ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಗುತ್ತಿಗಾರು-ಬಳ್ಳಕ್ಕ-ಪಂಜ ರಸ್ತೆ ಅದು. ಅನೇಕ ವರ್ಷಗಳ ಬಳಿಕ ಮರು ಡಾಮರೀಕರಣವಾಯಿತು. ಎರಡು ಹಂತದಲ್ಲಿ ಇಬ್ಬರು ಗುತ್ತಿಗೆದಾರರ ಮೂಲಕ ಡಾಮರೀಕರಣ ನಡೆಯಿತು. ಅನುದಾನಗಳು ಬಂದಾಗ ಸಹಜವಾಗಿಯೇ ಜನರಿಗೆ ಸಂತಸವಾಯಿತು, ಜನಪ್ರತಿನಿಧಿಗಳೂ ಹೆಮ್ಮೆ ಪಟ್ಟರು. ಕಾಮಗಾರಿ ನಡೆಯುವ ವೇಳೆ ಅನೇಕರ ಮಾತುಗಳು ಮೌನವಾದವು, ಕಾಮಗಾರಿ ಸರಿಯಾಗುತ್ತಿಲ್ಲ ಎಂದು ಜನರು ಮಾತನಾಡಿದರೂ ಯಾರೊಬ್ಬರೂ ಮಾತನಾಡಿಲ್ಲ. ಈ ಸಂದರ್ಭದಲ್ಲಿ ನ್ಯಾಯವಾದಿ ಅನಿಲ್ ಹುಲಿಕೆರೆ ಎಂಬ ಯುವಕ ನಾಗರಿಕರ ಪರವಾಗಿ ಕಾಮಗಾರಿ ಸರಿಯಾಗುತ್ತಿಲ್ಲ ಎಂಬ ಅನುಮಾನವನ್ನು ಬಹಿರಂಗವಾಗಿ ವ್ಯಕ್ತ ಪಡಿಸಿದರು.
ಗ್ರಾಮಮಟ್ಟದಲ್ಲಿ ಪಂಚಾಯತ್ ಮೂಲಕ ರಚನೆಯಾದ ವ್ಯಾಟ್ಸಪ್ ಗ್ರೂಪುಗಳಲ್ಲೂ ತಿಳಿಸಿದ್ದರು. ಸರಕಾರವೇ ಸೂಚಿಸಿದಂತೆ ಗ್ರಾಮ ಮಟ್ಟದಲ್ಲಿ ರಚನೆಯಾದ ವ್ಯಾಟ್ಸಪ್ ಗ್ರೂಪುಗಳಲ್ಲಿ ನೀಡಿದ ಇಂತಹ ಮಾಹಿತಿಗಳ ಬಗ್ಗೆ ತಕ್ಷಣವೇ ಕ್ರಮವಾಗಬೇಕು. ಹಾಗಿದ್ದರೂ ಯಾವುದೇ ಕ್ರಮ ಆಗಿರಲಿಲ್ಲ ಎನ್ನುತ್ತಾರೆ ಅನಿಲ್.
ಈ ಸಂದರ್ಭ ಸ್ಥಳೀಯರು ಸರಿಯಾಗಿ ಸ್ಪಂದನೆ ಮಾಡಿಲ್ಲವೆಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ದಾಖಲೆ ಸಹಿತ ಅನಿಲ್ ಹುಲಿಕೆರೆ ವಾಟ್ಸಪ್ ಸಂದೇಶ ಮಾಡಿದರು. ಆಧುನಿಕ ಜಾಲತಾಣವನ್ನು ರಚನಾತ್ಮಕವಾಗಿ ಬಳಸಿಕೊಂಡ ಯುವಕನಿಗೆ ಸಚಿವರು ಸ್ಪಂದಿಸಿದರು. ಪುತ್ತೂರು ಸಹಾಯಕ ಕಮೀಶನರ್ ಸ್ಪಂದಿಸಿದರು. ತಕ್ಷಣವೇ ಕಾಮಗಾರಿ ಸರಿಯಾಗಿ ನಡೆಸಬೇಕು ಎಂದು ಸೂಚನೆ ನೀಡಿದರು. ಹಾಗಿದ್ದರೂ ಸ್ಥಳೀಯವಾಗಿ ಯಾವುದೇ ಸರಿಯಾದ ಸ್ಪಂದನೆ ಇರಲಿಲ್ಲ ಎನ್ನುತ್ತಾರೆ ಯುವಕ ಅನಿಲ್.
ಇದೀಗ ಗುತ್ತಿಗಾರು-ಚಣಿಲ ರಸ್ತೆಯ ಅಲ್ಲಲ್ಲಿ ರಸ್ತೆಯಲ್ಲಿ ಗುಂಡಿ ಬಿದ್ದಿದೆ. ಕೊನೆಗೂ ಕಾಮಗಾರಿ ಸರಿಯಾಗುತ್ತಿಲ್ಲ ಎಂದು ಪದೇ ಪದೇ ಹೇಳಿರುವ ಯುವಕನ ಸಾಮಾಜಿಕ ಕಾಳಜಿಗೆ ಜನಪ್ರತಿನಿಧಿಗಳು ಧ್ವನಿಯಾಗಲಿಲ್ಲ, ಅಧಿಕಾರಿಗಳೂ ಮೌನವಾದರು. ಇದೀಗ ರಸ್ತೆ ಗುಂಡಿ ಬಿದ್ದಿದೆ. ಈಗ ಮಾತನಾಡುವವರು ಯಾರು ಎನ್ನುವುದೇ ಪ್ರಶ್ನೆಯಾಗಿದೆ. ಪ್ರಧಾನಿಗಳು ಹೇಳುವ ಚೌಕೀದಾರ್ ಎನ್ನುವುದು ಈಗ ಪದೇ ಪದೇ ಇಂತಹ ರಸ್ತೆಗಳ ಮುಂದೆ ಬಂದು ನಿಲ್ಲುತ್ತದೆ.
ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್ ಚೆಸ್ ಪಂದ್ಯಾವಳಿ ಮೇ ತಿಂಗಳ 2 ರಿಂದ…
ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿವಿಧ…
ಈಗಿನಂತೆ ಮೇ 1ರಿಂದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಹಾಗೂ ಮೇ 5ರಿಂದ ಉತ್ತರ…
ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ ನಡೆಯಲಿದೆ. ಮೈಸೂರು ಜಿಲ್ಲೆಯ…
ಸಾರ್ವಜನಿಕರು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ವರುಣ ಮಿತ್ರ ಸಹಾಯವಾಣಿ 9243345433…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490