ಮಲೆನಾಡು ತಪ್ಪಲಲ್ಲಿ ಧಾರಾಕಾರ ಮಳೆ – ಹಲವು ಕಡೆ ಕೆಲವೇ ಗಂಟೆಯಲ್ಲಿ 100 ಮಿಮೀ ದಾಟಿದ ಮಳೆ

August 25, 2026
1:40 PM
ದಕ್ಷಿಣ ಕನ್ನಡದ ಮಲೆನಾಡು ತಪ್ಪಲಿನ ಸುಬ್ರಹ್ಮಣ್ಯ, ಸುಳ್ಯ, ಕಡಬ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯ ಬಳಿಕ ಹಠಾತ್ ಧಾರಾಕಾರ ಮಳೆಯಾಗುತ್ತಿದ್ದು, ಹಲವು ಕಡೆ 100 ಮಿ.ಮೀ.ಗೂ ಅಧಿಕ ಮಳೆ ದಾಖಲಾಗಿದೆ. ಗ್ರಾಮೀಣ ಭಾಗದ ಹೊಳೆಗಳಲ್ಲಿ ನೀರಿನ ಮಟ್ಟ ಏರುತ್ತಿದ್ದು, ಗ್ರಾಮೀಣ ಭಾಗದ ಜನರಲ್ಲಿ ಆತಂಕ ಹೆಚ್ಚಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಲೆನಾಡು ತಪ್ಪಲಿನ ಹಲವು ಪ್ರದೇಶಗಳಲ್ಲಿ ಮಂಗಳವಾರ ಬೆಳಗ್ಗಿನಿಂದ ಧಾರಾಕಾರ ಮಳೆಯಾಗುತ್ತಿದ್ದು, ಕೃಷಿಕರ ಮಾಹಿತಿ ಪ್ರಕಾರ ಹಲವು ಕಡೆ 100 ಮಿ.ಮೀ.ಗೂ ಅಧಿಕ ಮಳೆಯಾಗಿರುವ ವರದಿಯಿದೆ. ಯಾವುದೇ ಮುನ್ಸೂಚನೆಯಿಲ್ಲದೆ ಬೆಳಗ್ಗೆ 10 ಗಂಟೆಯ ಬಳಿಕ ಮಳೆ ತೀವ್ರಗೊಂಡಿರುವುದು ಗ್ರಾಮೀಣ ಭಾಗದ ಜನರಲ್ಲಿ ಆತಂಕ ಮೂಡಿಸಿದೆ.

ಕುಕ್ಕೆ ಸುಬ್ರಹ್ಮಣ್ಯದ ಆಸುಪಾಸು, ಸುಳ್ಯ ತಾಲೂಕಿನ ಬಳ್ಪ, ಗುತ್ತಿಗಾರು, ಕಡಬ, ಬಾಳುಗೋಡು ಹಾಗೂ ಮಲೆನಾಡು ತಪ್ಪಲಿನ ಹಲವು ಗ್ರಾಮಗಳಲ್ಲಿ ಭಾರೀ ಮಳೆಯಾಗುತ್ತಿದೆ.

ತುಂಬಿ ಹರಿಯುತ್ತಿರುವ ಹೊಳೆ, ನದಿಗಳು : ನಿರಂತರ ಮಳೆಯಿಂದ ಗ್ರಾಮೀಣ ಭಾಗದ ಬಹುತೇಕ ಹೊಳೆಗಳು ಮತ್ತು ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ತಗ್ಗು ಪ್ರದೇಶಗಳಲ್ಲಿರುವ ಜನರು ಹಾಗೂ ನದಿ, ಹೊಳೆಗಳ ಸಮೀಪದ ನಿವಾಸಿಗಳು ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ. ಸುಬ್ರಹ್ಮಣ್ಯದ ಆದಿ ಸುಬ್ರಹ್ಮಣ್ಯ ಸಮೀಪದ ಕನ್ನಡಿ ಹೊಳೆ ಹಾಗೂ ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕೆಲವೇ ಗಂಟೆಗಳಲ್ಲಿ ಭಾರೀ ಮಳೆ : ಬೆಳಗ್ಗೆ 10 ಗಂಟೆಯ ನಂತರ ಮಳೆ ತೀವ್ರಗೊಂಡಿರುವುದರಿಂದ ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರಮಾಣದ ಮಳೆ ದಾಖಲಾಗುತ್ತಿದೆ. ಹಲವು ಕಡೆ ಈಗಾಗಲೇ 100 ಮಿ.ಮೀ.ಗೂ ಅಧಿಕ ಮಳೆ ದಾಖಲಾಗಿದೆ ಎಂದು ಸ್ಥಳೀಯ ಮಳೆಮಾಪನ ಮಾಡುವ ಕೃಷಿಕರು ತಿಳಿಸಿದ್ದಾರೆ.  ಮಳೆ ಮುಂದುವರಿಯುತ್ತಿದ್ದು ಸಣ್ಣ ಹೊಳೆಗಳು ಉಕ್ಕಿ ಹರಿಯುತ್ತಿವೆ ಹಾಗೂ ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಸಂಚಾರದ ಮೇಲೂ ಪರಿಣಾಮ ಬೀರುವ ಆತಂಕವಿದೆ.

