ಕೃಷಿ ಕ್ಷೇತ್ರದಲ್ಲಿ ಹವಾಮಾನ ಆಧರಿತ ಬೆಳೆ ವಿಮಾ ಯೋಜನೆ ಜ್ಯಾರಿಗೆ ಬಂದು ದಶಕದ ಕಾಲ ಆಗುತ್ತಾ ಬಂತು.ಆದರೂ ನಮ್ಮ ರೈತರುಗಳಿಗೆ ಹವಾಮಾನ ಆಧರಿತ ಬೆಳೆ ವಿಮಾ ಯೋಜನೆ, ಫಸಲು ವಿಮಾ ಯೋಜನೆ, ಜೀವ ವಿಮಾ ಯೋಜನೆ, ಆರೋಗ್ಯ ವಿಮಾ ಯೋಜನೆ……..ಇತ್ಯಾದಿ ಇತ್ಯಾದಿ ಯೋಜನೆಗಳ ನಡುವಿನ ವ್ಯತ್ಯಾಸಗಳ ಅರಿವು ಕನಿಷ್ಟಾತಿ ಕನಿಷ್ಟ.ಇನ್ನೂ ಕೃಷಿಕ ಪರ ಯೋಜನೆಯ ಬಗ್ಗೆ ಸಂದೇಹ,ಪ್ರಶ್ನೆ,ಆರೋಪಗಳು ಮುಗಿದಿಲ್ಲ…
ಇದು ವಾಸ್ತವದಲ್ಲಿ
- ಕೃಷಿಕನಲ್ಲಿ ತನಗೆ ಉಪಯುಕ್ತವೆನಿಸುವ ವಿಷಯಗಳಲ್ಲೂ ಇರುವ ಜ್ಞಾನ ಸಂಪಾದನೆಯ ಬಗ್ಗೆ ಇರುವ ನಿರಾಸಕ್ತಿ,
- ಮಾಹಿತಿಗಳನ್ಹು ಹಂಚುವ ವ್ಯವಸ್ಥೆಯ ದೌರ್ಬಲ್ಯ
- ಮಾಹಿತಿಗಳ ಬಗೆಗಿನ ಮಾಧ್ಯಮ ವರದಿಗಳಲ್ಲಿ ಇರುವ ಉತ್ಪ್ರೇಕ್ಷೆ,
- ಸರಕಾರಿ ಮಾಹಿತಿಗಳಲ್ಲಿ ಬಳಸುವ ಪದ/ ವಾಕ್ಯಗಳನ್ಹು ಅರ್ಥೈಸಿಕೊಳ್ಳುವಲ್ಲಿನ ಕಷ್ಟ/ ಗೊಂದಲಗಳ ಬಹಿರಂಗ ಪ್ರದರ್ಶನವಷ್ಟೇ.
ದ.ಕ.ಜಿಲ್ಲೆಯಲ್ಲಿ ಭಾರೀ ಯಶಸ್ಸು ಕಂಡದ್ದು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ.ಜಿಲ್ಲಾ ಹಂತದಲ್ಲಿ ಯಾವ್ಯಾವ ಬೆಳೆಗಳಿಗೆ ವಿಮೆ ಕೊಡಬೇಕು ಅಂತ ನಿರ್ಧರಿಸುವುದು.ಜಿಲ್ಲಾ ಹಂತದಲ್ಲಿಯೇ ಯಾವ್ಯಾವ ಬೆಳೆಗಳಲ್ಲಿ ಎಷ್ಟು ಆದಾಯ ಬರುತ್ತದೆ ,ಸಂಪೂರ್ಣ ನಷ್ಟ ಅಂತ ಯಾವ ಮೊತ್ತ ನಿರ್ಧರಿಸ ಬೇಕು ಅಂತಲೂ ನಿರ್ಧರಿತವಾಗುವುದು. ನಷ್ಟದ ಪ್ರಮಾಣ ನಿರ್ಧರಿಸುವುದು ಮಳೆ ಮತ್ತು ಉಷ್ಣತೆಯ ಮೇಲೆ ಎಂಬುದು ನಿರ್ಧರಿತವಾದ್ದು.ಆದರೆ ಎಷ್ಡು ಮಳೆ ,ಎಷ್ಡು ಉಷ್ಣತೆಗೆ ಎಷ್ಟು ನಷ್ಟ ಎಂಬ ಪ್ರಮಾಣ ನಿರ್ಧರಿತವಾಗುವುದು ಜಿಲ್ಲಾ ಹಂತದಲ್ಲಿ.
ಇದಾವುದನ್ನೂ ಬೇಕಾಬಿಟ್ಟಿ ,ಯಾರ್ಯಾರದೋ ಶಿಫಾರಸು/ ಒತ್ತಡಗಳ ಮೇಲೆ ನಿರ್ಧರಿತವಾಗುವಂತಹುದಲ್ಲ.ವೈಜ್ಞಾನಿಕ ಮಾನದಂಡಗಳು ಇರಬೇಕಾದ್ದೂ ಅಪೇಕ್ಷಿತ. ಆದ್ದರಿಂದಲೇ ಹವಾಮಾನ ಆಧರಿತ ಬೆಳೆ ವಿಮಾ ಯೋಜನೆ ವೈಜ್ಞಾನಿಕವೂ ಹೌದು,ಕೃಷಿಕ ಪರವೂ ಹೌದು.
