ಸುಳ್ಯ ತಾಲೂಕಿನ ಗ್ರಾಮೀಣ ಭಾಗದಲ್ಲಿ ಭಾರೀ ಮಳೆಯಾಗಿದೆ. ಮೆಟ್ಟಿನಡ್ಕ, ಕಂದ್ರಪ್ಪಾಡಿ, ಗುತ್ತಿಗಾರು, ಕಮಿಲ, ಬಳ್ಪ, ಸಂಪಾಜೆ, ಕಲ್ಲುಗುಂಡಿ, ಮಡಪ್ಪಾಡಿ ಮೊದಲಾದ ಕಡೆಗಳಲ್ಲಿ ಭೀಕರ ಮಳೆಯಾಗಿದೆ. ಭಾರೀ ಮಳೆಗೆ ವಳಲಂಬೆ ದೇವಸ್ಥಾನದ ಹೊರಾಂಗಣ ಮುಳುಗಿದೆ. ಅನೇಕ ವರ್ಷಗಳಿಂದ ಈ ಮಾದರಿಯ ಮಳೆ ಕಂಡಿರಲಿಲ್ಲ ಎಂದು ಜನರು ಹೇಳುತ್ತಾರೆ. ಚಿಲ್ತಡ್ಕ. ಮೆಟ್ಟಿನಡ್ಕ ಮೊದಲಾದ ಕಡೆಗಳಲ್ಲೂ ಹೊಳೆ ಉಕ್ಕಿ ಹರಿದಿದೆ. ಸದ್ಯ ಮಳೆ ಕಡಿಮೆಗೊಂಡಿದೆ.
Heavy rain waterlogged into Valalambe temple.
ಭಾರೀ ಮಳೆಗೆ ವಳಲಂಬೆ ದೇವಸ್ಥಾನದ ಆವರಣಕ್ಕೆ ನುಗ್ಗಿದ ನೀರು.
#rain #HeavyRain #KarnatakaRain #sulliarains #ruralmirror #ಮಳೆ #ವಳಲಂಬೆ pic.twitter.com/Aezl4KoBc8Advertisement— theruralmirror (@ruralmirror) August 3, 2022
ಭಾರೀ ಮಳೆಗೆ ಬಳ್ಪದ ಬೋಗಾಯನಕೆರೆ ತುಂಬಿ ರಸ್ತೆಗೆ ನೀರು ಉಕ್ಕಿದರೆ, ಪಂಜ ಹೊಳೆ ತುಂಬಿ ಹರಿದು ಪಂಜ-ಸುಬ್ರಹ್ಮಣ್ಯ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕಲ್ಲುಗುಂಡಿ ಸಂಪಾಜೆಯಲ್ಲೂ ಸತತ ಮೂರನೇ ದಿನವೂ ಭಾರೀ ಮಳೆಯಾಗಿದೆ. ಪಯಸ್ವಿನಿ ನದಿ ಉಕ್ಕಿ ಹರಿಯುತ್ತಿದೆ. ಕಲ್ಲುಗುಂಡಿ ಪ್ರದೇಶದಲ್ಲಿ ರಸ್ತೆಯಲ್ಲಿ ಭಾರೀ ನೀರು ಹರಿಯುತ್ತಿದೆ. ಕೆಲವು ಹೆದ್ದಾರಿಯಲ್ಲಿ ಹೊಳೆಯ ನೀರು ಹಿನ್ನೀರಿನಂತೆ ನಿಂತಿದೆ. ವಾಹನ ಸಂವಾರ ಸ್ಥಗಿತಗೊಂಡಿದೆ.
