Advertisement
MIRROR FOCUS

Positive News | ಮೊಗ್ರದಲ್ಲಿ ನಿರ್ಮಾಣವಾಯಿತು “ಗ್ರಾಮ ಸೇತು ” | ಜನರಿಂದ ಜನರಿಗಾಗಿ ಜನರೇ ನಿರ್ಮಿಸಿದ ಕಾಲುಸಂಕ |

Share
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಎಂಬ ಪುಟ್ಟ ಹಳ್ಳಿ. ಸುಮಾರು  1300-1500 ಜನಸಂಖ್ಯೆ ಇರುವ ಪ್ರದೇಶ. ಈ ಊರಿನ ವ್ಯಾಪ್ತಿಗೆ ಕಮಿಲ, ಏರಣಗುಡ್ಡೆ, ಮಲ್ಕಜೆ, ಬಳ್ಳಕ್ಕ ಸೇರಿದಂತೆ ಒಂದೆರಡು ಪುಟ್ಟ ಪುಟ್ಟ ಊರು ಬರುತ್ತದೆ. ಊರಿನ ಕೇಂದ್ರ ಮೊಗ್ರ ಎಂಬ ಪ್ರದೇಶ. ಊರಿನ ಮತದಾನ ಕೇಂದ್ರವೂ ಮೊಗ್ರ ಶಾಲೆ. ಆದರೆ ಕಳೆದ ಅನೇಕ ವರ್ಷಗಳಿಂದ ಇಲ್ಲಿಗೆ ಸಂಪರ್ಕದ ವ್ಯವಸ್ಥೆ ಇರಲಿಲ್ಲ. ಇದೀಗ ಜನರಿಂದ ಜನರಿಗಾಗಿ ಜನರೇ “ಗ್ರಾಮ ಸೇತು” ಎಂಬ ಹೆಸರಿನಲ್ಲಿ  ಕಾಲು ಸಂಕ ರಚನೆ ಮಾಡಿದ್ದಾರೆ.
ನಿರ್ಮಾಣಗೊಂಡ ಕಾಲು ಸಂಕ
ಗುತ್ತಿಗಾರು ಗ್ರಾಮದ ಮೊಗ್ರ ಪ್ರದೇಶದಲ್ಲಿ ಮೊಗ್ರ ಸರಕಾರಿ ಶಾಲೆ- ಆರೋಗ್ಯ ಉಪಕೇಂದ್ರ-ಅಂಗನವಾಡಿ- ಮೊಗ್ರ‌‌  ಕನ್ನಡ ದೇವತೆ ಯಾನೆ ಪುರುಷ  ದೈವಸ್ಥಾನ, ಭಜನಾ ಮಂದಿರ ಇದೆ. ಆದರೆ ಈ ಕೇಂದ್ರವನ್ನು  ಸಂಪರ್ಕ ಮಾಡಲು, ಬಹುಪಾಲು ಜನರಿಗೆ ಕಷ್ಟವಾಗುತ್ತದೆ. ಕಾರಣ ಇಲ್ಲಿ ಹರಿಯುವ ಹೊಳೆ. ಇದುವರೆಗೂ ಇಲ್ಲಿಗೆ ಸೇತುವೆ ಆಗಿಲ್ಲ. ಈ ಕಾರಣದಿಂದ ಶಾಲೆಗೆ ಬರುವ ಮಕ್ಕಳಿಗೆ ಹೊಳೆ ದಾಟಲು ಕಷ್ಟವಾಗುತ್ತದೆ. ಮಹಿಳೆಯರಿಗೂ ಹೊಳೆ ದಾಟಲು ಆಗುವುದಿಲ್ಲ. ಇನ್ನು ಮಳೆಗಾಲ ಆರೋಗ್ಯ ಸಂಬಂಧಿ ವಿಷಯಗಳಿಗೂ ಕಷ್ಟವಾಗುತ್ತದೆ. ಹೀಗಾಗಿ ಸೇತುವೆ ರಚನೆಯಾಗಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇಲ್ಲಿನ ಜನರಿಂದ ಇದೆ. 2006  ರಿಂದಲೂ ವಿವಿಧ ಮಾಧ್ಯಮಗಳ ಮೂಲಕ, ಹಾಗೂ ನೇರವಾಗಿಯೂ ಜನಪ್ರತಿನಿಧಿಗಳಿಗೆ ಇಲ್ಲಿನ  ಜನರು ಮನವಿ ಮಾಡುತ್ತಲೇ ಬಂದಿದ್ದರು. ಆದರೆ ಇದುವರೆಗೂ ಸೇತುವೆ ರಚನೆ ಆಗಿಲ್ಲ  ಜನಪ್ರತಿನಿಧಿಗಳು ಚುನಾವಣೆಯ ಹೊತ್ತಿನಲ್ಲಿ ಭರವಸೆಯನ್ನು ಮಾತ್ರವೇ ನೀಡುತ್ತಾರೆ. ಆದರೆ ಸೇತುವೆ ಕನಸಾಗಿಯೇ ಉಳಿದಿದೆ. ಇದಕ್ಕಾಗಿ ವಿವಿಧ ಮಾಧ್ಯಮಗಳ ಮೂಲಕ ಸರಕಾರವನ್ನೂ ಗಮನ ಸೆಳೆಯಲಾಗಿದೆ. ಹಾಗಿದ್ದರೂ ಸೇತುವೆ ಆಗಲಿಲ್ಲ.
2006 ರಿಂದಲೂ ಶಾಲಾ ವಿದ್ಯಾರ್ಥಿಗಳು ಹೀಗೆ ದಾಟುತ್ತಿದ್ದರು.
ಇದುವರೆಗೂ ಈ ಹೊಳೆ ದಾಟಲು ಗ್ರಾಮ ಪಂಚಾಯತ್‌ ಅಡಿಕೆ ಮರದ ಪಾಲವನ್ನು ಹಾಕುತ್ತಿತ್ತು. ಇದರ ಮೇಲೆ ಶಾಲಾ ಮಕ್ಕಳು ದಾಟಬೇಕಿತ್ತು, ಮಹಿಳೆಯರೂ ದಾಟಬೇಕು. ಊರವರ ಸುರಕ್ಷತೆ ಹಾಗೂ ಮಳೆಗಾಲ ದ್ವಿಚಕ್ರ ಸವಾರರಿಗೆ ಅನುಕೂಲವಾಗುವಂತೆ  ಈ ಬಾರಿ ಸೇತುವೆ, ಅಡಿಕೆ ಮರದ ಪಾಲದ ಬದಲಾಗಿ ಕಬ್ಬಿಣದ  ಕಾಲು ಸಂಕವನ್ನು ಊರವರೇ  ನಿರ್ಮಿಸಿ  ದ್ವಿಚಕ್ರ ವಾಹನ ಸಹಿತ ಊರವರು ಭದ್ರತೆಯಿಂದ ನಡೆದಾಡುವಂತೆ ಮಾಡಲು ಯೋಜನೆ ರೂಪಿಸಿ ,   ತೂಗುಸೇತುವೆಗಳ ಸರದಾರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುಳ್ಯದ ಗಿರೀಶ್ ಭಾರಧ್ವಾಜ್ ಅವರ ಪುತ್ರ ಪತಂಜಲಿ ಭಾರಧ್ವಾಜ್ ಅವರ ನೇತೃತ್ವದಲ್ಲಿ  ದ್ವಿಚಕ್ರ ವಾಹನ ಓಡಾಡಲು ಸಾಧ್ಯವಾಗುವಂತೆ ಕಬ್ಬಿಣದ ಕಾಲು ಸಂಕ  ರಚನೆ ಮಾಡಲು ಮಾತುಕತೆ ನಡೆಸಿ ಅಂದಾಜುಪಟ್ಟಿ ‌ತಯಾರಿಸಿ  ಕಬ್ಬಿಣದ ಕಾಲು ನಿರ್ಮಿಸಿದ್ದಾರೆ. ಇದಕ್ಕಾಗಿ ಊರ ಜನರು ಶ್ರಮದಾನದ ಮೂಲಕ ನೆರವು ಹಾಗೂ ಧನ ಸಹಾಯ ಮಾಡಿದರೆ, ಪರವೂರಿನ ಅನೇಕದ ದಾನಿಗಳು ನೆರವು ನೀಡಿದ್ದಾರೆ. ಕಂಪನಿಗಳೂ ಸಹಾಯ ಮಾಡಿದ್ದಾರೆ. ಸುಮಾರು 1 ಲಕ್ಷರೂಪಾಯಿ ವೆಚ್ಚದಲ್ಲಿ ಈ ಸೇತುವೆ ನಿರ್ಮಾಣವಾಗಿದೆ. ಸರಕಾರದ ಹಾಗೂ ಸ್ಥಳಿಯ ಯಾವುದೇ ಇಲಾಖೆಗಳಿಂದ ನೆರವು ಪಡೆಯದೇ ಕಾಲು ಸಂಕ ರಚನೆ ಮಾಡಲಾಗಿದೆ.
ಪತಂಜಲಿ ಭಾರಧ್ವಾಜ್‌ ಅವರ ತಂಡ
ಜೂ.5 ರಂದು ಅಂದಾಜುಪಟ್ಟಿ ತಯಾರಿಸಿ ಜೂ.24 ರಂದು ಕಾಮಗಾರಿ ಮುಕ್ತಾಯಗೊಂಡಿಡ್ದು ಅತೀ ವೇಗದಲ್ಲಿ ಈ ಕಾಮಗಾರಿ ಮುಗಿದಿರುವುದು ಪತಂಜಲಿ ಭಾರಧ್ವಾಜ್‌ ಅವರ ಕಾರ್ಯ ತತ್ಪರತೆ ಹಾಗೂ  ಗ್ರಾಮಸ್ಥರ ಕಾಳಜಿ ಮತ್ತು ಸೇತುವೆಯ ಬೇಡಿಕೆಗೆ ಸಾಕ್ಷಿಯಾಗಿದೆ. ಈ ಸೇತುವೆ ಸುಮಾರು 20 ಮೀಟರ್‌ ಉದ್ದವಿದ್ದು ಸುಮಾರು 1.2 ಮೀಟರ್‌ ಅಗಲಿವಿದೆ. ನಡೆದಾಡುವುದು  ಮಾತ್ರವಲ್ಲ ದ್ವಿಚಕ್ರ  ವಾಹನ ಕೂಡಾ ಓಡಾಡಬಹುದಾಗಿದೆ. ಎಲ್ಲಾ ಕೆಲಸಗಳು ಮುಗಿದಿದ್ದು , ಸಣ್ಣ ಪುಟ್ಟ ಕೆಲಸಗಳ ಬಳಿಕ ವಾರದಲ್ಲಿ  ಜನರ ಓಡಾಟ ಹಾಗೂ ದ್ವಿಚಕ್ರ ವಾಹನಗಳ ಓಡಾಟಕ್ಕೆ ಮುಕ್ತವಾಗಲಿದೆ.
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಇಂಧನ ಉಳಿತಾಯ | ಪರಿಸರ ಜಾಗೃತಿ | ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ

ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…

4 hours ago

ಕೃಷಿ ಭೂಮಿ ಉಳಿಸಿಕೊಳ್ಳಲು- ಆರೋಗ್ಯ ಕಾಪಾಡಲು ಸಾವಯವ ಕೃಷಿಯತ್ತ ಒಲವು ಬೆಳೆಸಿ | ಐಐಟಿ ನಿರ್ದೇಶಕ ಡಾ.ವೆಂಕಪ್ಪಯ್ಯ ಆರ್. ದೇಸಾಯಿ

ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…

4 hours ago

ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಕ್ಯೂಆರ್ ಕೋಡ್ ಅಳವಡಿಕೆ

ಕ್ಯೂಆರ್ ಕೋಡ್  ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…

4 hours ago

ಅಡಿಕೆ ಹಳದಿರೋಗ ಪೀಡಿತ ಪ್ರದೇಶದಲ್ಲಿ ಗೇರುಕೃಷಿ ಹೇಗೆ..? | ಸಂಪಾಜೆಯಲ್ಲಿ ಪರ್ಯಾಯ ಕೃಷಿಯ ಬಗ್ಗೆ ಚಿಂತನೆ |

ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…

5 hours ago

ಅಡಿಕೆ ಮೇಲೆ ಕ್ಯಾನ್ಸರ್‌ ತೂಗುಗತ್ತಿಯ ಭಯ ಏಕೆ ? | ಅಡಿಕೆಯ ಔಷಧೀಯ ಅಧ್ಯಯನ ಸಾಕಷ್ಟಿದೆ | ಈಗ ಸಂಘಟಿತ ಹೋರಾಟ ಅಗತ್ಯ |

ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…

14 hours ago