ದ.ಕ.ಜಿಲ್ಲೆಯಲ್ಲಿ ಈ ಯೋಜನೆಗೆ ಆಯ್ದುಕೊಂಡದ್ದು ಅಡಿಕೆ ಮತ್ತು ಕಾಳು ಮೆಣಸು ಬೆಳೆಯನ್ನು.ಇವೆರಡೂ ಒಂದಕ್ಕೊಂದು ಪೂರಕವಾದ ಬೆಳೆಗಳು. ಇವೆರಡರ ಹೊರತಾಗಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತಿರುವ ಇತರ ತೋಟಗಾರಿಕಾ ಬೆಳೆಗಳು ಎಂದರೆ ತೆಂಗು ಮತ್ತು ರಬ್ಬರ್.ಆದರೆ ಈ ಬೆಳೆಗಳಿಗೆ ವಿಮೆಯ ಭಾಗ್ಯವಿಲ್ಲ.
ಪ್ರಸ್ತುತ ಅಡಿಕೆ ಬೆಳೆಯ ವಿಸ್ತರಣೆಗೆ ತಡೆ ಹಾಕಬೇಕು, ಬೆಳೆ ಬದಲಾವಣೆಯನ್ನು ಪ್ರೋತ್ಸಾಹಿಸಬೇಕು ಎಂಬ ಚಿಂತನೆ ನಡೆಯುತ್ತಿದೆ.ನಿಯಂತ್ರಿಸಲಾಗದ ಒಂದಷ್ಟು ಸಮಸ್ಯೆಗಳಿಂದ ಅಡಿಕೆ ಬೆಳೆಗಾರರು ಬಸವಳಿಯುತ್ತಿದ್ದಾರೆ.ಅವರುಗಳಿಗೆ ನೀಡಲಾಗುತ್ತಿರುವ ಸಲಹೆ ಬೆಳೆ ಬದಲಾವಣೆ ಮಾಡಿ ಎಂಬುದು.ಆದರೆ ಬೆಳೆ ಬದಲಾವಣೆಗೆ ವಿಮೆಯ ಬೆಂಬಲ ಇಲ್ಲದೇ ಇರುವುದು ವಿಪರ್ಯಾಸ.ವಿಮೆ ಅಡಿಕೆ ಬೆಳೆಯನ್ನಷ್ಟೇ ಪ್ರೋತ್ಸಾಹಿಸುವಂತಿದೆ.
ಜಿಲ್ಲೆಯಲ್ಲಿನ ತಜ್ಞರ ತಂಡ ಬೆಳೆ ನೂರಕ್ಕೆ ನೂರರಷ್ಟು ನಷ್ಟವಾದರೆ ಕೃಷಿಕನಿಗಾಗುವ ನಷ್ಟ ಎಷ್ಟು ಅಂತ ಪರಿಗಣಿಸುತ್ತದೆಯೋ ಅದರ 5% ಮೊತ್ತವನ್ಜು ಪ್ರೀಮಿಯಂ ರೂಪದಲ್ಲಿ ಬೆಳೆಗಾರ ಕಟ್ಟ ಬೇಕು ಅಂತ ನಿಯಮ. ವಿಮೆಗಾಗಿ ನಿಯಮಿಸಲ್ಪಟ್ಟ ಇನ್ಶ್ಯೂರೆನ್ಸ್ ಕಂಪನಿ ಈ ನೂರಕ್ಕೆ ನೂರು ನಷ್ಟದ ಮೊತ್ತದ 30%ಕ್ಕಿಂತ ಹೆಚ್ಚಿನ ಪ್ರೀಮಿಯಂನ್ನು ಕೇಳಬಾರದು ಅಂತ ನಿಯಮ.ಬೆಳೆಗಾರ ಕಟ್ಟುವ 5% ಮತ್ತು ಇನ್ಶ್ಯೂರೆನ್ಸ್ ಕಂಪನಿ ಕೇಳುವ 30% ಪ್ರೀಮಿಯಂಗಳ ನಡುವಿನ 25% ವ್ಯತ್ಯಾಸದ ಮೊತ್ತವನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಂಚಿಕೊಂಡು ಇನ್ಶ್ಯೂರೆನ್ಸ್ ಕಂಪನಿಗೆ ತುಂಬ ಬೇಕಾದ್ದು.ಇನ್ನಷ್ಟು ನಿಬಂಧನೆಗಳು ಇವೆ. ಅವುಗಳನ್ನು ಬರೆದರೆ ಮತ್ತಷ್ಟು ಗೊಂದಲ ಹೆಚ್ಚಾದೀತೇ ಹೊರತು ಇನ್ನೇನೂ ಪ್ರಯೋಜನವಾಗದು.
