ದೇಶ ಎದುರಿಸುತ್ತಿರುವ ನಿರುದ್ಯೋಗವನ್ನು ಕಡಿಮೆ ಮಾಡಲು ಛತ್ತೀಸ್‌ಗಢ ಸರ್ಕಾರವು ಗೋಧನ್ ನ್ಯಾಯ್ ಯೋಜನೆಯನ್ನು ಅಳವಡಿಸಿಕೊಂಡಿದೆ. ಇಲ್ಲಿ ಸೆಗಣಿ ಬಳಕೆ ವರ್ಮಿ- ಕಾಂಪೋಸ್ಟ್, ಮಣ್ಣಿನ ಪಾತ್ರೆಗಳು, ಅಗರಬತ್ತಿಗಳ ತಯಾರಿಸಲು ಸೆಗಣಿ ಪ್ರತಿ ಕೆಜಿಗೆ 2 ರೂಗೆ ಖರೀದಿಸಲಾಗುತ್ತದೆ. ಈ ಯೋಜನೆಯಿಂದಾಗಿ ಒಂದೆಡೆ ದನಕರುಗಳು ಮತ್ತು ಸೆಗಣಿ ಸಂಗ್ರಹಿಸುವವರು ಹಣ ಗಳಿಸಿದರೆ ಮತ್ತೊಂದೆಡೆ ಉದ್ಯೋಗ ಸೃಷ್ಟಿಯಾಗಿದೆ.
ಗೋಧನ್ ನ್ಯಾಯ್ ಯೋಜನೆಯನ್ನು ಅಳವಡಿಸಿ, ಇದರ ಅಡಿಯಲ್ಲಿ ಗೋಥಾನ್ ಗಳನ್ನು ಹಗಲಿನಲ್ಲಿ ಜಾನುವಾರುಗಳನ್ನು ತಂದು ಆಹಾರ, ನೀರು ಮತ್ತು ಇತರ ಸೌಲಭ್ಯಗಳನ್ನು ಒದಗಿಸಲು ನಿರ್ಮಿಸಲಾಗಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, 2,80,000 ಜಾನುವಾರು ಹೊಂದಿರುವ ರೈತರು ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ ಎರಡು ಲಕ್ಷದಷ್ಟು ರೈತರು ಸೆಗಣಿ ಮಾರಾಟ ಮಾಡಿದ್ದು, 59 ಲಕ್ಷ ಕ್ವಿಂಟಲ್ ಸೆಗಣಿ ಖರೀದಿಗೆ ಕಾರಣವಾಗಿದೆ.
ಸಮಿತಿಗಳು ಖರೀದಿಸಿದ ಸೆಗಣಿಯಿಂದ 10,10,555 ಕ್ವಿಂಟಾಲ್ ವರ್ಮಿ ಕಾಂಪೋಸ್ಟ್ ತಯಾರಿಸಲಾಗಿದ್ದು, 4,31,701 ಕ್ವಿಂಟಾಲ್ ಸೂಪರ್ ಕಾಂಪೋಸ್ಟ್ ತಯಾರಿಸಲಾಗಿದೆ. ಈ ವ್ಯವಹಾರದಿಂದ 48 ಕೋಟಿ ರೂಪಾಯಿ ಆದಾಯವಾಗಿದ್ದರೆ, ವರ್ಮಿ ಕಾಂಪೋಸ್ಟ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರಿಗೆ 29 ಕೋಟಿ ರೂ.ಗಿಂತ ಹೆಚ್ಚು ಲಾಭಾಂಶ ನೀಡಲಾಗಿದೆ. ಇತರ ಸಂಬಂಧಿತ ವ್ಯವಹಾರಗಳು ಸಹ ಲಾಭವನ್ನು ಗಳಿಸಿದೆ. ಮತ್ತು ಅದರೊಂದಿಗೆ ಸಂಬಂಧಿಸಿದ ಜನರಿಗೆ ಲಾಭಾಂಶವನ್ನು ಒದಗಿಸಲಾಗಿದ್ದು, ಇದರಿಂದ ಬಿಡಾಡಿ ದನಗಳಿಂದ ಬೆಳೆ ಹಾನಿಯಾಗದಂತೆ ತಡೆಯುವ ಜತೆಗೆ ಉದ್ಯೋಗಾವಕಾಶವನ್ನು ಕಲ್ಪಿಸಿದೆ.
26.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ…
ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಸೊಬಗು ಕಳೆಗಟ್ಟಿದೆ. ಇಂದು ಕಡಲೆಕಾಯಿ…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಗಳ ಹಾವಳಿ ತಡೆಯಲು ಸರ್ಕಾರದ ಸಚಿವರು ಹಾಗೂ ಅರಣ್ಯ ಇಲಾಖೆ…
ಅಡಿಕೆ ಹಳದಿ ಎಲೆರೋಗ ಬಾಧಿಸಿದ ತೋಟದ ಕೃಷಿಕ ಶಂಕರಪ್ರಸಾದ್ ರೈ ಅವರು ಕೃಷಿ…
ಅಡಿಕೆ ಕೃಷಿಯ ಜೊತೆಗೆ ಮಿಶ್ರ ಕೃಷಿಯನ್ನು ಏಕೆ ಮಾಡಬೇಕು..? ಯಾವ ಕೃಷಿಯನ್ನು ಮಾಡಬಹುದು..?…