ಆಡು ಬಡವರ ಹಸು. ಆಡು ಸಾಕಾಣಿಕೆ ಸಣ್ಣ ರೈತರ ಜೀವನೋಪಾಯಕ್ಕೆ ಸೂಕ್ತವಾದ ಉದ್ದಿಮೆ, ಹಸುವನ್ನು ಕೊಳ್ಳಲಾಗದ ಒಬ್ಬ ಬಡ ರೈತನ ಪಾಲಿಗೆ ಆಡು ಕಾಮಧೇನು. ಆಡಿನ ಹಾಲು ತಾಯಿಯ ಹಾಲಿನಷ್ಠೆ ಪೌಷ್ಠಿಕತೆ ಹೊಂದಿದೆ.
ದನ, ಎಮ್ಮೆ , ಆಡು ಇವುಗಳೆಲ್ಲ ನಮ್ಮ ಆರೋಗ್ಯಕ್ಕೆ ಅಪಾರವಾದ ಕೊಡುಗೆ ನೀಡುವ ಪ್ರಾಣಿಗಳು. ಆದರಲ್ಲೂ ಆಡಿನ ಹಾಲು ತುಂಬಾ ಪೌಷ್ಠಿಕತೆ ಉಳ್ಳದ್ದು. ಇದು ಒಂದು ಸಮತೋಲನ ಆಹಾರದ ಮೂಲ ಕೂಡ ಹೌದು. ತಾಯಿ ಹಾಲಿನಲ್ಲಿರುವ ಎಲ್ಲಾ ಪೋಷಕಾಂಶಗಳು ಆಡಿನ ಹಾಲಿನಲ್ಲಿರುತ್ತೆ. ಅಲ್ಲದೆ ಆಡಿನ ಹಾಲು ಸರಳವಾಗಿ ಜೀರ್ಣವಾಗುತ್ತದೆ, ಹೀಗಾಗಿ ಚಿಕ್ಕ ಮಕ್ಕಳಿಗೆ ತಾಯಿ ಹಾಲಿಗೆ ಪರ್ಯಾಯವಾಗಿ ಆಡಿನ ಹಾಲು ಉತ್ತಮ.
ಮನುಷ್ಯರಲ್ಲಿ ತಾಯಿ ಹಾಲಿನಲ್ಲಿರುವ ಪೋಷಕಾಂಶಗಳೆಲ್ಲ ಆಡಿನ ಹಾಲಿನಲ್ಲಿರುತ್ತವೆ, ಅಲ್ಲದೆ ಆಡಿನ ಹಾಲು ಸರಳವಾಗಿ ಜೀರ್ಣವಾಗುತ್ತದೆ, ಹೀಗಾಗಿ ಚಿಕ್ಕ ಮಕ್ಕಳಿಗೆ ತಾಯಿ ಹಾಲಿಗೆ ಪರ್ಯಾಯವಾಗಿ ಆಡಿನ ಹಾಲು ಉತ್ತಮ.
ಪೌಷ್ಟಿಕತೆ:
ಆಡಿನ ಹಾಲು ಹೆಚ್ಚು ಪೌಷ್ಟಿಕತೆಯಿಂದ ಕೂಡಿದ್ದು ಎಲ್ಲ ಜೀವಸತ್ವಗಳು, ಅಮೈನೋ ಆಮ್ಲಗಳು ಮತ್ತು ಖನಿಜಗಳು ಸರಿ ಸುಮಾರು ಆಕಳ ಹಾಲಿನಲ್ಲಿರುವ ಪ್ರಮಾಣದಷ್ಟೇ ಇರುತ್ತದೆ.
ಆಡಿನ ಹಾಲಿನಲ್ಲಿರುವ ಪೋಶಕಾಂಶಗಳು (100 ಎಂ. ಎಲ್.)
