ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಅವರಿಗೆ ತಲವಾರು ದಾಳಿ ಯತ್ನ ಪ್ರಕರಣ | ಆರೋಪಿ ಮನೆಯಿಂದ ಸ್ಪಾನರ್‌ ರಾಡ್‌ ವಶ…! |

Advertisement
Advertisement

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಮಂಗಳೂರಿನಿಂದ ಹಿಂದಿರುಗುತ್ತಿದ್ದ ವೇಳೆ ಅವರ ಕಾರಿಗೆ ದುಷ್ಕರ್ಮಿಗಳು ಅಡ್ಡಗಟ್ಟಿ ತಲವಾರು ಬೀಸಿದ ಬಗ್ಗೆ ಬಂಟ್ವಾಳ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿತ್ತು. ಇದೀಗ ಆರೋಪಿ ಮನೆಯಿಂದ “ ಸ್ಪಾನರ್ ರಾಡ್  ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಪರಂಗಿಪೇಟೆಯ ಬಳಿ ನಡೆದ ತಲವಾರು ದಾಳಿ ಪ್ರಕರಣದ ಬಗ್ಗೆ ಬಂಟ್ವಾಳ ಪೊಲೀಸರು ವಿಚಾರಣೆ ನಡೆಸಿದಾಗ ಕೆಎಲ್‌ ರಿಜಿಸ್ಟ್ರೇಶನ್‌ ಸ್ಕಾರ್ಪಿಯೋ ವಾಹನದಲ್ಲಿದ್ದ ವ್ಯಕ್ತಿ  ತಲವಾರು ಝಲಪಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿತ್ತು. ಪೊಲೀಸ್‌ ತನಿಖೆಯಲ್ಲಿ ರಿಯಾಜ್‌ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ,ಆ ವ್ಯಕ್ತಿಯ ವಿರುದ್ಧ ಇದುವರೆಗೂ ಯಾವುದೇ ಕ್ರಿಮಿನಲ್‌ ಕೇಸು ದಾಖಲಾಗದೇ ಇರುವುದು  ಹಾಗೂ ತಲವಾರು ಇಲ್ಲದೇ ಇದ್ದದ್ದು ಬೆಳಕಿಗೆ ಬಂದಿತ್ತು. ಆದರೆ ವಾಹನ ಓವರ್‌ ಟೇಕ್‌ ಸಂಬಂಧಿತ ಪ್ರಕರಣ ಇದಾಗಿತ್ತು ಎಂದು ಜಿಲ್ಲಾ ಪೋಲೀಸ್‌ ವರಿಷ್ಟಾಧಿಕಾರಿ ಮಾಹಿತಿ ನೀಡಿದ್ದರು. ಹಾಗೂ ಬಳಿಕ ತನಿಖೆ ನಡೆಸಲಾಗಿತ್ತಿದೆ ಎಂದು ಮಾಹಿತಿ ನೀಡಿದ್ದರು.

Advertisement
Advertisement

ಆದರೆ ನಂತರ ಬೆಳವಣಿಗೆಯಲ್ಲಿ ಮತ್ತೆ ಆರೋಪಿ ರಿಯಾಜ್‌ ಮನೆಯಲ್ಲಿ ಶೋಧ ಕಾರ್ಯ ನಡೆಸಿದ ಪೊಲೀಸರು  ಪ್ರಕರಣಕ್ಕೆ ಸಂಬಂಧಿಸಿದಂತೆ ಆಯುಧವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ ಎರಡು ಮೊಬೈಲ್ ಫೋನ್‌ಗಳನ್ನು
ವಶಪಡಿಸಿಕೊಳ್ಳಲಾಗಿದೆ. ಸ್ಕಾರ್ಪಿಯೊದಿಂದ ಒಂದು ಸ್ಪ್ಯಾನರ್ ರಾಡ್  ವಶಪಡಿಸಿಕೊಳ್ಳಲಾಗಿದೆ. ಟಯರ್‌ ಬದಲಾವಣೆಯ ಸಮಯದಲ್ಲಿ ಇದನ್ನು ಬಳಕೆ ಮಾಡುತ್ತಾರೆ. ಇದೇ ಸ್ಪಾನರ್‌ ಹಿಡಿದು ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈದು ಹೊಳೆಯುವ ಎಲ್‌ ಆಕಾರದ ವಸ್ತುವಾಗಿರುವ ಕಾರಣ ಇದೇ ಸ್ಪಾನರ್‌ ಬಳಕೆ ಮಾಡಿರಬೇಕು ಎಂದು ಹೇಳಲಾಗುತ್ತಿದೆ.

ನಿನ್ನೆ ದುಷ್ಕರ್ಮಿಗಳು ಅಡ್ಡಗಟ್ಟಿ ತಲವಾರು ಬೀಸಿಲ್ಲ, ವಾಹನ ಓವರ್‌ಟೇಕ್‌ ಮಾಡುವ ವಿಚಾರದ ಪ್ರಕರಣ ಎಂದಿರುವ ಘಟನೆ ಇಂದು ಟಯರ್‌ ಬದಲಾವಣೆ ಮಾಡುವ ರಾಡ್‌ ವಶಪಡಿಸಿಕೊಳ್ಳುವವರೆಗೆ ತಲಪಿದೆ.

Advertisement
Advertisement
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಅವರಿಗೆ ತಲವಾರು ದಾಳಿ ಯತ್ನ ಪ್ರಕರಣ | ಆರೋಪಿ ಮನೆಯಿಂದ ಸ್ಪಾನರ್‌ ರಾಡ್‌ ವಶ…! |"

Leave a comment

Your email address will not be published.


*