ಭಗವದ್ಗೀತೆ ಆರಂಭದ ವಾಕ್ಯ ಧರ್ಮ, ಕೊನೆಯ ವಾಕ್ಯ ಜಯ. ಇಡೀ ಭಗವದ್ಗೀತೆಯ ಅರ್ಥವೇ ಇದರಲ್ಲಿ ಒಳಗೊಂಡಿದೆ. ಧರ್ಮಕ್ಕೆ ಜಯವಾಗಬೇಕು. ಧರ್ಮ ಎಂದರೆ ಒಳ್ಳೆಯದು ಮಾಡುವುದು ಎಂದರ್ಥ. ಒಳ್ಳೆಯದು ಮಾಡುವುದೇ ಭಗವದ್ಗೀತೆಯ ಒಟ್ಟು ಸಾರ ಎಂದು ವಿವೇಕಾನಂದ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಶೀಶಕುಮಾರ್ ಹೇಳಿದರು.
ಅವರು ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ನಡೆದ ಗೀತಾ ಜಯಂತಿ ಹಾಗೂ ಮೆಟ್ರಿಕ್ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಗವದ್ಗೀತೆಯ ಆರಂಭವಾಗುವುದು ಧರ್ಮ ಕ್ಷೇತ್ರ-ಕುರುಕ್ಷೇತ್ರದ ವಾಕ್ಯಗಳಿಂದ. ಕುರು ಅಂದರೆ ಮಾಡು ಎಂದರ್ಥವೂ ಇದೆ. ಅಂದರೆ ಧರ್ಮ ಕ್ಷೇತ್ರದಲ್ಲಿ ಒಳ್ಳೆಯದು ಮಾಡು ಎಂದರ್ಥ. ಹೀಗಾಗಿ ಮಾಡುವ ಎಲ್ಲಾ ಕೆಸಲಗಳು, ತೊಡಗಿಸಿಕೊಳ್ಳುವ ಎಲ್ಲಾ ಕ್ಷೇತ್ರಗಳಲ್ಲೂ ಒಳ್ಳೆಯದು ಮಾಡು. ಧರ್ಮವನ್ನು ಮಾಡು ಎಂಬುದೇ ಇಡೀ ಗೀತೆಯ ಸಂದೇಶವಾಗಿದೆ. ವಿದ್ಯಾರ್ಥಿಗಳು ವಿದ್ಯಾರ್ಥಿ ಧರ್ಮ ಪಾಲನೆ, ಶಿಕ್ಷಕರು ಶಿಕ್ಷಣ ಕ್ಷೇತ್ರದ ಧರ್ಮ ಪಾಲನೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಆಯಾ ಕ್ಷೇತ್ರದ ಧರ್ಮ ಪಾಲನೆಯೇ ಅಗತ್ಯವಾಗಿದೆ. ಇದನ್ನೇ ಶ್ರೀಕೃಷ್ಣನು ಭಗವದ್ಗೀತೆಯ ಮೂಲಕ ತಿಳಿಸಿದ್ದಾರೆ. ಇದಕ್ಕಾಗಿಯೇ ಭಗವದ್ಗೀತೆಯು ಒಂದು ಅಧ್ಬುತವಾದ ಮನಶಾಸ್ತ್ರ ಗ್ರಂಥವಾಗಿಯೂ, ಮ್ಯಾನೇಜ್ ಮೆಂಟ್ ಕ್ಷೇತ್ರಕ್ಕೆ ನಿರ್ವಹಣಾ ಗ್ರಂಥವಾಗಿಯೂ ಪರಮಶ್ರೇಷ್ಟವಾಗಿದೆ. ಇದಕ್ಕಾಗಿಯೇ ಭಗವದ್ಗೀತೆಯನ್ನು ಓದಿದಂತೆಯೇ ಸಕಾರಾತ್ಮಕ ಬದಲಾವಣೆಗಳು ಸಾಧ್ಯವಿದೆ ಎಂದು ಹೇಳಿದರು.
ಮೆಟ್ರಿಕ್ ಮೇಳವನ್ನು ಉದ್ಘಾಟಿಸಿದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಭಾರತಿ ದಿನೇಶ್ , ಮಕ್ಕಳಿಗೆ ಎಲ್ಲಾ ರೀತಿಯ ಶಿಕ್ಷಣ ಅಗತ್ಯ ಇದೆ. ವ್ಯಾಪಾರ ವಹಿವಾಟಿನ ಮೂಲಕವೂ ಶಿಕ್ಷಣ ಅಗತ್ಯ ಇದೆ ಎಂದರು.
ಸಭಾಧ್ಯಕ್ಷತೆಯನ್ನು ವಿದ್ಯಾರ್ಥಿನಿ ಶ್ರೀಪೂರ್ಣ ಜಿ ಎಲ್ ವಹಿಸಿದ್ದರು. ವೇದಿಕೆಯಲ್ಲಿ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಸಂಸ್ಥೆಗಳ ಅಧ್ಯಕ್ಷ ಗಣೇಶ್ ಪ್ರಸಾದ್ ನಾಯರ್, ಸಂಚಾಲಕ ಚಂದ್ರಶೇಖರ ನಾಯರ್, ಶಾಲಾ ಮುಖ್ಯೋಪಾಧ್ಯಾಯಿನಿ ವಿದ್ಯಾರತ್ನ, ಪಿ ಯು ಕಾಲೇಜಿನ ಪ್ರಾಂಶುಪಾಲ ಸಂಕೀರ್ತನ್ ಹೆಬ್ಬಾರ್ ಉಪಸ್ಥಿತರಿದ್ದರು.
ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ…
ಕೃಷಿಕರಿಗೆ ಹವಾಮಾನದ ಬದಲಾವಣೆಯ ಮಾಹಿತಿ ಇರುವುದಿಲ್ಲ. ಇದಕ್ಕಾಗಿ ಡಿಸೀಸ್ ಫಾರ್ಕಾಸ್ಟ್ ಅಂದರೆ ಯಾವ…
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯ ಅನ್ವಯ, ಉತ್ತರ ಕನ್ನಡ…
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ ಮಿಶ್ರಿತ ಬಿಸಿಲಿನ ವಾತಾವರಣದ ಮುನ್ಸೂಚನೆ…
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…