ಗಾಂಧಿ ಜಯಂತಿ : ಗಾಂಧೀಜಿ ಚಿಂತನೆಯ‌ ಪ್ರಸ್ತುತತೆ

October 2, 2020
10:01 AM

ಮಹಾತ್ಮ ಎಂಬ ಶಬ್ದದೊಂದಿಗೆ ಗಾಂಧೀಜಿ ಎಂಬ ಪದ ಸೇರಿದರೇ ಅದಕ್ಕೊಂದು ಪರಿಪೂರ್ಣ ಅರ್ಥ ಬರುವುದು.

Advertisement

ಗಾಂಧೀಜಿಯವರೆಂದರೆ ಸರಳತೆಗೊಂದು ಅನ್ವರ್ಥ.ಸರಳತೆ ಬದುಕಿನ ಸಂಕೀರ್ಣತೆಯನ್ನು  ಸರಳವಾಗಿಸುತ್ತದೆ.  ಗೋಜಲುಗಳನ್ನು  ನಿವಾರಿಸುತ್ತದೆ. ಮಾತು, ಕೃತಿಗಳು  ಸರಳವಾದಾಗ  ಬದುಕು ಸಂತೋಷವಾಗಿರುತ್ತದೆ. ಬೇಡಿಕೆ ಗಳು , ನಿರೀಕ್ಷೆ ಗಳು ಅಗತ್ಯ ಗಳು ಕಡಿಮೆಯಾದಾಗ   ಒತ್ತಡಮುಕ್ತ ಜೀವನ ನಮ್ಮದಾಗುತ್ತದೆ. ಈ ಸರಳ ಸೂತ್ರವನ್ನು ಅನುಸರಿಸಿ ಎಲ್ಲರಿಗೂ ಮಾರ್ಗದರ್ಶನ ಮಾಡಿದರು.    ಎಲ್ಲಾ ಆಡಂಬರಗಳನ್ನು ತ್ಯಜಿಸಿ ಕೇವಲ ಪಂಚೆಯುಟ್ಟು ಸರಳತೆಯ ಪಾಠವನ್ನು ಜಗತ್ತಿಗೇ ಸಾರಿದರು .