ಹವಾಮಾನ ಮುನ್ಸೂಚನೆಗಿಂತ ಭಿನ್ನವಾದ ಬೆಳವಣಿಗೆ :  ಇದಕ್ಕೂ ಮುನ್ನ ಆಗಸ್ಟ್ 26ರಿಂದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯ ಮುನ್ಸೂಚನೆ ಇತ್ತು. ಆದರೆ ಸ್ಥಳೀಯ ಮಟ್ಟದಲ್ಲಿ ವಾತಾವರಣದ ಚಲನೆ ಬದಲಾಗಿರುವುದರಿಂದ ನಿರೀಕ್ಷೆಗಿಂತ ಹೆಚ್ಚು ತೀವ್ರವಾದ ಮಳೆ ದಿಢೀರನೆ ಕಾಣಿಸಿಕೊಂಡಿದೆ. ಇಂತಹ ಸಂದರ್ಭದಲ್ಲಿ ಜಿಲ್ಲಾಮಟ್ಟದ ಒಟ್ಟಾರೆ ಮುನ್ಸೂಚನೆಗಿಂತ ಸ್ಥಳೀಯ ಮಳೆ ಪ್ರಮಾಣ ಮತ್ತು ಹೊಳೆ–ನದಿಗಳ ನೀರಿನ ಮಟ್ಟದ ಏರಿಕೆಯನ್ನು ಗಮನಿಸುವುದು ಹೆಚ್ಚು ಮುಖ್ಯ.

ಜನರು ಎಚ್ಚರಿಕೆಯಿಂದಿರಬೇಕು : ಭಾರೀ ಮಳೆಯ ಸಂದರ್ಭದಲ್ಲಿ ನದಿ, ಹೊಳೆ, ಸೇತುವೆ ಮತ್ತು ತಗ್ಗು ಪ್ರದೇಶಗಳತ್ತ ಅನಗತ್ಯವಾಗಿ ತೆರಳದಂತೆ ಸ್ಥಳೀಯರು ಎಚ್ಚರಿಕೆ ವಹಿಸುವುದು ಅಗತ್ಯ. ವಿಶೇಷವಾಗಿ ಕುಮಾರಧಾರಾ, ಕನ್ನಡಿ ಹೊಳೆ ಸೇರಿದಂತೆ ನೀರಿನ ಮಟ್ಟ ವೇಗವಾಗಿ ಏರುತ್ತಿರುವ ಜಲಮೂಲಗಳ ಸಮೀಪ ಇರುವವರು ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸಬೇಕು. ಮಳೆ ಮುಂದುವರಿದರೆ ನೀರಿನ ಮಟ್ಟ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿರುವುದರಿಂದ ಸ್ಥಳೀಯ ಆಡಳಿತ ಮತ್ತು ವಿಪತ್ತು ನಿರ್ವಹಣಾ ಸಿಬ್ಬಂದಿ ಪರಿಸ್ಥಿತಿಯನ್ನು ಗಮನಿಸುವುದು ಅಗತ್ಯವಾಗಿದೆ.

ಮುನ್ಸೂಚನೆ ಇಲ್ಲದಿದ್ದರೂ ಸ್ಥಳೀಯವಾಗಿ ಹಠಾತ್ ಭಾರೀ ಮಳೆ ಸುರಿಯಬಹುದು ಎಂಬುದಕ್ಕೆ ಇಂದಿನ ಮಲೆನಾಡು ತಪ್ಪಲಿನ ಬೆಳವಣಿಗೆ ಮತ್ತೊಂದು ಉದಾಹರಣೆಯಾಗಿದೆ.

ಕರಾವಳಿ ತೀರದಲ್ಲಿ ಮಳೆಯ ಮುನ್ಸೂಚನೆ ಇದ್ದರೂ, ಗಾಳಿಯ ಚಲನೆಯಿಂದ ಮೋಡಗಳು ಘಟ್ಟದ ಬುಡಕ್ಕೆ ತೆರಳಿ ಅಲ್ಲಿ ಧಾರಾಕಾರ ಮಳೆಯಾಗಿವೆ. ಘಟ್ಟದ ಮೇಲಿನಿಂದ ಮೋಡದ ಚಲನೆ ಕಾಣುತ್ತಿಲ್ಲ, ಹೀಗಾಗಿ ಸ್ಥಳೀಯ ವಾತಾವರಣದ ಚಲನೆಯಲ್ಲಾದ ಸಣ್ಣ ಬದಲಾವಣೆಯೇ ಮಳೆಯ ಹಂಚಿಕೆಯನ್ನು ಸಂಪೂರ್ಣ ಬದಲಿಸಿದೆ ಎಂದುಹವಾಮಾನ ವೀಕ್ಷಕರುಗಳಾದ ಸಾಯಿಶೇಖರ್‌ ಕರಿಕಳ ಹಾಗೂರಘುರಾಮ ಕಂಪದಕೋಡಿ ಹೇಳುತ್ತಾರೆ.

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

Heavy rain has been reported across the Malnad foothills of Dakshina Kannada, particularly around Subrahmanya, Balugodu, Kollamogru, Balpa, Kadaba and Guthigaru. Several locations have reportedly received more than 100 mm of rain within a short period after 10 am, causing streams and rivers to swell. Water levels in the Kannadi Hole near Adi Subrahmanya and the Kumaradhara River are also rising, raising concerns among residents in low-lying and riverside areas.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ |13-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಹಂತ ಹಂತವಾಗಿ ಚುರುಕಾಗಬಹುದೇ?
September 13, 2026
12:16 PM
by: ಸಾಯಿಶೇಖರ್ ಕರಿಕಳ
ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು
September 13, 2026
8:13 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ
September 12, 2026
12:52 PM
by: ಸಾಯಿಶೇಖರ್ ಕರಿಕಳ
ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ
September 12, 2026
7:30 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror