Advertisement
Opinion

ಧ್ಯಾನವನ್ನು ಹೇಗೆ ಮಾಡುವುದು?…. ಧ್ಯಾನ ಮತ್ತು ಆಲೋಚನೆಗಳು…..

Share

ಇತ್ತೀಚಿಗೆ ಯಾರು ಬೇಕಾದರೂ ಎದ್ದು ಧ್ಯಾನ(Meditation) ಮಾಡಲು ಸಲಹೆ ನೀಡುತ್ತಾರೆ. ಮನಸ್ಸು ಶಾಂತವಾಗಿರಲಿ ಎಂದು ನಾವು ಆ ಪ್ರಯತ್ನವನ್ನು ಮಾಡುತ್ತೇವೆ, ಆದರೆ, ಮನಸ್ಸು(Mind) ಒಂದೆಡೆ ಎಲ್ಲಿ ನಿಲ್ಲುತ್ತದೆ? ಅಸಂಖ್ಯಾತ ವಿಷಯಗಳಿದ್ದಾಗ ಕಣ್ಣು ಮುಚ್ಚಿಕೊಂಡು ಧ್ಯಾನ ಮಾಡಲು ಪ್ರಯತ್ನಿಸಿದ್ದರೆ ಮನಸ್ಸು ಪ್ರಶಾಂತವಾಗಿರುವ ಬದಲು ಚಂಚಲ(fickle) ಮನಸ್ಸು ಹೆಚ್ಚು ಚಂಚಲವಾಗುತ್ತದೆ. ಧ್ಯಾನ ಮಾಡುವ ಪ್ರತಿಯೊಬ್ಬರ ಪ್ರಾಥಮಿಕ ಅನುಭವ ಇದು. ಏಕೆಂದರೆ, ಧ್ಯಾನವು ಒಂದು ದಿನದಲ್ಲಿ ಕಲಿಯುವಂತಹದ್ದಲ್ಲ. ಇದಕ್ಕಾಗಿ ಶ್ರದ್ಧೆಯಿಂದ ಅಭ್ಯಾಸ ಮಾಡಬೇಕು. ಹಾಗಾದರೆ, ಅದನ್ನು ಹೇಗೆ ಮಾಡುವುದು, ಎಂಬುದನ್ನು ತಿಳಿಯೋಣ.

ಮನಸ್ಸನ್ನು ಶಾಂತಗೊಳಿಸುವುದು ಅತ್ಯಂತ ಕಷ್ಟದ ವಿಷಯ. ಏಕೆಂದರೆ, ಇಂದಿನ ಬಹುಕಾರ್ಯಕ ಯುಗದಲ್ಲಿ, ನಮ್ಮ ಮನಸ್ಸು ಅನೇಕ ಕಾರ್ಯಗಳಲ್ಲಿ ನಿರತವಾಗಿದೆ, ಅನೇಕ ವಿಷಯಗಳಲ್ಲಿ ಸಿಲುಕಿಕೊಂಡಿದೆ, ಅಲ್ಲಿಂದ ಅದನ್ನು ಬಿಡಿಸಿ ಧ್ಯಾನಿಸಬೇಕೆಂದರೆ ಶಿವಧನುಷ್ಯ ಎತ್ತಿದ ಹಾಗೆ! ಕೇವಲ ಅಭ್ಯಾಸ ಮತ್ತು ಸಕಾರಾತ್ಮಕತೆಯಿಂದ, ಏನನ್ನಾದರೂ ಸಾಧಿಸಬಹುದು. ಪ್ರಯತ್ನ ಪಟ್ಟರೆ ಎಲ್ಲವೂ ಸಾಧ್ಯ ….

