ಪ್ಲಾಸ್ಟಿಕ್ ಕವರ್‌ಗಳು(Plastic) ಇಡೀ ಪರಿಸರವನ್ನು ಆವರಿಸಿಬಿಟ್ಟಿದೆ. ಈ ಪೆಡಂಭೂತವನ್ನು ಪರಿಸರದಿಂದ(Nature) ತೆಗೆದು ಹಾಕಲಾಗದಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿದೆ. ಆದರೆ ಪ್ರಜ್ಞಾವಂತ ನಾಗರೀಕರಾದ ನಾವು ಒಂದಷ್ಟು ಮುಂಜಾಗೃತ ಕ್ರಮಗಳನ್ನು(Precaution) ಕೈಗೊಳ್ಳಬಹುದು. ಮುಂದಿನ ಪೀಳಿಗೆಗಾದರು ಇದರಿಂದ ಮುಕ್ತಿಯನ್ನು ನೀಡಬಹುದು. ಇದಕ್ಕಾಗಿ ನಮ್ಮ ದೇಶದಲ್ಲೇ ಪರಿಸರ ಸ್ನೇಹಿ ಕೈ ಚೀಲಗಳನ್ನು ತಯಾರಿಸಲಾಗುತ್ತಿದೆ.
ಈ ಬಗ್ಗೆ ನಾವು ತಿಳಿದು ಬಳಸಿದರೆ ಉತ್ತಮ. ಇದರಿಂದ ನಮ್ಮ ಪರಿಸರ ಹಾಗೂ ನಮ್ಮ ಮುಂದಿನ ಪೀಳಿಗೆಯನ್ನು ಅರೋಗ್ಯವಂತರಾಗಿ ಬೆಳೆಯುವಂತೆ ಮಾಡಬಹುದು. ನಮ್ಮ ದೇಶದ ಡಿಫೆನ್ಸ್ ರೀಸರ್ಚ ಡೆವಲಪ್ಮೆಂಟ್ ಸೆಂಟರ್(Defense Research Development Centre) ಇವರಿಂದ ತಯಾರಾದ ಪರಿಸರ ಸ್ನೇಹಿ ಕೈಚೀಲಗಳ(Plastic bags) ಕುರಿತು ಒಂದಿಷ್ಟು ಮಾಹಿತಿ ನಿಮಗಾಗಿ..
ಇವುಗಳ ಬಳಕೆ : ಇವು ಪ್ಲಾಸ್ಟಿಕ್ ಗೆ ಬದಲಿ ಉತ್ಪನ್ನಗಳಾದ್ದರಿಂದ, ಪ್ಲಾಸ್ಟಿಕ್ ಮತ್ತು ಪೇಪರ್ ಬಳಸುವ ಕಡೆಗಳಲ್ಲಿ ಬಳಸಬಹುದು.ಉದಾಹರಣೆಗೆ carry bags, grocery bags, hotel meal packings, wraps, munching sheets, table covers, food packings, liquid packings, garbage bags, garment bags, etc… ಇವು ಗಳ ಬೆಲೆ ವಿಚಾರವಾಗಿ. ಹೇಳೋದಾದರೆ, ಬಟ್ಟೆ ಚೀಲ, ಪೇಪರ್ ಚೀಲ ಮತ್ತು ಲ್ಯಾಮಿನೇಟೆಡ್ ಪಾಲಿತಿನ್ ಬ್ಯಾಗ್ ಗಳಿಗಿಂತ ಅಗ್ಗವಾಗಿದ್ದು ,ಪ್ಲಾಸ್ಟಿಕ್ ಗಿಂತ ಕಲವೇ ರೂಪಾಯಿಗಳಲ್ಲಿ ದುಬಾರಿಯಾಗಿವೆ. ಆದ್ದರಿಂದ ಪ್ರಜ್ಞಾವಂತ ನಾಗರಿಕರಾದ ನಾವೆಲ್ಲರೂ ನಮ್ಮ ಬದುಕನ್ನು ಇಷ್ಟು ಚೆಂದವಾಗಿ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟ ಭೂತಾಯಿಯನ್ನು ಸ್ವಚ್ಛವಾಗಿರಿಸಲು, ಆರೋಗ್ಯಕರ, ಗೌರವದ ಬದುಕನ್ನು ಬಾಳಲು ಪ್ಲಾಸ್ಟಿಕ್ ತ್ಯಜಿಸಿ, ಈ ಪರಿಸರ ಸ್ನೇಹಿ ಬ್ಯಾಗ್, ಕವರ್ ಗಳನ್ನು ಬಳಸಿ.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…