ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಎಲ್ಲಾ ನಾಯಿಗಳಿಗೂ ಮಾಸ್ಕ್ ಕಡ್ಡಾಯವಾಗಿದೆ. ಇಲ್ಲಿ ಮಾಸ್ಕ್ ಕಡ್ಡಾಯ ಮಾಡಿರುವುದು ಕೊರೋನಾಕ್ಕೆ ಅಲ್ಲ…!. ಬದಲಾಗಿ ನಾಯಿ ಧಾಳಿಯನ್ನು ತಪ್ಪಿಸಲು…!. . ಕೆಲವು ಪ್ರದೇಶಗಳಲ್ಲಿ ಮನುಷ್ಯರ ಮೇಲೆ ನಾಯಿ ದಾಳಿ ಹೆಚ್ಚಾಗಿದ್ದು, ಗಾಜಿಯಾಬಾದ್‌ನ ಮುನ್ಸಿಪಲ್ ಕಾರ್ಪೋರೇಷನ್ ಮಾಸ್ಕ್ ಕಡ್ಡಾಯ ಎಂದು ನೂತನ ನಿಯಮಾವಳಿ ರೂಪಿಸಿದೆ.
ಕಂಡಕಂಡವರಿಗೆ ನಾಯಿ ಕಚ್ಚುವುದು ಹೆಚ್ಚಾಗುತ್ತಿದ್ದು, ಆಡಳಿತವು ನಾಯಿ ಸಾಕುವುದಕ್ಕೆ ಹೊಸದಾಗಿ ನಿಯಮಾವಳಿಗಳನ್ನು ರೂಪಿಸಿದೆ. ಹೋರಾಟ ಮನೋಭಾವ ಇರುವ ಪಿಟ್‌ಬುಲ್, ರೋಟ್‌ವೀಲರ್ ಮತ್ತು ಡೊಗೊ ಅರ್ಜಂಟಿನೋ ತಳಿಗಳನ್ನು ಮುದ್ದಿನ ನಾಯಿಯಂತೆ ಮನೆಯಲ್ಲಿ ಸಾಕುವುದಕ್ಕೆ ನಿಷೇಧ ಹೇರಲಾಗಿದೆ.
ನಾಯಿಗಳನ್ನು ಸಾಕಿದವರಿಗೆ ಅದು ಮುದ್ದಿನ ಪ್ರಾಣಿ, ಆದರೆ ಕಚ್ಚಿಸಿಕೊಂಡವರಿಗೆ ಅದರ ನೋವು ಗೊತ್ತು. ನಾಯಿಯಿಂದ ತಪ್ಪಿಸಿಕೊಳ್ಳಲಾರದ ಮಕ್ಕಳು ಹೆಚ್ಚು ನೋವು ಅನುಭವಿಸುತ್ತಾರೆ. ಪಿಟ್‌ಬುಲ್ ನಾಯಿ ಕಡಿತದಿಂದ ಮಗುವಿನ ಮುಖಕ್ಕೆ 150 ಹೊಲಿಗೆ ಹಾಕಲಾಗಿದೆ ಎಂದು ಗಾಜಿಯಾಬಾದ್ ಮೇಯರ್ ಆಸಾ ಶರ್ಮಾ ಹೇಳಿದ್ದಾರೆ.
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.