ಹಲಸಿನ ಬೀಜ ಚನ್ನ ಬೋಂಡಾಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ :
ಹಲಸಿನ ಬೀಜ 15, ಸಿಪ್ಪೆ ತೆಗೆದು ಜಜ್ಜಿ ಇಡಿ, ಚನ್ನ 1/4 ಕಪ್. 3 ಗಂಟೆ ನೆನೆ ಹಾಕಿ, ಆಲೂಗಡ್ಡೆ 1 ಚಿಕ್ಕದು ಸಿಪ್ಪೆ ತೆಗೆದು ಕಟ್ ಮಾಡಿ. ಇವು 3 ನ್ನು ಕುಕ್ಕರ್ ಗೆ ಹಾಕಿ ನೀರು ಹಾಕಿ ಬೇಯಿಸಿ ಕೊಳ್ಳಿ. ತಣ್ಣಗಾದ ನಂತರ ನೀರು ತೆಗೆದು ಜಾರ್ ಗೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬಾಣಲೆ ಬಿಸಿ ಆದಾಗ ಅದಕ್ಕೆ ಎಣ್ಣೆ 4 ಚಮಚ, ಉದ್ದಿನ ಬೇಳೆ 1/2ಚಮಚ, ಸಾಸಿವೆ 1/4ಚಮಚ, ಜೀರಿಗೆ 1 ಚಮಚ , ಕರಿಬೇವಿನ ಸೊಪ್ಪು ಹಾಕಿ ಒಗ್ಗರಣೆ ಮಾಡಿಕೊಳ್ಳಿ. ನಂತರ ಕಟ್ ಮಾಡಿದ ಈರುಳ್ಳಿ 1, ಚಿಕ್ಕ ದಾಗಿ ಕಟ್ ಮಾಡಿದ ಹಸಿಮೆಣಸು 2 ಹಾಕಿ ಚೆನ್ನಾಗಿ ಫ್ರೈ ಮಾಡಿ ಇದಕ್ಕೆ ಬೇಯಿಸಿ ರುಬ್ಬಿದ ಮಿಶ್ರಣವನ್ನು ಹಾಕಿ , ಕೊತ್ತಂಬರಿ ಪುಡಿ , ಗರಂ ಮಸಾಲ 1 ಚಮಚ ,ಕೊತ್ತಂಬರಿ ಸೊಪ್ಪುಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ನಿಂಬೆ ಗಾತ್ರದ ಉಂಡೆಗಳನ್ನು ಮಾಡಿ ಇಡಿ. ಹಿಟ್ಟು ಕಲೆಸಿ ಕೊಳ್ಳಲು. ಕಡಲೆ ಹಿಟ್ಟು 1 ಕಪ್, ನೀರು , ಉಪ್ಪು ರುಚಿಗೆ ತಕ್ಕಷ್ಟು ಹಾಕಿ ಹಿಟ್ಟು ಕಲೆಸಿ ಕೊಳ್ಳಿ.ಉಂಡೆಗಳನ್ನು ಹಿಟ್ಟಿಗೆ ಅದ್ದಿ , ಕಾದ ಎಣ್ಣೆಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ಬಿಸಿ ಬಿಸಿಯಾದ ಹಲಸಿನ ಬೀಜ ಚನ್ನ ಬೋಂಡಾ ರೆಡಿ.
ಸಾಸ್ ಜೊತೆ ಸವಿಯಿರಿ