ವಿಮೆಯ ಅವಧಿ ಒಂದು ವರ್ಷ.ಈ ಅವಧಿ ಪೂರ್ಣಗೊಂಡ ಬಳಿಕವಷ್ಟೇ ವಿಮಾ ಪರಿಹಾರದ ಸಾಧ್ಯಾ ಸಾಧ್ಯತೆಯ ಬಗ್ಗೆ ನಿರ್ಧರಿತವಾಗುವುದು.ಇದನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗದ ಬೆಳೆಗಾರರ ಸಂಖ್ಯೆ ಅಗಣಿತ.ಒಂದಷ್ಟು ಭರ್ಜರಿ ಮಳೆ ಬಂದ ಕೂಡಲೇ ವಿಮೆ ಹಣ ಬಂತೋ / ಬರುತ್ತದೆಯೋ ಅಂತ ವಿಚಾರಿಸುವ ಕೃಷಿಕರು ಬಹಳಷ್ಟು ಜನ.ಮುಂದಿನ ವರ್ಷದ ಕಂತು ಕಟ್ಟಲು ಸೂಚನೆ ಬಂದಾಗ ಹಿಂದಿನ ವರ್ಷದ ವಿಮಾ ಪರಿಹಾರ ಮೊತ್ತ ಎಷ್ಟು ಅಂತ ವಿಚಾರಿಸುವವರೂ ಸಾಕಷ್ಟು ಜನ.
ಮಳೆ ಮತ್ತು ಉಷ್ಣತೆಯ ಮಾಪನದಲ್ಲಿ ಎಡವಟ್ಟುಗಳಾಗುತ್ತದೆಯೋ ಎಂಬ ಸಂದೇಹವೂ ಬಹಳಷ್ಟು ಜನರದ್ದು.ಎಲ್ಲವೂ ಯಾಂತ್ರೀಕೃತ, ಸ್ವಯಂಚಾಲಿತ ಅಂತ ಹೇಳಲಾಗಿದ್ದರೂ ಅನೇಕರಿಗೆ ನಂಬಿಕೆಯಿಲ್ಲ.ತಮ್ಮಲ್ಲಿನ ಅಳತೆ ಸಮರ್ಪಕವಾಗಿ ನಡೆದಿಲ್ಲ ಅಂತ ಆರೋಪಿಸುವ ಜನಪ್ರತಿನಿಧಿಗಳೂ ಇದ್ದಾರೆ ಎಂಬುದು ಇಲ್ಲಿನ ಸಂದೇಹದ ಪ್ರಮಾಣವನ್ನು ತೋರಿಸುತ್ತದೆ.
ಈ ಸಂದೇಹಗಳನ್ನು ಪರಿಹರಿಸುವ ಯತ್ನ ನಡೆಯುತ್ತಿಲ್ಲ.ನಡೆದಿದ್ದರೂ ಪ್ರಯೋಜನವಾಗಿಲ್ಲ.ಅನೇಕ ಕಡೆ ಪಾರದರ್ಶಕತೆಯ ಕೊರತೆ ಇದೆಯೇನೋ ಅಂತ ಅನಿಸುತ್ತಿದೆ.ಈ ವಿಮೆಗೆ ಸಂಬಂಧ ಪಟ್ಟಂತೆ ಮಾಹಿತಿ ಎಲ್ಲಿ ಲಭ್ಯ ಎಂಬುದು ಯಾರಿಗೂ ಗೊತ್ತಿಲ್ಲ ಅಂತ ಅನಿಸುವಂತಿದೆ.
…………………..
Weather-based insurance schemes have emerged as a crucial support mechanism for farmers, particularly those cultivating crops like arecanut and pepper in dakshina kannada. These schemes are designed to mitigate the financial risks associated with unpredictable weather patterns, which are increasingly common due to climate change. For arecanut and pepper farmers, who depend heavily on consistent climatic conditions for optimal yield, such insurance provides a financial safety net. By compensating for losses incurred due to adverse weather events, the insurance helps maintain farmers’ income stability and encourages sustainable agricultural practices. This form of insurance reduces the reliance on informal credit sources, often burdening farmers with high-interest debts. Furthermore, weather-based insurance schemes encourage farmers to adopt more innovative and resilient farming techniques, as they can plan their investments with greater confidence. Insurance providers, in collaboration with meteorological services, can offer tailored coverage options specific to the unique climatic requirements of arecanut and pepper cultivation. This targeted approach enhances the attractiveness and relevance of such insurance schemes for these farmers. Additionally, the data-driven nature of these schemes ensures transparency and faster claim processing, thereby increasing trust and participation among the farming community. Overall, weather-based insurance schemes play an essential role in safeguarding the livelihoods of arecanut and pepper farmers, promoting economic resilience and agricultural sustainability.