ರಾಜ ಸತ್ಯ ಹರಿಶ್ಚಂದ್ರ ರಿಂದ  ಬಹಳಷ್ಟು ಪ್ರಭಾವಿತರಾಗಿದ್ದ  ಗಾಂಧೀಜಿವರು ಬದುಕಿನುದ್ದಕ್ಕೂ ಪರಿಪಾಲಿಸಿಕೊಂಡು ಬಂದರು. ಮಾತ್ರವಲ್ಲ ಸತ್ಯದ ಹಾದಿಯಲ್ಲಿ ಎಷ್ಟೇ ಕಲ್ಲುಮುಳ್ಳುಗಳೆದುರಾದರೂ ಎದೆಗುಂದದೆ  , ಯಾವುದೇ ಒತ್ತಡಕ್ಕೂ ಮಣಿಯದೆ ತನ್ನ ಸತ್ಯದ ಹಾದಿಯಲ್ಲಿ ಮುನ್ನಡೆದರು. ಜಗತ್ತಿಗೇ ಮಾದರಿಯಾದರು.
ಖಾದಿ  ವಸ್ತ್ರ ಕ್ಕೆ ಇಂದು ಇಷ್ಟು ಪ್ರಚಾರ ಪ್ರಾಮುಖ್ಯತೆ ವಿಶ್ವ ಮಟ್ಟದಲ್ಲಿ ದೊರೆಯುತ್ತಿದೆಯೆಂದರೆ ಅದಕ್ಕೆ ಮುಖ್ಯ ಕಾರಣ ಗಾಂಧೀಜಿಯವರು. ಸ್ವಾತಂತ್ರ್ಯ ಪೂರ್ವದಲ್ಲೇ ಸ್ವಾವಲಂಬಿ ಭಾರತದ ಕಲ್ಪನೆಯನ್ನು ಕಂಡಿದ್ದರು.  ಸ್ವಾವಲಂಬನೆ ಕುಟುಂಬದಿಂದಲೇ ಆರಂಭಗೊಳ್ಳಬೇಕು. ಸ್ವಾವಲಂಬಿ ಗ್ರಾಮ, ಆಮೇಲೆ ಸಮಾಜ, ರಾಜ್ಯ, ಸ್ವಾವಲಂಬಿ ದೇಶ, ಈ ಕಲ್ಪನೆಯೇ ಎಷ್ಟು ಸುಂದರವಾಗಿದೆಯಲ್ಲವೇ. ಪರಿವರ್ತನೆಯಾಗ ಬೇಕದ್ದು ಮನಸುಗಳಲ್ಲಿ.  ಮನಮನದಲ್ಲಿರುವ  ಬೇರೂರಿರುವ ದಾಸ್ಯದ ಭಾವನೆಯನ್ನು ಹೊರಹಾಕಿ ಸ್ವಾವಲಂಬನೆಯ  ಬೀಜ ಬಿತ್ತ ಬೇಕಾಗಿದೆ.  ಖಾದಿ ಉದ್ಯಮ ಸ್ವದೇಶೀ ಮಾರುಕಟ್ಟೆಯ ಬಲವರ್ಧನೆಯಲ್ಲಿ ಪ್ರಮುಖವಾಗಿದೆ. ಇಂದು ಜಗತ್ತಿನಾದ್ಯಂತ ಬಹು ಬೇಡಿಕೆಯ ಉದ್ಯಮವಾಗಿ ಬೆಳೆದು ನಿಂತುದರಲ್ಲಿ ಗಾಂಧೀಜಿಯವರ ಸ್ವಾವಲಂಬಿ ತತ್ವ ಅಡಿಪಾಯವಾಗಿದೆ.
ಸಮಾಜದಲ್ಲಿ ಎಲ್ಲವೂ ಸರಿಯಾಗಿರಬೇಕೆಂದರೆ  ಸಾಮಾಜಿಕ ಸಾಮರಸ್ಯ ಬಹಳ ಮುಖ್ಯ. ಸ್ವಾಸ್ಥ್ಯ ಸಮಾಜಕ್ಕೆ  ಇದು ಬಹಳ ಅಗತ್ಯ. ಜಾತಿ, ಧರ್ಮಗಳ ಅಸಹಿಷ್ಣುತೆ ಸಲ್ಲ.  ಇಲ್ಲಿ ಎಲ್ಲರೂ ಸಮಾನರು. ಇದು ಅಂದಿಗೂ ಇಂದಿಗೂ ಪ್ರಸ್ತುತವೇ.
ಸಸ್ಯಾಹಾರ ಹಾಗೂ ಉಪವಾಸ ಆರೋಗ್ಯದ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶಗಳು. ಇವು  ಹೋರಾಟದ ಅಸ್ತ್ರ ಗಳು ಕೂಡ.  ಈ ಅಸ್ತ್ರವನ್ನು ಬ್ರಿಟಿಷ್ ರ ವಿರುದ್ಧದ ಹೋರಾಟದಲ್ಲಿ  ಗಾಂಧೀಜಿಯವರು ಸಮರ್ಥವಾಗಿ ಬಳಸಿದರು.
ಅಸ್ಪೃಶ್ಯತೆ, ಅಸಮಾನತೆ  ಸಮಾಜದ ಅಭಿವೃದ್ಧಿ ಯಲ್ಲಿ ದೊಡ್ಡ ತೊಡಕು. ಇದು ಮನಸ್ಸಿನ ಕೊಳಕಿಗೆ ಹಿಡಿದ ಕನ್ನಡಿ. ಎಲ್ಲರೂ ಸಮಾನರು , ಜಾತಿ , ಮತಗಳೆಲ್ಲವೂ ದೇಶದ ಹಿತದ ಮುಂದೆ ಗೌಣವೆಂಬ ದೃಷ್ಟಿ ಕೋನ ಬೆಳೆಯದಿದ್ದರೆ ಅಭಿವೃದ್ಧಿ ಅಸಾಧ್ಯ.
ಸ್ವಾತಂತ್ರ್ಯ ನಂತರ ಗಾಂಧೀಜಿ ಹಾಗೂ ಖಾದಿ ರಾಜಕೀಯ ಓಟು ಬ್ಯಾಂಕ್ ನ ಅಸ್ತ್ರ ವಾಗಿ ದುರುಪಯೋಗವಾಗುತ್ತಿರುವುದು ಮಾತ್ರ ನಂಬಲೇ ಬೇಕಾದ ಸತ್ಯ.!
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
Advertisement

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಕೃಷಿ ಅರಣ್ಯೀಕರಣ ಉತ್ತೇಜನಕ್ಕೆ ಕ್ರಮ | ಕೃಷಿ ಭೂಮಿಯಲ್ಲಿರುವ ಮರ ಕಡಿಯಲು ನಿಯಮಾವಳಿ |
June 30, 2025
6:13 AM
by: ದ ರೂರಲ್ ಮಿರರ್.ಕಾಂ
ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ  ಜನಜಾಗೃತಿ ಮೂಡಿಸುವ  ವಿನೂತನ ಪ್ರಯತ್ನ
June 27, 2025
8:40 PM
by: ದ ರೂರಲ್ ಮಿರರ್.ಕಾಂ
ದೇಸೀ ಗೋವು ಸಾಕಾಣಿಕೆಗೆ ಹಳ್ಳಿಯಷ್ಟೇ ಅಲ್ಲ, ನಗರದಲ್ಲೂ ಸಾಧ್ಯ
June 23, 2025
1:18 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಬೆಳೆ ಸಮಸ್ಯೆ ನಮ್ಮಲ್ಲಿ ಮಾತ್ರವಲ್ಲ.. ಭೂತಾನ್‌ನಲ್ಲೂ ಇದೆ..! ಕಳೆದ 3 ವರ್ಷಗಳಿಂದ ಅಲ್ಲಿ ಏನಾಗುತ್ತಿದೆ..?
June 21, 2025
8:17 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group