ಪೋಶಕಾಂಶಗಳು ಪ್ರಮಾಣ
ಸಸಾರಜನಕ 3.3 ಗ್ರಾಂ
ಕೊಬ್ಬು 4.5 ಗ್ರಾಂ
ಖನಿಜಾಂಶ 0.8 ಗ್ರಾಂ
ಕಾರ್ಬೋಹೈಡ್ರೇಟ್ 4.6 ಗ್ರಾಂ
ಶಕ್ತಿ 72 ಕಿ. ಕ್ಯಾಲೋರಿ
ಕ್ಯಾಲ್ಸಿಯಂ 170 ಮಿ. ಗ್ರಾಂ
ಫಾಸ್ಪರಸ್ 120 ಮಿ. ಗ್ರಾಂ
ಕಬ್ಬಿಣ 0.3 ಮಿ. ಗ್ರಾಂ
ಬೀಟಾ ಕೆರೋಟಿನ್ 55 ಗ್ರಾಂ
ವಿಟಾಮಿನ್ ಸಿ 1 ಮಿ. ಗ್ರಾಂ
ಸೋಡಿಯಂ 11 ಮಿ. ಗ್ರಾಂ
ಪೋಟ್ಯಾಶಿಯಂ 110 ಮಿ. ಗ್ರಾಂ
ಹಾಲಿನಲ್ಲಿರುವ ಕೊಬ್ಬಿನ ಕಣಗಳು ಚಿಕ್ಕದಾಗಿದ್ದು ಹಾಲಿನಲ್ಲಿ ಸಮನಾಗಿ ಬೆರೆತ ಕಾರಣ ಇತರ ಹಾಲಿನ ಹಾಗೆ ಈ ಹಾಲು ಕೆನೆ ಕಟ್ಟುವುದಿಲ್ಲ, ಆದರೆ ಆಡಿನ ಹಾಲಿನಿಂದ ಖೋವಾ, ಪನೀರ್, ತುಪ್ಪ, ಚೀಸ್ ಇತ್ಯಾದಿ ಪದಾರ್ಥಗಳನ್ನು ತಯಾರಿಸಬಹುದು. ಅಷ್ಟೇ ಅಲ್ಲದೇ ಅವುಗಳಿಗೆ ವಿದೇಶದಲ್ಲಿ ಹೆಚ್ಚು ಬೇಡಿಕೆ ಇದೆ. ಚಿಕ್ಕ ಮಕ್ಕಳಿಗೆ ಆಡಿನ ಹಾಲನ್ನು ತಾಯಿ ಹಾಲಿಗೆ ಪರ್ಯಾಯವಾಗಿ ಬಳಸಬಹುದು.
ಈ ಹಾಲು ಜೀರ್ಣಶಕ್ತಿ ಹೆಚ್ಚಿಸುವುದರ ಜೊತೆಗೆ ಮಕ್ಕಳಲ್ಲಿ ವಾಂತಿ ಭೇದಿ, ಉಸಿರಾಟದ ತೊಂದರೆಗಳಂತಹ ಆರೋಗ್ಯದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಕೊಲೆಸ್ಟರಾಲ್ ಅಂಶ ಕಡಿಮೆ ಮಾಡುವುದರ ಜೊತೆಗೆ ಹೃದಯ ರೊಗ, ಮೂರ್ಛೆರೋಗ, ಪಿತ್ತಕೋಶದ ಹರಳು ಮತ್ತು ಇತರೆ ರೋಗಗಳ ಪ್ರಮಾಣ ಕಡಿಮೆ ಮಾಡುತ್ತದೆ. ಆಡಿನ ಹಾಲಿನ ದಿನನಿತ್ಯದ ಬಳಕೆಯಿಂದ ದೇಹದ ತೂಕ ಹೆಚ್ಚುತ್ತದೆ.
ಅಸ್ಥಿಪಂಜರದಲ್ಲಿ ಖನಿಜಾಂಶಗಳ ಶೇಖರಣೆ, ರಕ್ತದ ಹಿಮೋಗ್ಲೋಬಿನ್ ಅಂಶ ಕೂಡ ಹೆಚ್ಚಾಗುತ್ತದೆ. ಆಡಿನ ಹಾಲು ಪೌಷ್ಠಿಕಾಂಶಗಳಲ್ಲಿ ತಾಯಿಯ ಎದೆ ಹಾಲಿಗೆ ತುಂಬ ಹತ್ತಿರವಾಗಿದೆ.
ಅಡಿಕೆಯ ಔಷಧೀಯ ಗುಣಗಳು ಹಲವಾರು ಇವೆ. ಅಡಿಕೆಯ ಚೊಗರಿನಿಂದ ತಯಾರು ಮಾಡುವ ಸೋಪು…
ಮಂಗಳೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2025ನೇ ಸಾಲಿನ ಇಂಡಿಯನ್ ಅಕಾಡೆಮಿ ಆಫ್ ಓರಲ್…
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್‍ಆರ್ ಎಲ್‍ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…