ಪರಮಾಣು ಅಸ್ತ್ರ ಜೀವ ಸಂಕುಲದ ವಿನಾಶದ ಶಸ್ತ್ರ…. | ಉಪವಾಸ ಸತ್ಯಾಗ್ರಹ | 9 – 3 – 2022 – ಬುಧವಾರ – ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ | ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನ ವನದಲ್ಲಿ | ಯುದ್ದ ನಿಲ್ಲಿಸಿ - ಜೀವ ಸಂಕುಲ ಉಳಿಸಿ | ಪ್ರೀತಿಯ ಮನಸ್ಸುಗಳ ” ಉಪವಾಸ ಸತ್ಯಾಗ್ರಹ “ |
ಈ ಭೂಮಿ ಪುಟಿನ್ ಝಲೆನ್ಸ್ಜಿ ಬೈಡನ್ ಅಥವಾ ಅವರು ಅಧ್ಯಕ್ಷರಾಗಿರುವ ದೇಶಕ್ಕೆ ಮಾತ್ರ ಸೇರಿದ್ದಲ್ಲ. ಇದು ಕೊಟ್ಯಾನುಕೋಟಿ ನಮ್ಮಂತ ಸಾಮಾನ್ಯ ಜನರಿಗೆ ಸೇರಿದ್ದು. ಅದನ್ನು ಉಳಿಸಿಕೊಳ್ಳುವ ಕರ್ತವ್ಯ ಮತ್ತು ಜವಾಬ್ದಾರಿ ನಮ್ಮೆಲ್ಲರಿಗೆ ಸೇರಿದ್ದು…..
” ಈ ಸಮಾಜದ ಕೆಟ್ಟ ನಡವಳಿಕೆಗೆ ಕೆಟ್ಟವರ ಕೆಟ್ಟತನಕ್ಕಿಂತ ಒಳ್ಳೆಯವರ ಮೌನ ಹೆಚ್ಚು ಕೊಡುಗೆ ನೀಡುತ್ತದೆ ” ಆಲ್ಬರ್ಟ್ ಐನ್ಸ್ಟೈನ್………
ರಾಕ್ಷಸ ಸ್ವಭಾವದ ರಷ್ಯಾ ಅಧ್ಯಕ್ಷ ಪುಟಿನ್, ಬಫೂನ್ ಮನೋಭಾವದ ಅಪ್ರಬುದ್ದ ಝಲೆನ್ಸ್ಕಿ, ಶಕುನಿ ರೀತಿಯ ಕುತಂತ್ರಿ ಸ್ವಾರ್ಥಿ ಬೈಡನ್ ಮತ್ತು ಅನಾಗರಿಕ ವರ್ತನೆ ತೋರಿ ಉಕ್ರೇನ್ ನನ್ನು ಪ್ರಚೋದಿಸಿ ಅದರ ಲಾಭ ಪಡೆಯುವ ಹುನ್ನಾರದ ನ್ಯಾಟೋ ಸದಸ್ಯ ರಾಷ್ಟ್ರಗಳು, ಭಾರತ ಚೀನಾ ಮುಂತಾದ ದೇಶಗಳ ಬೇಜವಾಬ್ದಾರಿ ಸ್ವಾರ್ಥ ನಡವಳಿಕೆ, ವಿಶ್ವಸಂಸ್ಥೆಯ ಸಂಪೂರ್ಣ ವಿಫಲತೆ ಎಲ್ಲದರ ವಿರುದ್ಧ ಇಡೀ ವಿಶ್ವ ಸಮುದಾಯದ ಶಾಂತಿಯುತ ಮನಸ್ಸುಗಳು ಧ್ವನಿ ಎತ್ತುವಂತೆ ಮಾಡಲು ನಮ್ಮ ಒಂದು ಸಣ್ಣ ಪ್ರಯತ್ನ…..
ಬಹುತೇಕ ಮಾಧ್ಯಮಗಳು ಯುದ್ದ ಭೂಮಿಯಿಂದ ಭಯಾನಕ ದೃಶ್ಯಗಳನ್ನು ನೇರ ಪ್ರಸಾರ ಮಾಡುವುದೇ ಪತ್ರಿಕಾ ಧರ್ಮ ಎಂಬ ಮೂರ್ಖ ಘೋಷಣೆಗೆ ಬಲಿಯಾಗಿರುವಾಗ ನಾವುಗಳು ಶಾಂತಿಯ ಪರವಾಗಿ ಗಂಭೀರ ಧ್ವನಿ ಎತ್ತಬೇಕಿದೆ. ಅದಕ್ಕಾಗಿ ಈ ಒಂದು ಕಾರ್ಯಕ್ರಮ……
ಇದು ಯಾವುದೇ ಸಂಘಟನೆ ಅಥವಾ ಸಂಸ್ಥೆ ಅಥವಾ ಪಕ್ಷ ಅಥವಾ ಸಿದ್ದಾಂತದ ಅಥವಾ ಯಾವುದೇ ಬ್ಯಾನರ್ ಅಡಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮವಲ್ಲ. ಯಾವುದೇ ಹಣಕಾಸಿನ ಕೊಡು ಅಥವಾ ತೆಗೆದುಕೊಳ್ಳುವ ಚಟುವಟಿಕೆ ಇರುವುದಿಲ್ಲ. ಯಾವುದೇ ಅದ್ದೂರಿ ಸಂಭ್ರಮ ಇರುವುದಿಲ್ಲ. ಯಾವುದೇ ವೈಯಕ್ತಿಕ ಆಹ್ವಾನವೂ ಇರುವುದಿಲ್ಲ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಂಡು ಕೇವಲ ನಾವು ಮಾತ್ರವಲ್ಲ ವಿಶ್ವದ ಜನರು ಯುದ್ಧದ ವಿರುದ್ಧ ಧ್ವನಿ ಎತ್ತಲು ಪ್ರಚೋದಿಸುವುದು, ಮೂರನೇ ಮಹಾಯುದ್ಧದ ಸಾಧ್ಯತೆಯನ್ನು ತಡೆಯುವುದು, ಅಣು ಬಾಂಬಿನ ಪ್ರಯೋಗ ಮಾಡದಂತೆ ಒತ್ತಡ ಹೇರುವುದು ಈ ಕಾರ್ಯಕ್ರಮದ ಮೂಲ ಆಶಯ…….
