Advertisement
ಸುದ್ದಿಗಳು

ಆರೋಗ್ಯ ಹೆಚ್ಚಿಸುವ ಬಸಳೆ ಸೊಪ್ಪು

Share

ತುಳುನಾಡಿನಲ್ಲಿ ಬಸಳೆ ಸೊಪ್ಪು ಪೇಮಸ್ ತರಕಾರಿ. ಈ ಬಸಳೆ ಸೊಪ್ಪಿನಿಂದ ಆರೋಗ್ಯದ ಮೇಲಾಗುವ ಪ್ರಯೋಜನವನ್ನು ತಿಳಿದುಕೊಂಡರೆ ಆರೋಗ್ಯವೂ ಸುಧಾರಣೆಯಾಗುತ್ತದೆ, ಗ್ರಾಮೀಣ ಭಾಗದಲ್ಲಿ ಉತ್ತಮ ವ್ಯವಹಾರ, ಆದಾಯವೂ ಆಗುತ್ತದೆ..

  • ಮೂಳೆಗಳ ಶಕ್ತಿ: ಬಸಳೆ ಸೊಪ್ಪಿನಲ್ಲಿ ವಿಟಮಿನ್ ಏ ಪ್ರಮಾಣ ಅಧಿಕವಾಗಿದೆ. ವಿಟಮಿನ್ , ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಹಾಯ ಮಾಡುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ ಮತ್ತು ಮುರಿತದ ಅಪಾಯ ಕಡಿಮೆಯಾಗುತ್ತದೆ. ಬಸಳೆ ಸೊಪ್ಪು ಅಧಿಕ ಕಬ್ಬಿಣಾಂಶವನ್ನು ಹೊಂದಿದೆ. ಜೊತೆಗೆ ಇದರಲ್ಲಿ ವಿಟಮಿನ್ ಸಿ ಯೂ ಹೇರಳವಾಗಿದೆ. ವಿಟಮಿನ್ ಸಿ ಇರುವ ಕಾರಣ ದೇಹವು ಕಬ್ಬಿಣಾಂಶವನ್ನು ಸುಲಭವಾಗಿ ಹೀರಿಕೊಂಡು ರಕ್ತಹೀನತೆಯನ್ನು ತಡೆಯುತ್ತದೆ.
  • ದೃಷ್ಟಿ ದೋಷ: ಬಸಳೆಯಲ್ಲಿ ವಿಟಮಿನ್ ಎ ಜೊತೆಗೆ ಲುಟೀನ್ ಮತ್ತು ಝೀಕ್ಸಾಂಧಿನ್ ಎಂಬ ಪ್ರಬಲ ಕ್ಯಾರೋಟಿನಾಯ್ಡ್ ಗಳಿವೆ. ಇವು ನೇರಳಾತೀತ ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸಿ ವಯಸ್ಸಾದಂತೆ ಬರುವ ದೃಷ್ಟಿ ದೋಷಗಳನ್ನು ತಡೆಯುತ್ತದೆ.
  • ಉತ್ತಮ ನಿದ್ರೆ: ಬಸಳೆಯಲ್ಲಿರುವ ಮೆಗ್ನಿಷೀಯಮ್ ಮತ್ತು ಇತರ ಖನಿಜಗಳು ನರಮಂಡಲವನ್ನು ಶಾಂತಗೊಳಿಸಿ ಉತ್ತಮ ನಿದ್ರೆಗೆ ಸಹಕರಿಸುತ್ತದೆ.
  • ಕಾಂತಿಯುತ ಚರ್ಮ: ಬಸಳೆ ಸೊಪ್ಪಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮದ ಜೀವಕೋಶಗಳಿಗೆ ಹಾನಿಯಾಗುವುದನ್ನು ತಡೆಯುತ್ತದೆ.
  • ತೂಕ ಇಳಿಕೆ ಸಹಕಾರಿ: ಕಡಿಮೆ ಕ್ಯಾಲೋರಿ ಗಳನ್ನು ಮತ್ತು ಹೆಚ್ಚಿನ ನೀರಿನಾಂಶವನ್ನು ಹೊಂದಿದೆ. ಇದರಲ್ಲಿರುವ ಅಧಿಕ ಪೈಬರ್ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ.
  • ಕರುಳಿನ ಆರೋಗ್ಯ: ಬಸಳೆ ಸೊಪ್ಪಿನಲ್ಲಿ ಕೇವಲ ಪೈಬರ್ ಮಾತ್ರವಲ್ಲ, ಇದು ಪ್ರಿಬಯಾಟಿಕ್ ಗುಣಗಳನ್ನು ಹೊಂದಿದೆ. ಇದು ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸಹಾಯ ಮಾಡ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಚಿಕಿತ್ಸೆ ಮುಗಿದರೂ ಕ್ಯಾನ್ಸರ್ ಅಪಾಯ ಏಕೆ ಮುಗಿಯುವುದಿಲ್ಲ?

