ಹಬ್ಬಗಳೆಲ್ಲಾ ಒಂದಾಗಿ, ಒಟ್ಟಾಗಿ ಆಚರಿಸುವ, ಸಂಭ್ರಮಿಸುವ ಕಾಲ. ಪ್ರತೀ ದಿನವೂ ಒಂದಾಗದೇ ಇದ್ದರೂ ಹಬ್ಬದ ಸಮಯದಲ್ಲಿ ಕುಟುಂಬದ ಮಂದಿ, ಊರಿನ ಮಂದಿ ಒಂದಾಗಿ ಸುಖ-ದು:ಖಗಳನ್ನು ಹಂಚಿಕೊಳ್ಳುವ, ಸಾಂತ್ವನ, ನೆಮ್ಮದಿಯನ್ನು ತಂದುಕೊಳ್ಳುವ ದಿನವಾಗಿಯೂ ಇರುತ್ತದೆ. ಹೀಗಾಗಿ ಯಾವುದೇ ಹಬ್ಬ, ಆಚರಣೆ, ನಂಬಿಕೆಗಳು ಮನುಷ್ಯದ ಬದುಕಿಗೆ ಪಾಸಿಟಿವ್ ಸಂದೇಶಗಳನ್ನು ನೀಡುವ, ಬದುಕನ್ನು ಗಟ್ಟಿ ಮಾಡುವ, ಬದುಕಿಗೆ ಧೈರ್ಯ ತುಂಬುವ ದಿನವೂ ಹೌದು.
ಆದರೆ, ಕಳೆದ ಎರಡು ವರ್ಷಗಳಿಂದ ಶ್ರೀಕೃಷ್ಣಜನ್ಮಾಷ್ಟಮಿ, ಶ್ರೀ ಗಣೇಶೋತ್ಸವ ಆಚರಣೆ ಸಾರ್ವಜನಿಕವಾಗಿ ಇಲ್ಲವಾಗಿದೆ. ಕಾರಣ ಕೊರೋನಾ ವೈರಸ್. ಒಂದು ಸಣ್ಣ ವೈರಸ್, ಕಣ್ಣಿಗೆ ಕಾಣದ ಜೀವಿ ಅನೇಕ ಸಂದಿಗ್ಧತೆಯನ್ನು ತಂದಿಟ್ಟಿತು. ಈ ಬಾರಿಯೂ ಗಣೇಶೋತ್ಸವ ಸರಳವಾಗಿ ಆಚರಣೆಯಾಗುತ್ತಿದೆ. ಒಂದು ಕಾಲದಲ್ಲಿ ಗಣೇಶೋತ್ಸವೆಂದರೆ ಸಮಾಜದ ಸಂಘಟನೆ ಎಂದೇ ಆಚರಿಸಲಾಗಿತ್ತಿತ್ತು. ಆದರೆ ಈಗ ಕಾಲದ ಪರಿಸ್ಥಿತಿ ಬದಲಾಯಿಸಿ ಬಿಟ್ಟಿತು. ಆದರೆ ಹಬ್ಬಗಳ ಆಚರಣೆ ನಡೆಯಬೇಕು, ಸರಳವಾಗಿ ಆಚರಿಸಿ ನಾವು ಸಂಭ್ರಮವನ್ನು ಹಂಚಿಕೊಳ್ಳೋಣ, ಸುಖ, ದು:ಖಗಳನ್ನು ಹಂಚಿಕೊಳ್ಳೋಣ, ಸಾಧ್ಯವಾದರೆ ನಮ್ಮೂರಿಗೆ, ನಮ್ಮೂರಿನ ನಮ್ಮವರಿಗಾಗಿ ಒಳ್ಳೆಯದು ಮಾಡೋಣ.ಹಾಗಿದ್ದರೆ ಈ ಬಾರಿ ಗಣೇಶೋತ್ಸವ ಸರಳವಾಗಿ ಆಚರಣೆ ಇರುತ್ತದೆ, ನಾವು ಆಚರಣೆ ಮಾಡಿದ ಗಣೇಶ ಹಬ್ಬವನ್ನು ಎಲ್ಲರ ಜೊತೆ ಹಂಚಿಕೊಳ್ಳೋಣ, ಇದು ವೈಭವಕ್ಕಾಗಿ ಅಲ್ಲ, ನಮ್ಮ ಸಂತೋಷಕ್ಕಾಗಿ, ಎಲ್ಲರೊಂದಿಗೆ ನಾವಿದ್ದೇವೆ ಎನ್ನುವುದಕ್ಕೆ. ಹೀಗಾಗಿ ಈ ನಾವೆಲ್ಲಾ ಸೇರಿ ಹೀಗೆ ಸಂಭ್ರಮಿಸೋಣ……
ದೇಶದ ಹಲವು ರಾಜ್ಯಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಕರ್ನಾಟಕದ…
ವಿಜಯಪುರ ಜಿಲ್ಲೆಯಲ್ಲಿ ಕೋಟಿ ವೃಕ್ಷ ಅಭಿಯಾನ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಹಸಿರು…
ಅಡಿಕೆ ಸಿಪ್ಪೆ, ಸೋಗೆ ಮತ್ತು ಇತರ ಕೃಷಿ ಅವಶೇಷಗಳಿಂದ ಕಾರ್ಬನ್ ನ್ಯಾನೋಸ್ಫಿಯರ್ಗಳನ್ನು ಅಭಿವೃದ್ಧಿಪಡಿಸಿ,…
ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಬೆಳ್ಳಾರೆ…
ಸುಬ್ರಹ್ಮಣ್ಯದಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಹೋಮಿಯೋಕೇರ್ ಗುತ್ತಿಗಾರಿಗೆ ಸ್ಥಳಾಂತರಗೊಂಡಿದ್ದು, ಎಸ್ಎಂಎಸ್ಜಿ ಕಾಂಪ್ಲೆಕ್ಸ್ನಲ್ಲಿ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಗುಡುಗು…