“ಗುಲಾಬ್” ಚಂಡಮಾರುತ ಇಂದು ಸಂಜೆ ಅಥವಾ ರಾತ್ರಿ ಒಡಿಶಾದ ಭುವನೇಶ್ವರ ಹಾಗೂ ಆಂಧ್ರ ಕರಾವಳಿಯ ವಿಶಾಖಪಟ್ಟಣ ಮೂಲಕ ಭೂಭಾಗಕ್ಕೆ ಪ್ರವೇಶಿಸುವ ಚಂಡಮಾರುತವು, ಛತ್ತೀಸಗಡ, ಮಹಾರಾಷ್ಟ್ರ ಹಾಗೂ ಗುಜರಾತ್ ಭಾಗಗಳಲ್ಲಿ ಸಂಚರಿಸಿ ಸೆ.30 ರ ಮಧ್ಯಾಹ್ನ ಅರಬ್ಬಿ ಸಮುದ್ರ ಪ್ರವೇಶಿಸಲಿದೆ.
ಈಗಾಗಲೇ ಗುಜರಾತ್ ತೀರದಲ್ಲಿ ಸಣ್ಣ ಪ್ರಮಾಣದ ವಾಯುಭಾರ ಉಂಟಾಗಿದೆ. ಸದ್ಯ ಚಂಡಮಾರುತವು ಗೋಪಾಲ್ ಪುರದಿಂದ 270 ಕಿಮೀ ದೂರದಲ್ಲಿ ಹಾಗೂ ಕಳಿಂಗಪಟ್ಟಣದಿಂದ 330 ಕಿಮೀ ದೂರದಲ್ಲಿ ಚಂಡಮಾರುತದ ಪ್ರಭಾವ ಕಂಡುಬಂದಿದೆ.
ಈಗಾಗಲೇ ಗುಜರಾತ್ ತೀರದಲ್ಲಿ ಸಣ್ಣ ಪ್ರಮಾಣದ ವಾಯುಭಾರ ಉಂಟಾದ ಕಾರಣ ” ಗುಲಾಬ್” ನ ಪರಿಣಾಮ ಕರ್ನಾಟಕ ಮೇಲೆ ಅಷ್ಟೇನು ಇಲ್ಲದಿದ್ದರೂ, ಉತ್ತರ ಕರ್ನಾಟಕದ ಯಾದಗಿರಿ, ವಿಜಯಪುರ, ಬೀದರ್ ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿ ಭಾರಿ ಮಳೆ ಹಾಗೂ ಅನಾಹುತ ಸೃಷ್ಟಿಸುವ ಮುನ್ಸೂಚನೆ ಇದೆ.
ಸೆ. 29 ರಿಂದ ಇದರ ಪ್ರಭಾವ ಕ್ಷೀಣಿಸುತ್ತಿದ್ದು. ಸೆ.30 ನೇ ತಾರೀಕಿನಂದು ಆಂಧ್ರ ಹಾಗೂ ತಮಿಳುನಾಡು ನೇರಕ್ಕೆ ಬಂಗಾಳಕೂಲ್ಲಿಯಲ್ಲಿ ಬೃಹತ್ ಚಂಡಮಾರುತ ತಿರುಗುವಿಕೆ (Cyclonic Circulation) ಉಂಟಾಗುವ ಲಕ್ಷಣಗಳಿರುವುದರಿಂದ ಅ.1 ತಾರೀಕಿನಿಂದ ಕಾಸರಗೋಡು ಹಾಗೂ ಕರ್ನಾಟಕ ಕರಾವಳಿ ಭಾಗಗಳೂ ಸೇರಿದಂತೆ ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ.
27.9.2021ರ ಬೆಳಿಗ್ಗೆ 8 ಗಂಟೆವರೆಗಿನ ಹವಾಮಾನ ಮುನ್ಸೂಚನೆ :
ದಕ್ಷಿಣ ಕನ್ನಡದ ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ ಸುತ್ತಮುತ್ತ ಭಾಗಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ಇದೆ.
ರಾಯಚೂರು, ವಿಜಾಪುರ, ಯಾದಗಿರಿ, ಬೀದರ್ ಹಾಗೂ ಗುಲ್ಬರ್ಗ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ.
ಉಳಿದ ಕರ್ನಾಟಕದ ಭಾಗಗಳಲ್ಲಿ ಬಿಸಿಲು ಹಾಗೂ ಆಗಾಗ ಸ್ವಲ್ಪ ಮೋಡದ ವಾತಾವರಣದ ಮುನ್ಸೂಚನೆ ಇದೆ.
ಜಮ್ಮು-ಕಾಶ್ಮೀರದಲ್ಲಿ ಮತ್ತೆ ನಿನ್ನೆ ಮೇಘಸ್ಫೋಟ ಸಂಭವಿಸಿದೆ. ರಾಸಿ ಜಿಲ್ಲೆಯಲ್ಲಿ ಮೇಘಸ್ಫೋಟದಿಂದ ಉಂಟಾದ ದಿಢೀರ್…
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಅತಿ ಹೆಚ್ಚು ಬೆಳೆ ವಿಮೆ ಪಡೆದ…
ಉತ್ತರ ಥೈಲಾಂಡ್ ನಲ್ಲಿ ಈಗಾಗಲೇ ವಾಯುಭಾರ ಕುಸಿತ ಉಂಟಾಗಿದ್ದು, ಸೆಪ್ಟೆಂಬರ್ 2 ರ…
ವಿಜಯಪುರ ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾಡಳಿ, ಜಿಲ್ಲಾ ಪಂಚಾಯತಿ, ಕೃಷಿ ಇಲಾಖೆ, …
ಸಂಕಷ್ಟದಲ್ಲಿದ್ದಾಗ ಮಾಡಿದ ಸಹಾಯಗಳು ಅನುಭವಿಸಿದವನ ಬದುಕಿಗೆ ‘ಸಂಜೀವಿ(ವ)ನಿ’. ಈತನ ಕಷ್ಟವೆಂಬ ರೋಗಕ್ಕೆ ಆತ…
ಕಳೆದ ಕೆಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಕಡಲು ಕೂಡ…