 ಕ್ಯಾನ್ಸರ್ ಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡ ನಂತರವೂ ವರ್ಷಗಳ ಬಳಿಕ ಮತ್ತೆ ರೋಗ ಕಾಣಿಸಿಕೊಳ್ಳುವುದಕ್ಕೆ…

8 hours ago

‌ ಭೂಮಿಗೆ ಬಿದ್ದ ಪ್ಲಾಸ್ಟಿಕ್ ಕರಗುವಂತೆ ಮಾಡಬಹುದು…!, ಇದು ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರವೇ?

ಪ್ರಕೃತಿಯಲ್ಲಿ ಇರುವ ಡಿಎನ್‌ಎ, ಪ್ರೋಟೀನ್‌ಗಳಂತೆ ಪ್ಲಾಸ್ಟಿಕ್‌ಗಳನ್ನೂ ಕೂಡಾ ನಿಗದಿತ ಅವಧಿಯಲ್ಲಿ ಸ್ವಯಂ ಕರಗುವಂತೆ…

8 hours ago

2026 ರಲ್ಲಿ ಕೃಷಿ ಕ್ಷೇತ್ರ ಸ್ಥಿರತೆ , ಆದರೆ ಅಸಮಾನತೆ ಮುಂದುವರಿಕೆ

2026ರಲ್ಲಿ ಕೃಷಿ ಕ್ಷೇತ್ರ ಸ್ಥಿರಗೊಳ್ಳುವ ನಿರೀಕ್ಷೆಯಿದ್ದರೂ, ವಿವಿಧ ಬೆಳೆಗಳ ನಡುವೆ ಅಸಮಾನ ಸ್ಥಿತಿಗಳು…

9 hours ago

ಶಾಖದ ಅಲೆಗಳ ಮುನ್ಸೂಚನೆಗೆ ವಿಜ್ಞಾನಿಗಳಿಂದ ಹೊಸ ಅಧ್ಯಯನ

ವಿಶ್ವಾದ್ಯಂತ ಶಾಖದ ಅಲೆಗಳು ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ, ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT)…

9 hours ago

ಕೃಷಿ ಭೂಮಿಯಲ್ಲಿರುವ ವಿದ್ಯುತ್ ಕಂಬಕ್ಕೆ ಹೊಸ ನಿಯಮ

ಗ್ರಾಮೀಣ ವಿದ್ಯುದ್ದೀಕರಣವನ್ನು ಬಲಪಡಿಸಲು ಮತ್ತು ಸಾರ್ವಜನಿಕ ಉಪಯುಕ್ತತೆ ಮೂಲಸೌಕರ್ಯಕ್ಕಾಗಿ ಭೂಮಿಯನ್ನು ಬಳಸಿದ ರೈತರಿಗೆ…

9 hours ago

ಬಿಪಿ ಕಾಯಿಲೆ ಇರುವವರಿಗೆ ಇಲ್ಲಿದೆ ಕೆಲವು ಆರೋಗ್ಯಕರ ಟಿಪ್ಸ್

ದೇಹದಲ್ಲಿ ರಕ್ತದೊತ್ತಡ ಹೆಚ್ಚಾಗಿ ಬಿಟ್ಟರೆ ಅಂದರೆ ನಿಯಂತ್ರಣ ತಪ್ಪಿದರೆ ವಿವಿಧ ಸಮಸ್ಯೆ ಉಂಟಾಗುತ್ತದೆ. ಮನುಷ್ಯನ…

9 hours ago