ಮುಂಗಾರು ಮಳೆ(Monsoon rain) ಆರಂಭವಾಗುತ್ತಿದ್ದಂತೆ ಮೀನುಗಾರಿಕೆಗೆ(Fishing) ವಿರಾಮ. ಇನ್ನೇನು ಕರಾವಳಿಗೆ(Coastal) ಮುಂಗಾರು ಪ್ರವೇಶಿಸಲಿದೆ. ಆದ್ದರಿಂದ ಮುಂದಿನ ಎರಡು ತಿಂಗಳ ಕಾಲ ಮೀನುಗಾರಿಕೆ ಸ್ಥಗಿತಗೊಳ್ಳಲಿದೆ. ಮೀನುಗಾರಿಕೆ ಸ್ಥಗಿತಗೊಳಿಸಿ ಬೋಟುಗಳು(Boats) ಈಗಾಗಲೇ ತೀರ ಸೇರುತ್ತಿದ್ದು, ಮೀನುಗಾರರು ಬಲೆ(Fishing net) ಹೆಣೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ.
2 ತಿಂಗಳ ಕಾಲ ಮೀನುಗಾರಿಕೆ ಸ್ಥಗಿತ : ಜೂನ್ 1 ರಿಂದ ಜುಲೈ 31 ರವರೆಗೆ ಎರಡು ತಿಂಗಳ ಕಾಲ ಮೀನುಗಾರಿಕೆಗೆ ನಿಷೇಧವಿದ್ದು, ಕಡಲ ಮಕ್ಕಳು ಸಮುದ್ರಕ್ಕೆ ಇಳಿಯದೆ ತೀರ ಸೇರಲೇಬೇಕಿದೆ. ರಾಜ್ಯ ಸರಕಾರದ ಸೂಚನೆ ಹಾಗೂ ಮೀನುಗಾರಿಕೆ ನಿಯಂತ್ರಣ ಕಾಯ್ದೆಯಂತೆ ಯಾವುದೇ ಬಲೆಗಳನ್ನು / ಸಾಧನಗಳನ್ನು ಉಪಯೋಗಿಸಿ ಯಾಂತ್ರೀಕೃತ ದೋಣಿಗಳಲ್ಲಿ ಮೀನುಗಾರಿಕೆ ನಡೆಸುವುದನ್ನು ಸರಕಾರ ನಿಷೇಧಿಸಿದೆ. ಆದ್ದರಿಂದ ನಾಡದೋಣಿ ಹೊರತುಪಡಿಸಿ ಪರ್ಸಿನ್, ಟ್ರಾಲ್ ಬೋಟ್‍ಗಳು ಎರಡು ತಿಂಗಳುಗಳ ಕಾಲ ಮೀನುಗಾರಿಕೆ ನಿಷೇಧಿಸಿ ತೀರದಲ್ಲಿ ಲಂಗರು ಹಾಕುತ್ತದೆ.
ಬಲೆ ಹೆಣೆಯುವ ಕಾರ್ಯ: ಸದ್ಯ ಕರಾವಳಿಯ ಮೀನುಗಾರರು ಮುಂದಿನ ಎರಡು ತಿಂಗಳ ಮೀನುಗಾರಿಕೆಗೆ ತೆರಳುವಂತಿಲ್ಲ. ಆದ್ದರಿಂದ ಈ ಸಮಯದಲ್ಲಿ ಅವರು ತಮ್ಮ ಬಲೆಗಳ, ಹಾಳಾದ ಬೋಟ್ ಗಳ ರಿಪೇರಿ ಕಾರ್ಯದಲ್ಲಿ ನಿರತರಾಗುತ್ತಾರೆ. ಈಗಾಗಲೇ ಕಡಲ ಮಕ್ಕಳು ಹಾಳಾದ ಬಲೆಗಳನ್ನು ಮತ್ತೆ ಹೆಣೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸಾಕಷ್ಟು ದೊಡ್ಡದಾದ ಬಲೆಗಳನ್ನು ಹೆಣೆಯಲು ಐದಾರು ಮಂದಿ ಜೊತೆ ಸೇರಿಕೊಂಡು ಕೆಲಸ ಮಾಡುತ್ತಾರೆ. ಮೊದಲು ಅಶುಚಿಯಾದ ಶುಚಿಗೊಳಿಸಿ, ಹರಿದ ಬಲೆಗಳನ್ನು ಹೆಣೆಯುತ್ತಾರೆ. ಹೀಗೆ ರಿಪೇರಿಯಾದ ಬಲೆಗಳನ್ನು ಮುಂದಿನ ಎರಡು ತಿಂಗಳ ಕಾಲ ಸುರಕ್ಷಿತವಾಗಿ ಇಡಲಾಗುತ್ತದೆ. ಬಳಿಕ ಈ ಬಲೆಗಳನ್ನು ಮುಂದಿನ ಎರಡು ತಿಂಗಳ ಬಳಿಕದ ಮೀನುಗಾರಿಕೆಗೆ ಬಳಸಲಾಗುತ್ತದೆ.
– ಅಂತರ್ಜಾಲ ಮಾಹಿತಿ
ಭಾರತದ ಮೇಲೆ ನೈಋತ್ಯ ಮಾನ್ಸೂನ್ನ ಆರಂಭದ ದಿನಾಂಕಗಳ ಪ್ರಕಾರ ಸಾಮಾನ್ಯವಾಗಿ ಮೇ.21 ಅಥವಾ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 953515649
ಭಾರತವು ಭಯೋತ್ಪಾದನೆಯನ್ನು ಸಹಿಸುವುದಿಲ್ಲ, ಪ್ರತಿಕ್ರಿಯಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮುಂಗಾರು ಅವಧಿಗೂ ಮುನ್ನವೇ ಆರಂಭವಾಗುವ ವರದಿಗಳು ಬರುತ್ತಿವೆ. ಈಗಾಗಲೇ ಹಿಂದುಮಹಾಸಾಗರ ಭಾಗದಿಂದ ಅರಬ್ಬಿ…
ಕೃಷಿ ಕ್ಷೇತ್ರ ಅಭಿವೃದ್ಧಿಗಾಗಿ ಮುಳಿಯದ ಸಂಸ್ಥೆ ಸಹಯೋಗದಲ್ಲಿ ಕೃಷಿ ಅಕಾಡೆಮಿ ರಚನೆ ಮಾಡುವ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490