ಬೆಳಗಿನ ಸಮಯವನ್ನು ಆಯ್ಕೆ ಮಾಡಿ: ಮೇಲಿನ ವಿಷಯಗಳು ಕರಗತವಾದರೆ ಧ್ಯಾನವನ್ನು ಆರಂಭಿಸಬಹುದು. ಅದಕ್ಕಾಗಿ ಬೆಳಗಿನ ಸಮಯವನ್ನು ಆಯ್ಕೆ ಮಾಡಿ. ಎಚ್ಚರವಾದಾಗ ಮೊಬೈಲ್ ನೋಡದೆ ಮನಸ್ಸನ್ನು ಶಾಂತವಾಗಿಟ್ಟುಕೊಂಡು ಕಣ್ಣು ಮುಚ್ಚಿ ನಿಮ್ಮನ್ನು ನೀವೆ ಗಮನಿಸಿ. ಮುಂಜಾನೆ ಯೋಚನೆಗಳ ಸಂಚಾರ ತೀರ ವಿರಳವಾಗಿರುತ್ತದೆ. ಆದ್ದರಿಂದಲೇ, ಮನಸ್ಸನ್ನು ಏಕಾಗ್ರಗೊಳಿಸುವುದು ಸುಗಮವಾಗುತ್ತದೆ. ಆಗಲೂ ಯೋಚನೆಗಳು ಬಂದರೂ ಬರಲಿ. ಕೆಲ ಕಾಲದ ನಂತರ ಅವು ದೂರವಾಗುತ್ತವೆ. ನಿಧಾನವಾಗಿ ನದಿಯ ಪ್ರಶಾಂತ ಹರಿವಿನಂತೆ ಮನದಲ್ಲಿ ಅಲೆ ನಿಂತು ಧ್ಯಾನಕ್ಕೆ ಮನಸ್ಸು ಸಿದ್ಧವಾಗುತ್ತದೆ.

ಧ್ಯಾನ ಮಾಡುವಾಗ ಸಂಗೀತವನ್ನು ಬಳಸಬೇಡಿ: ಮೂಲಭೂತವಾಗಿ ಧ್ಯಾನವನ್ನು ಎಲ್ಲದರಿಂದ ಮನಸ್ಸನ್ನು ಬೇರ್ಪಡಿಸಲು ಮಾಡಲಾಗುತ್ತದೆ. ಯಾವುದೇ ಪ್ರಕಾರದ ಸಂಗೀತ, ಸಂಗೀತ ಅಥವಾ ಹಾಡನ್ನು ಕೇಳುತ್ತಾ ಧ್ಯಾನದ ಧಾರಣೆಯನ್ನು ಪ್ರಯತ್ನಿಸಿದರೆ ಮನಸ್ಸು ಹಾಡಿನಲ್ಲಿ ಏಕಾಗ್ರವಾಗಿ ಅದಕ್ಕೆ ಸಂಬಂಧಿಸಿದ ಆಲೋಚನೆಗಳು ಬರಲಾರಂಭಿಸುತ್ತವೆ. ಅಲ್ಲದೆ, ಧ್ಯಾನದ ಸಮಯದಲ್ಲಿ ಮನಸ್ಸು ಯಾವುದಾದರೂ ವಿಷಯದ ಮೇಲೆ ಅವಲಂಬಿತವಾಗಬಾರದು, ಇಂಥ ಸಮಯದಲ್ಲಿ ಬೇರೆ ಯಾವುದೇ ಸಂಗೀತ ಅಥವಾ ಹಾಡನ್ನು ಕೇಳದೆ ಕೇವಲ ನಿಮ್ಮ ಉಸಿರಿನ ಸಂಗೀತವನ್ನು ಮಾತ್ರ ಆಲಿಸಬೇಕು, ಇದನ್ನು ಗಮನದಲ್ಲಿಡಿ.

