ಬಿಸಿಲಿನ ಬೇಗೆಗೆ ಕರಾವಳಿ ಜನತೆ ಹೈರಾಣಾಗಿ ಹೋಗಿದ್ದಾರೆ. ಈಗ ಮಾರ್ಚ್ ತಿಂಗಳು…. ಹಾಗಾದ್ರೆ ಎಪ್ರಿಲ್, ಮೇ ಯ ಪರಿಸ್ಥಿತಿ ಹೇಗಿರಬಹುದು ಎಂದು ಊಹಿಸಿದ್ರೆನೇ ಉರಿ ಕಿತ್ತುಕೊಂಡು ಬರುತ್ತದೆ. ಇದೀಗ ಈ ಬಗ್ಗೆ ಹವಾಮಾನ ಇಲಾಖೆಯಿಂದ ಮಹತ್ವದ ಘೋಷಣೆಯೊಂದು ಹೊರಬಿದ್ದಿದೆ. ದಿನೇ ದಿನೇ ಹೆಚ್ಚುತ್ತಿರುವ ಬಿಸಿಲಿನ ಝಳದಿಂದ ಬೆಂಡಾಗುತ್ತಿದ್ದೀರಾ? ನಿಮಗೊಂದು ಒಳ್ಳೆಯ ಸುದ್ದಿ ಇಲ್ಲಿದೆ.
ಬೆಳಗ್ಗೆ ಚಳಿ, ಮಧ್ಯಾಹ್ನವಾಗುತ್ತಿದ್ದಂತೆ ಕಣ್ಣು ಬಿಡಲಾರದಷ್ಟು ಬಿಸಿಲು…! ಇದು ಸದ್ಯ ರಾಜ್ಯದ ನಾಗರಿಕರಲ್ಲಿ ಅನಾರೋಗ್ಯಕ್ಕೆ ಕಾರಣವಾಗಿರೋ ಹವಾಮಾನ. ಅದರಲ್ಲೂ ಕರ್ನಾಟಕದ ಕರಾವಳಿ ಭಾಗದಲ್ಲಿ ಹೆಚ್ಚುತ್ತಿರುವ ಬಿಸಿಲಿನಿಂದ ಹೀಟ್ ವೇವ್ ಉಂಟಾಗಲಿದೆಯೇ ಎಂಬ ಆತಂಕ ಮನೆ ಮಾಡಿತ್ತು. ಆದರೆ ಇದು ತಾಪಮಾನದಲ್ಲಿ ಏಕಾಏಕಿ ಉಂಟಾದ ಏರಿಕೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು.
ಶನಿವಾರ ಹಾಗೂ ಭಾನುವಾರ ಕರಾವಳಿ ಕರ್ನಾಟಕದ ಪ್ರತ್ಯೇಕ ಸ್ಥಳಗಳಲ್ಲಿ ಹೀಟ್ ವೇವ್ ಕಂಡುಬರುವ ಸಾಧ್ಯತೆಯಿದೆ ಇದೆ ಎಂದು ಎಚ್ಚರಿಕೆ ನೀಡಿತ್ತು. ಅದಾದ ಬಳಿಕ ವಾತಾವರಣದಲ್ಲಿ ಸ್ವಲ್ಪ ಬದಲಾವಣೆ ಕಂಡುಬರುತ್ತಿದೆ.
ಇದೀಗ ಹೆಚ್ಚುತ್ತಿರುವ ಬಿಸಿಲಿನ ಕುರಿತು ಹವಾಮಾನ ಇಲಾಖೆ ಇನ್ನೊಂದು ಮಹತ್ವದ ಮಾಹಿತಿ ನೀಡಿದೆ. ಕರಾವಳಿ ಭಾಗದಲ್ಲಿ ಉಷ್ಣಾಂಶ ಇಳಿಕೆಯಾಗಲಿದೆ ಎಂದು ಸಮಾಧಾನಕರ ಸುದ್ದಿಯನ್ನು ಇಲಾಖೆ ಪ್ರಕಟಿಸಿದೆ. ಅಲ್ಲದೇ, ಕರಾವಳಿ ಭಾಗದಲ್ಲಿ ಹೀಟ್ ವೇವ್ ಉಂಟಾಗುವ ಎಚ್ಚರಿಕೆಯನ್ನು ಸಹ ಹವಾಮಾನ ಇಲಾಖೆ ಹಿಂಪಡೆದಿದೆ.
ಬೆಳಗ್ಗೆ ಚಳಿ, ಮಧ್ಯಾಹ್ನವಾಗುತ್ತಿದ್ದಂತೆ ಕಣ್ಣು ಬಿಡಲಾರದಷ್ಟು ಬಿಸಿಲು. ಇದು ಸದ್ಯ ರಾಜ್ಯದ ನಾಗರಿಕರಲ್ಲಿ ಅನಾರೋಗ್ಯಕ್ಕೆ ಕಾರಣವಾಗಿರೋ ಹವಾಮಾನ. ಬೆಂಗಳೂರು ಸೇರಿದಂತೆ ಹಲವೆಡೆ ನಿರಂತರ ಕೆಮ್ಮು, ಉಸಿರಾಟದ ತೊಂದರೆ ಮತ್ತು ಜ್ವರದಿಂದ ಬಳಲುತ್ತಿರುವ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಸಂಖ್ಯೆ ಹೆಚ್ಚುತ್ತಿದೆ.
ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ಉತ್ತರ ಭಾರತದಲ್ಲಿ ಫ್ಲೂ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಆದರೆ ಕಳೆದ ಕೆಲವು ದಿನಗಳ ವಾತಾವರಣ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಊರುಗಳ ನಾಗರಿಕರನ್ನೂ ಅನಾರೋಗ್ಯಕ್ಕೀಡುಮಾಡಿದೆ.
ಒಟ್ಟಾರೆ ಕರಾವಳಿ ಸೇರಿದಂತೆ, ಕರ್ನಾಟಕದಲ್ಲಿ ಹೆಚ್ಚುತ್ತಿದ್ದ ಬಿಸಿಲಿನ ಝಳದಿಂದ ಬಸವಳಿದಿದ್ದ ಸಾರ್ವಜನಿಕರಿಗೆ ಈ ಸುದ್ದಿಯಿಂದ ಕೊಂಚ ಸಮಾಧಾನ ಸಿಗಬಹುದು.
₹2,000ಕ್ಕಿಂತ ಹೆಚ್ಚಿನ ನಿರ್ದಿಷ್ಟ UPI ವ್ಯಾಪಾರಿ ವಹಿವಾಟುಗಳಿಗೆ MDR ವಿಧಿಸುವ ಕೇಂದ್ರದ ನಿರ್ಧಾರಕ್ಕೆ…
ಸಮರ್ಕಂಡ್‌ನಲ್ಲಿ ನಡೆದ ಫಿಡೆ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತದ ಪುರುಷರ ತಂಡ ಬೆಳ್ಳಿ ಹಾಗೂ…
ಕಳೆದ ಕೆಲವು ದಶಕಗಳಲ್ಲಿ ಮಳೆಯ ಸಮಯ, ತೀವ್ರತೆ ಮತ್ತು ಹಂಚಿಕೆಯಲ್ಲಿ ಬದಲಾವಣೆ ಕಂಡುಬರುತ್ತಿರುವುದಕ್ಕೆ…
ಮುಂಗಾರು ಹಿಂದೆ ಸರಿಯುವ ಪ್ರಕ್ರಿಯೆ ಆರಂಭವಾಗಿದ್ದರೂ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇನ್ನೂ ಗುಡುಗು…
ಕರ್ನಾಟಕದಲ್ಲಿ ಸದ್ಯಕ್ಕೆ ವಿದ್ಯುತ್ ಲೋಡ್ ಶೆಡ್ಡಿಂಗ್ ಜಾರಿಗೊಳಿಸುವ ಯಾವುದೇ ನಿರ್ಧಾರ ಸರ್ಕಾರದ ಮುಂದಿಲ್ಲ…
ಸೂಪರ್ ಎಲ್ ನಿನೋದಿಂದ 2027ರ ಫೆಬ್ರವರಿವರೆಗೆ ಸಾಮಾನ್ಯ ವರ್ಷಕ್ಕಿಂತ 4.51 ಲಕ್ಷ ತಾಪಮಾನ…