” ಉಪವಾಸ ಸತ್ಯಾಗ್ರಹ “ ಎಂದ ಮಾತ್ರಕ್ಕೆ ಅಲ್ಲಿ ಭಾಗವಹಿಸುವ ಎಲ್ಲರೂ ಸಂಪೂರ್ಣ ಆ 7 ಗಂಟೆಗಳ ಅವಧಿಯ ಉಪವಾಸ ಮಾಡಬೇಕೆಂಬ ಯಾವುದೇ ಕಡ್ಡಾಯ ನಿಯಮ ಅಥವಾ ಒತ್ತಡವಿಲ್ಲ. ಅವರವರ ಅನುಕೂಲ ಆರೋಗ್ಯ ದೈಹಿಕ ಮತ್ತು ಮಾನಸಿಕ ಪರಿಸ್ಥಿತಿ ಅವಲಂಬಿಸಿ ಅವರುಗಳೇ ಎಷ್ಟು ಸಮಯ ಮತ್ತು ಹೇಗೆ ಎಂದು ನಿರ್ಧರಿಸಿಕೊಳ್ಳಬಹುದು. ಇಲ್ಲಿ ಉಪವಾಸ ಎಂಬುದು ಮುಖ್ಯವಲ್ಲ. ಕಾರ್ಯಕ್ರಮದ ಆಶಯ ವಿಶ್ವದಾದ್ಯಂತ ತಲುಪಲು ತಂತ್ರಜ್ಞಾನವನ್ನು ಸರಿಯಾಗಿ ಉಪಯೋಗಿಸಿ ಹೆಚ್ಚು ಹೆಚ್ಚು ಜನ ಶಾಂತಿಗಾಗಿ ಧ್ವನಿ ಎತ್ತುವಂತೆ ಮಾಡುವ ಪ್ರಯತ್ನ ಮುಖ್ಯ. ಜೊತೆಗೆ ಒಂದಷ್ಟು ಸಂವಾದ ಯುದ್ದ ವಿರೋಧಿ ಭಾವನೆಗಳನ್ನು ವಿವಿಧ ಲಲಿತಕಲೆಗಳ ಮುಖಾಂತರ ವ್ಯಕ್ತಪಡಿಸುವುದು ಮುಂತಾದ ಕಾರ್ಯಕ್ರಮಗಳನ್ನು ಸ್ವ ಇಚ್ಛೆಯಿಂದ ಭಾಗವಹಿಸುವವರು ಅಲ್ಲಿನ ಅನುಕೂಲಕ್ಕೆ ತಕ್ಕಂತೆ ಮಾಡಬಹುದು. ಇಲ್ಲಿ ಕ್ರಮಬದ್ಧವಾಗಿ ಕಾರ್ಯಕ್ರಮ ಆಯೋಜಿಸಲು ಯಾರೂ ಇರುವುದಿಲ್ಲ. ಆದರೆ ನಿಮ್ಮನ್ನು ಸ್ವಾಗತಿಸಲು ನಮ್ಮ ಪ್ರಬುದ್ಧ ಮನಸ್ಸುಗಳ ತಂಡ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಕಾರ್ಯಕ್ರಮದ ಕೊನೆಯವರೆಗೂ ಇರಲಿದೆ.
ಇಲ್ಲಿ ಯಾರೂ ಮುಖ್ಯ ಅತಿಥಿಗಳು ವಿಶೇಷ ಆಹ್ವಾನಿತರು ಇರುವುದಿಲ್ಲ. ನಾವು ನೀವು ಮತ್ತು ಶಾಂತಿ ಬಯಸುವ ಪ್ರೀತಿಯ ಮನಸ್ಸುಗಳು ಮಾತ್ರ. ದಯವಿಟ್ಟು ಮತ್ತೊಮ್ಮೆ ನೆನೆಪಿಸುತ್ತಿದ್ದೇವೆ….
ಇದೇ ಬುಧವಾರ 9/3/2022 ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಜೀವ ಸಂಕುಲದ ಉಳಿವಿಗಾಗಿ ಸಾಮಾನ್ಯ ಜನ ಇಡೀ ವಿಶ್ವದಾದ್ಯಂತ ಧ್ವನಿ ಎತ್ತಲು ಅವರನ್ನು ಜಾಗೃತಿ ಗೊಳಿಸಲು ” ಉಪವಾಸ ಸತ್ಯಾಗ್ರಹ “
ಪ್ರೀತಿಯ ಮನಸ್ಸುಗಳಿಂದ. ನಿಮ್ಮನ್ನು ಈ ಮೂಲಕ ತುಂಬು ಹೃದಯದಿಂದ ಸ್ವಾಗತಿಸುತ್ತಿದ್ದೇವೆ. ದಯವಿಟ್ಟು ಭಾಗವಹಿಸಿ.
ನಮ್ಮ ಕೈಲಾಗುವ ಸಣ್ಣ ಪ್ರಯತ್ನ ಮಾಡೋಣ..
# ವಿವೇಕಾನಂದ ಹೆಚ್. ಕೆ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…