ಯೋಗ್ಯ ಸ್ಥಳದ ಆಯ್ಕೆ ಮಾಡಿ:ಧ್ಯಾನ ಮಾಡುವಾಗ ಸ್ಥಳದ ಮಹತ್ವವು ಇದೆ ಸರಿಯಾದ ಸ್ಥಳದಲ್ಲಿ ಸರಿಯಾದ ಧ್ಯಾನ ಸಾಧ್ಯವಾಗುತ್ತದೆ ಆದ್ದರಿಂದ ನೀವು ಕುಳಿತುಕೊಳ್ಳುವ ಸ್ಥಳ ನಿರ್ಮಲ ಹಾಗೂ ಶಾಂತವಾಗಿರಬೇಕು. ಸ್ವಚ್ಛವಾದ ಗಾಳಿಯ ಚಲನೆ ಇರಬೇಕು. ಸ್ಥಳ ಯಾವುದೇ ಪ್ರಕಾರದ ವಾಸನೆರಹಿತವಾಗಿರಬೇಕು. ಸುಗಂಧವಾಗಲಿ ದುರ್ಗಂಧವಾಗಲಿ ಎರಡೂ ಇರಬಾರದು. ನೀವು ಕುಳಿತುಕೊಳ್ಳುವ ಜಾಗದಲ್ಲಿ ಗಲಾಟೆ ಸದ್ದು ಗದ್ದಲ ಇರದಂತೆ ನೋಡಿಕೊಳ್ಳಿ. ಆದರೆ, ಒಂದು ಮಾತು ನಿಜ, ನೀವು ಮೇಲಿನ ಎಲ್ಲ ಪ್ರತಿಕೂಲ ಪರಿಸ್ಥಿತಿಗಳು ಇರುವ ಜಾಗದಲ್ಲಿ ಧ್ಯಾನವನ್ನು ಸರಿಯಾಗಿ ಮಾಡಲು ಸಾಧ್ಯವಾದರೆ ಆಗ ನೀವೊಬ್ಬ ನಿಜವಾದ ಸಾಧಕರಾಗುತ್ತೀರಿ!

ಮನಸ್ಸಿನ ಮೇಲೆ ನಿಯಂತ್ರಣ:ಮನುಷ್ಯನ ಮನಸ್ಸು ಕೋತಿಯಂತೆ, ಒಂದೆಡೆ ಸ್ಥಿರವಾಗುವುದು ಬಹಳ ಕಷ್ಟ! ಮನಸ್ಸಿನ ಮೇಲೆ ಹತೋಟಿ ಸಾಧಿಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಆಲೋಚನೆಗಳನ್ನು ಒಮ್ಮೆಲೇ ಅದುಮಲು ಪ್ರಯತ್ನಿಸಬೇಡಿ ಮೊದಲು ಅವುಗಳನ್ನು ಸ್ವತಂತ್ರವಾಗಿ ಹರಿಯಲು ಬಿಡಿ ನಿಧಾನವಾಗಿ ಮನಸ್ಸನ್ನು ಸಾತ್ವಿಕ ವಿಚಾರಗಳತ್ತ ತಿರುಗಿಸಿ ಇದಕ್ಕೆ ಒಂದು ಉತ್ತಮ ಉಪಾಯವುಂದರೆ ದೇವರ ನಾಮ ಸ್ಮರಣೆ ಮಾಡುವುದು. ನಿಮಗೆ ಇಷ್ಟವಾದ ದೇವರನ್ನು ನೆನೆಸಿಕೊಂಡು ಆತನ ರೂಪವನ್ನು ಮುಚ್ಚಿದ ಕಣ್ಣುಗಳ ಮುಂದೆ ತಂದುಕೊಳ್ಳಿ ಆ ರೂಪವನ್ನು ಆನಂದ್ ಆನಂದಿಸಿ ಆ ದೇವರು ನಾಮದ ಸ್ಮರಣೆ ಮಾಡುತ್ತಾ ಮೈಮರೆಯಿರಿ! ಕೆಲಸ ಸಮಯ ಇದನ್ನು ನೀವು ಯಶಸ್ವಿಯಾಗಿ, ನಿರಂತರವಾಗಿ, ನಿಯಮಿತವಾಗಿ ಮಾಡಿದರೆ ಕಾಲಕ್ರಮೇಣ ನಿಮ್ಮ ಆತ್ಮ, ಮನಸ್ಸು ಹಾಗೂ ದೇಹಕ್ಕೆ ಸಿಗುವ ಲಾಭಗಳಿಂದ ನೀವೇ ಆಶ್ಚರ್ಯ ಪಡುತ್ತೀರಿ!

ಸಂಕಲನ ಮತ್ತು ಸಂಪಾದನೆ: ಡಾ. ಕುಲಕರ್ಣಿ ಪಿ. ಎ.

Calming the mind is the most difficult thing. Because, in today’s multi-tasking era, our mind is busy with many tasks, stuck in many things, to free it from there and meditate is like lifting the bow of Shiva! Just with practice and positivity, anything can be achieved. Everything is possible if you try.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 22-08-2026 | ಕರಾವಳಿಯಲ್ಲಿ ಮಳೆ ಇಳಿಕೆ, 26ರಿಂದ ಮತ್ತಷ್ಟು ದುರ್ಬಲವಾಗುವ ಸಾಧ್ಯತೆ

ಕರ್ನಾಟಕದಲ್ಲಿ ಆಗಸ್ಟ್ 23ರಿಂದ 25ರವರೆಗೆ ಹಲವೆಡೆ ಅಲ್ಲಲ್ಲಿ ಸಾಮಾನ್ಯ ಮಳೆಯಷ್ಟೇ ನಿರೀಕ್ಷಿಸಲಾಗಿದ್ದು, ಕರಾವಳಿ…

4 hours ago

ಸೆಪ್ಟೆಂಬರ್‌ನಲ್ಲಿ ಪಿಎಂ ಕಿಸಾನ್ ಹಣ ಬರಬೇಕೇ? ರೈತರು ಈಗಲೇ e-KYC ಪೂರ್ಣಗೊಳಿಸಿ

PM-Kisan ಯೋಜನೆಯ 24ನೇ ಕಂತಿನ ಹಣ ಪಡೆಯಲು ಅರ್ಹ ರೈತರು ಬಯೋಮೆಟ್ರಿಕ್ ಅಥವಾ…

11 hours ago

ಬೆಳೆ ವಿಮೆಗೆ ರೈತರಿಗೆ ಮತ್ತೊಂದು ಅವಕಾಶ : ಆಗಸ್ಟ್ 31ರವರೆಗೆ ನೋಂದಣಿ ಅವಧಿ ವಿಸ್ತರಣೆ

ಮುಂಗಾರು ಹಂಗಾಮಿನ ಭತ್ತ ಸೇರಿದಂತೆ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ…

22 hours ago

ಹವಾಮಾನ ವರದಿ | 21-08-2026 | ಕರಾವಳಿಯಲ್ಲಿ ಆ.23–25 ರಂದು ಮಳೆ ಹೆಚ್ಚಳ ಸಾಧ್ಯತೆ – ಆ.26ರವರೆಗೆ ಮೋಡ–ಮಳೆ

ಕರಾವಳಿ ಕರ್ನಾಟಕದಲ್ಲಿ ಆ.23ರಿಂದ 25ರವರೆಗೆ ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಾಗುವ ಸಾಧ್ಯತೆಯಿದ್ದು, ಆ.26ರವರೆಗೂ…

1 day ago

ನಿಮ್ಮ ಹೆಸರಲ್ಲಿ 9 ಸಿಮ್‌ಗಳಿವೆಯೇ? ಆಗಸ್ಟ್ 24ರಿಂದ ಹೊಸ ನಿಯಮ – ಹೆಚ್ಚುವರಿ ನಂಬರ್‌ಗೆ ಬ್ರೇಕ್

ಆಗಸ್ಟ್ 24ರಿಂದ ಒಬ್ಬ ವ್ಯಕ್ತಿಯ ಹೆಸರಿನಲ್ಲಿ 9 ಮೊಬೈಲ್ ಸಂಪರ್ಕಗಳ ಮಿತಿಯನ್ನು ಮೀರಿ…

1 day ago

ತೆಂಗಿನ ಮರದಿಂದ 3 ಕೋಟಿ ಜನರಿಗೆ ಬದುಕು…!, ಈಗ ₹7,038 ಕೋಟಿ ರಫ್ತು!

ಭಾರತದ ತೆಂಗು ವಲಯ ಈಗ ಕಾಯಿ ಮಾರಾಟದಿಂದ ಮೌಲ್ಯವರ್ಧಿತ ಉತ್ಪನ್ನಗಳ ಜಾಗತಿಕ ಮಾರುಕಟ್ಟೆಯತ್ತ…

1 day ago