ಮುಂಗಾರು ಪ್ರವೇಶ | ಮುಂದಿನ 2 ತಿಂಗಳ ಕಾಲ ಮೀನುಗಾರಿಕೆ ಸ್ಥಗಿತ | ಮೀನುಗಾರರಿಂದ ಬಲೆ ಹೆಣೆಯುವ ಕಾರ್ಯ ಆರಂಭ

May 31, 2024
2:18 PM
ಮುಂಗಾರು ಪ್ರವೇಶವಾಗುತ್ತಿದ್ದಂತೆಯೇ ಮೀನುಗಾರಿಕೆ ಸ್ಥಗಿತವಾಗುತ್ತದೆ. ಮೀನುಗಾರರು ಬಲೆ ಹೆಣೆಯುವ ಕಾರ್ಯದಲ್ಲಿ ತೊಡಗುತ್ತಾರೆ.

ಮುಂಗಾರು ಮಳೆ(Monsoon rain) ಆರಂಭವಾಗುತ್ತಿದ್ದಂತೆ ಮೀನುಗಾರಿಕೆಗೆ(Fishing) ವಿರಾಮ. ಇನ್ನೇನು ಕರಾವಳಿಗೆ(Coastal) ಮುಂಗಾರು ಪ್ರವೇಶಿಸಲಿದೆ. ಆದ್ದರಿಂದ ಮುಂದಿನ ಎರಡು ತಿಂಗಳ ಕಾಲ ಮೀನುಗಾರಿಕೆ  ಸ್ಥಗಿತಗೊಳ್ಳಲಿದೆ. ಮೀನುಗಾರಿಕೆ ಸ್ಥಗಿತಗೊಳಿಸಿ ಬೋಟುಗಳು(Boats) ಈಗಾಗಲೇ ತೀರ ಸೇರುತ್ತಿದ್ದು, ಮೀನುಗಾರರು ಬಲೆ(Fishing net) ಹೆಣೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ.

2 ತಿಂಗಳ ಕಾಲ ಮೀನುಗಾರಿಕೆ ಸ್ಥಗಿತ : ಜೂನ್ 1 ರಿಂದ ಜುಲೈ 31 ರವರೆಗೆ ಎರಡು ತಿಂಗಳ ಕಾಲ ಮೀನುಗಾರಿಕೆಗೆ ನಿಷೇಧವಿದ್ದು, ಕಡಲ ಮಕ್ಕಳು ಸಮುದ್ರಕ್ಕೆ ಇಳಿಯದೆ ತೀರ ಸೇರಲೇಬೇಕಿದೆ. ರಾಜ್ಯ ಸರಕಾರದ ಸೂಚನೆ ಹಾಗೂ ಮೀನುಗಾರಿಕೆ ನಿಯಂತ್ರಣ ಕಾಯ್ದೆಯಂತೆ ಯಾವುದೇ ಬಲೆಗಳನ್ನು / ಸಾಧನಗಳನ್ನು ಉಪಯೋಗಿಸಿ ಯಾಂತ್ರೀಕೃತ ದೋಣಿಗಳಲ್ಲಿ ಮೀನುಗಾರಿಕೆ ನಡೆಸುವುದನ್ನು ಸರಕಾರ ನಿಷೇಧಿಸಿದೆ. ಆದ್ದರಿಂದ ನಾಡದೋಣಿ ಹೊರತುಪಡಿಸಿ ಪರ್ಸಿನ್, ಟ್ರಾಲ್ ಬೋಟ್‍ಗಳು ಎರಡು ತಿಂಗಳುಗಳ ಕಾಲ ಮೀನುಗಾರಿಕೆ ನಿಷೇಧಿಸಿ ತೀರದಲ್ಲಿ ಲಂಗರು ಹಾಕುತ್ತದೆ.

ಬಲೆ ಹೆಣೆಯುವ ಕಾರ್ಯ: ಸದ್ಯ  ಕರಾವಳಿಯ ಮೀನುಗಾರರು ಮುಂದಿನ ಎರಡು ತಿಂಗಳ ಮೀನುಗಾರಿಕೆಗೆ ತೆರಳುವಂತಿಲ್ಲ. ಆದ್ದರಿಂದ ಈ ಸಮಯದಲ್ಲಿ ಅವರು ತಮ್ಮ ಬಲೆಗಳ, ಹಾಳಾದ ಬೋಟ್ ಗಳ ರಿಪೇರಿ ಕಾರ್ಯದಲ್ಲಿ ನಿರತರಾಗುತ್ತಾರೆ. ಈಗಾಗಲೇ ಕಡಲ ಮಕ್ಕಳು ಹಾಳಾದ ಬಲೆಗಳನ್ನು ಮತ್ತೆ ಹೆಣೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸಾಕಷ್ಟು ದೊಡ್ಡದಾದ ಬಲೆಗಳನ್ನು ಹೆಣೆಯಲು ಐದಾರು ಮಂದಿ ಜೊತೆ ಸೇರಿಕೊಂಡು ಕೆಲಸ ಮಾಡುತ್ತಾರೆ. ಮೊದಲು ಅಶುಚಿಯಾದ ಶುಚಿಗೊಳಿಸಿ, ಹರಿದ ಬಲೆಗಳನ್ನು ಹೆಣೆಯುತ್ತಾರೆ. ಹೀಗೆ ರಿಪೇರಿಯಾದ ಬಲೆಗಳನ್ನು ಮುಂದಿನ ಎರಡು ತಿಂಗಳ ಕಾಲ ಸುರಕ್ಷಿತವಾಗಿ ಇಡಲಾಗುತ್ತದೆ. ಬಳಿಕ ಈ ಬಲೆಗಳನ್ನು ಮುಂದಿನ ಎರಡು ತಿಂಗಳ ಬಳಿಕದ ಮೀನುಗಾರಿಕೆಗೆ ಬಳಸಲಾಗುತ್ತದೆ.

– ಅಂತರ್ಜಾಲ ಮಾಹಿತಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?
August 14, 2026
7:14 AM
by: ಮಹೇಶ್ ಪುಚ್ಚಪ್ಪಾಡಿ
ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ
August 13, 2026
2:01 PM
by: ಸಾಯಿಶೇಖರ್ ಕರಿಕಳ
ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ
August 13, 2026
6:59 AM
by: ದ ರೂರಲ್ ಮಿರರ್.ಕಾಂ
ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?
August 13, 2026
6:50 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror