲಿ ಮಾರುಕಟ್ಟೆಗೆ ತಂದರೆ ಉತ್ತಮ ಬೆಲೆ ಸಿಗುವ ಸಾಧ್ಯತೆ ಇದೆ. ಇದರಿಂದ ರೈತರಿಗೆ ಮೌಲ್ಯವರ್ಧನೆಯ ಮೂಲಕ ಹೆಚ್ಚುವರಿ ಆದಾಯ ಗಳಿಸಲು ಅವಕಾಶ ದೊರೆಯಬಹುದು.

ಇತ್ತೀಚಿನ ವರ್ಷಗಳಲ್ಲಿ ಹಣ್ಣುಗಳ ಮೌಲ್ಯವರ್ಧನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ರಂಬುಟಾನ್‌ನಂತಹ ಶೀಘ್ರ ಹಾಳಾಗುವ ಹಣ್ಣುಗಳಿಗೆ ಇಂತಹ ಸರಳ ಸಂಸ್ಕರಣಾ ವಿಧಾನಗಳು ರೈತರಿಗೆ ಉಪಯುಕ್ತವಾಗಬಹುದು. ಸಣ್ಣ ಮಟ್ಟದಲ್ಲಿ ಆರಂಭಿಸಿ ಗ್ರಾಹಕರ ಪ್ರತಿಕ್ರಿಯೆ ಆಧರಿಸಿ ಫ್ರೋಜನ್‌ ರಂಬುಟಾನ್‌ಗೆ ಹೊಸ ಮಾರುಕಟ್ಟೆಯನ್ನೂ ನಿರ್ಮಿಸಬಹುದಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಕಿನಿಲ ಅಶೋಕ್ ಅವರ ಈ ಪ್ರಯೋಗ, ಬೆಲೆ ಕುಸಿತದ ಸಮಯದಲ್ಲಿ ನಷ್ಟ ಅನುಭವಿಸುವ ಬದಲು, ಹೊಸ ಆಲೋಚನೆಯೊಂದಿಗೆ ಮೌಲ್ಯವರ್ಧನೆ ಮಾಡಿ ಆದಾಯ ಹೆಚ್ಚಿಸಿಕೊಳ್ಳುವ ಸಾಧ್ಯತೆಯನ್ನು ರೈತರಿಗೆ ತೋರಿಸಿಕೊಟ್ಟಿದೆ.

A farmer from near Vittal in Dakshina Kannada has demonstrated a simple value-addition idea for rambutan. By freezing peeled rambutan during the peak harvest season, farmers may avoid distress sales and potentially market the fruit during the off-season for better returns.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶವಿಲ್ಲ: ಪಶ್ಚಿಮಘಟ್ಟದ 1,449 ಗ್ರಾಮಗಳ ಬಗ್ಗೆ ಆತಂಕ ಬೇಡ ಎಂದ ಪರಮೇಶ್ವರ್
August 28, 2026
9:16 PM
by: ದ ರೂರಲ್ ಮಿರರ್.ಕಾಂ
ಕರ್ನಾಟಕದ 101 ತಾಲ್ಲೂಕುಗಳು ಬರಪೀಡಿತ : ಇನ್ನೂ 3 ತಾಲ್ಲೂಕುಗಳ ಮೇಲೂ ಬರದ ಛಾಯೆ
August 28, 2026
8:56 PM
by: ದ ರೂರಲ್ ಮಿರರ್.ಕಾಂ
101 ತಾಲೂಕುಗಳಲ್ಲಿ ಬರದ ಛಾಯೆ – ಗ್ರಾಮೀಣರಿಗೆ ಉದ್ಯೋಗ ಹೆಚ್ಚಿಸಲು ಸಚಿವ ಖಂಡ್ರೆ ಸೂಚನೆ
August 28, 2026
8:50 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 28-08-2026 | ಕರ್ನಾಟಕದ ಹವಾಮಾನದಲ್ಲಿ ಮುಂದಿನ ಬದಲಾವಣೆ ಎಲ್ಲಿದೆ?
August 28, 2026
2:10 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror