ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಕೆಲವು ಸಮಯಗಳಿಂದ ಪ್ರತೀ ವಾರ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ. ಸ್ವಚ್ಛತೆಗಾಗಿ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತೀ ವಾರ ಅಭಿಯಾನ ನಡೆಯುತ್ತದೆ. ಹಾಗಿದ್ದರೂ ರಸ್ತೆ ಬದಿ ಕಸ ಎಸೆಯುವುದು ಕಡಿಮೆಯಾಗಿರಲಿಲ್ಲ. ಇದೀಗ ರಸ್ತೆ ಬದಿ ಕಸ ಎಸೆದ ಪ್ರಕರಣವೊಂದರಲ್ಲಿ ಪತ್ತೆ ಮಾಡಿ ಗುತ್ತಿಗಾರು ಗ್ರಾಪಂ ದಂಡ ವಿಧಿಸಿದೆ. …….ಮುಂದೆ ಓದಿ…..
ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ ಬದಿ ಕಸ ಎಸೆಯದಂತೆ ಕಳೆದ ಹಲವು ಸಮಯಗಳಿಂದ ಜಾಗೃತಿ ಮೂಡಿಸಲಾಗುತ್ತಿದೆ. ದಯವಿಟ್ಟು ರಸ್ತೆ ಬದಿ, ಕಾಡಿನ ಅಂಚಿನಲ್ಲಿ ಕಸ ಎಸೆಯಬೇಡಿ ಎಂದು ಪದೇಪದೇ ಮನವಿ ಮಾಡಲಾಗುತ್ತಿತ್ತು. ಹಾಗಿದ್ದರೂ ಕಸ ಎಸೆಯುವ ಪ್ರವೃತ್ತಿ ಕಡಿಮೆಯಾಗಿರಲಿಲ್ಲ.ಎರಡು ದಿನದ ಹಿಂದೆ ಗುತ್ತಿಗಾರು-ಬಳ್ಪ ರಸ್ತೆಯ ಚತ್ರಪ್ಪಾಡಿ ಬಳಿ ವಾಹನದಲ್ಲಿ ತಂದು ಕಸ ಸುರಿಯಲಾಗಿತ್ತು. ಹೀಗೆ ಕಸ ಸುರಿದರನ್ನು ಪತ್ತೆ ಮಾಡಿ ಗ್ರಾ ಪಂ ಆಡಳಿತವು 1000 ರೂಪಾಯಿ ದಂಡ ವಿಧಿಸಿದೆ ಹಾಗೂ ಕಸ ಎಸೆದವರಿಂದಲೇ ಕಸ ಹೆಕ್ಕಿಸಿದೆ.
ಗುತ್ತಿಗಾರಿನ ವಿವಿದೆಡೆ ಈಗಲೂ ಕಸ ಎಸೆಯಲಾಗುತ್ತಿದೆ.ಹೀಗೆ ಕಸ ಎಸೆದವರ ಬಗ್ಗೆ ಗ್ರಾಮ ಪಂಚಾಯತ್ ಗೆ ಸಾರ್ವಜನಿಕರೂ ಮಾಹಿತಿ ಹಾಗೂ ಫೋಟೊ ಸಹಿತ ದಾಖಲೆ ನೀಡಿ ದಂಡ ವಿಧಿಸಲು ಒತ್ತಾಯ ಮಾಡುವುದು ಹಾಗೂ ಕಸವನ್ನು ಹಾಕಿದವರಿಂದಲೇ ತೆಗೆಯುವಂತೆ ಒತ್ತಾಯ ಮಾಡಬಹುದಾಗಿದೆ.
ಗುತ್ತಿಗಾರು-ಬಳ್ಪ ರಸ್ತೆಯ ನಡುವೆ ಕಾಡಿನ ನಡುವೆ ಸಾಕಷ್ಟು ಪ್ರಮಾಣದಲ್ಲಿ ಕಸ, ಕೋಳಿತ್ಯಾಜ್ಯ ಸೇರಿದಂತೆ ಇತರ ವಸ್ತುಗಳನ್ನು ಕಾಡಿನಲ್ಲಿ ಎಸೆಯುವ ಬಗ್ಗೆ ಈಗಾಗಲೇ ಮಾಹಿತಿ ಬಂದಿದ್ದು, ಈ ಬಗ್ಗೆಯೂ ಕಾರ್ಯಾಚರಣೆ ನಡೆಸಿ ಕಸ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುವುದು ಎಂದು ಸಾರ್ವಜನಿಕರು ಹೇಳಿದ್ದಾರೆ. ಅಲ್ಲದೆ ಗ್ರಾಪಂ ಕೂಡಾ ಕಾಡಿನಲ್ಲಿ ಕಸ ಎಸೆಯುವವರ ವಿರುದ್ಧ ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಳ್ಳಬೇಕಿದೆ. ಬಳ್ಪ ಕಾಡಿನ ರಸ್ತೆ ಬದಿ ಎಸೆಯುವ ಕಸವು ಹರಿಯುವ ಹೊಳೆಗೆ ಸೇರುತ್ತಿದೆ.ಈ ನೀರನ್ನೇ ಹಲವು ಮಂದಿ ಕುಡಿಯುವುದಕ್ಕೆ ಕೂಡಾ ಬಳಕೆ ಮಾಡುತ್ತಿದ್ದರು. ಹೀಗಾಗಿ ಕಾಡು ಮಾತ್ರವಲ್ಲ, ನದಿಯೂ ಮಲಿನವಾಗುತ್ತಿದೆ ಎಂದು ಪರಿಸರ ಪ್ರೇಮಿಗಳು ಹೇಳಿದ್ದಾರೆ.
ಕಳೆದ ವಾರ ಬಳ್ಪ ಕಾಡಿನಲ್ಲಿ ಕಸ ಎಸೆಯುವುದರ ಬಗ್ಗೆ ಗುತ್ತಿಗಾರು ಗ್ರಾಮ ಪಂಚಾಯತ್ ಆಡಳಿತ ಖುದ್ದು ಪರಿಶೀಲನೆ ನಡೆಸಿದ್ದು, ಈ ಬಗ್ಗೆ ನಿಗಾ ನಿಗಾವಹಿಸಿದೆ.
Guthigar Gram Panchayat has fined those who threw garbage on the roadside. Cleanliness campaign is also going on in Guthigar Gram Panchayat for some time now.
ಸರಕಾರದ ಸೂಚನೆಯಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಇ- ಕೆವೈಸಿ ಮಾಡಲಾದ ಪಡಿತರ ಚೀಟಿ ಫಲಾನುಭವಿಗಳನ್ನು…
ನೈಸರ್ಗಿಕ ರಬ್ಬರ್ ಮತ್ತು ಅದರ ಉತ್ಪನ್ನಗಳು ಅರಣ್ಯನಾಶ ಮುಕ್ತ ನಿಯಮಗಳಿಗಾಗಿ ಯುರೋಪಿಯನ್ ಒಕ್ಕೂಟ…
ಮುನ್ಸೂಚನೆಯಂತೆ ಮೇ 1 ರಿಂದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಮಳೆ ಆರಂಭವಾಗುವ ಸಾಧ್ಯತೆಗಳಿವೆ.
ಖಾಸಗಿಯವರಿಂದ ಒತ್ತುವರಿಯಾಗಿರುವ ಪ್ರದೇಶವನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮುಖ್ಯಮಂತ್ರಿ…
ಭಾರತವು 4.8 ಟನ್ ಲಸಿಕೆಗಳನ್ನು ಅಫ್ಘಾನಿಸ್ತಾನಕ್ಕೆಕಳುಹಿಸುವ ಮೂಲಕ ಮಾನವೀಯ ನೆರವು ನೀಡಿದೆ. ಇದರಲ್ಲಿ…
ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು, ಭ್ರಷ್ಟಾಚಾರದ ವಿರುದ್ಧ…