#ನಾನುಕೃಷಿಕ | ನೀವು ಕೃಷಿಗೆ ಇಳಿಯುವ ಪ್ಲಾನ್‌ ಇದ್ದರೆ ಬೇಗನೆ ಇಳಿದು ಬಿಡಿ | ಕೃಷಿಗೆ ಇಳಿದ ಯುವಕ ಶ್ರೀನಂದನ ಮಾತು |

Advertisement
Advertisement
ಯುವ ಕೃಷಿಕರನ್ನು ಪರಿಚಯಿಸುವ ಹಾಗೂ ಪ್ರೋತ್ಸಾಹಿಸುವ ಕೆಲಸವನ್ನು ದಿ ರೂರಲ್‌ ಮಿರರ್ ಆರಂಭಿಸಿದೆ. ಕೃಷಿ ಕೂಡಾ ಒಂದು ಹೆಮ್ಮೆಯ ಉದ್ಯೋಗ. ನೆಮ್ಮದಿ ಕೊಡುವ ಈ ಉದ್ಯೋಗ ಮಾಡುವ ಯುವ ಕೃಷಿಕರು ನಾನು ಕೃಷಿಕ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತಾಗಬೇಕು. ಯುವಕೃಷಿಕರು ನಿಮ್ಮ ಆಸುಪಾಸಿನಲ್ಲಿದ್ದರೆ ನಮಗೆ ಮಾಹಿತಿ ನೀಡಿ, ನಾನುಕೃಷಿಕ ಎಂದು ಹೆಮ್ಮೆಯಿಂದ ಹೇಳುವ ಅಭಿಯಾನ ಆರಂಭಿಸೋಣ

“ನೀವು ಕೃಷಿಗೆ ಇಳಿಯುವ ಪ್ಲಾನ್‌ ಇದ್ದರೆ ಬೇಗನೆ ಇಳಿದು ಬಿಡಿ. ಹಿರಿಯರು ಮನೆಯಲ್ಲಿ ಮಾರ್ಗದರ್ಶನ ಮಾಡುವಾಗಲೇ ಕೃಷಿಯಲ್ಲಿ ಇದ್ದು ಬಿಡಿ…” ಹೀಗೆಂದು ಸಲಹೆ ನೀಡುವವರು ಯುವ ಕೃಷಿಕ ಶ್ರೀನಂದನ.

Advertisement

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಎಣ್ಮೂರಿನ ಶ್ರೀನಂದನ ಅವರು ಈಗ ಯುವ ಕೃಷಿಕ. ಎಣ್ಮೂರಿನ ಪ್ರಸನ್ನ ಕುಂಞಹಿತ್ಲುಹಾಗೂ ಭಾಗ್ಯ  ಅವರ ಪುತ್ರನಾಗಿರುವ ಶ್ರೀನಂದನ ಅವರು ಪದವಿಯ ಬಳಿಕ ಉದ್ಯೋಗಕ್ಕಾಗಿ ಬೆಂಗಳೂರು ಬಸ್ಸು ಹತ್ತಿದವರು. ಕೃಷಿಯಲ್ಲಿಯೇ ನೆಲೆಯೂರುವ ಉದ್ದೇಶ ಹೊಂದಿದ್ದ ಅವರು ಬೆಂಗಳೂರಿನ ಕೆಲಸಕ್ಕೆ ಗುಡ್‌ಬೈ ಹೇಳಿ ಕೃಷಿ ಕೆಲಸಕ್ಕೆ ಇಳಿದರು.

Advertisement
Advertisement

ತಂದೆ ಮಾಡಿರುವ ಕೃಷಿ ಕಾಯಕವನ್ನು ಮುಂದುವರಿಸುತ್ತಾ ಅಭಿವೃದ್ಧಿ ಪಡಿಸಿದ ಶ್ರೀನಂದನ್‌ ಅವರು ಕೃಷಿಗೆ ಬಂದ ವರ್ಷ ಕೊಳೆರೋಗದಿಂದ ಅಡಿಕೆ ವ್ಯಾಪಕವಾಗಿ ನಷ್ಟವಾಗಿತ್ತು. ಈ ಸಂದರ್ಭ ತಂದೆಯ ಬೆಂಬಲದ ಮಾತುಗಳಿಂದ ಧೈರ್ಯ ಬಂದಿತ್ತು ಎನ್ನುವ ಶ್ರೀನಂದನ, ಕೃಷಿಯಲ್ಲಿಎಳೆಯ ಪ್ರಾಯದಲ್ಲಿ ಅಂದರೆ ಬಹುಬೇಗನೆ ತೊಡಗಿಸಿಕೊಂಡಾಗ ಕೃಷಿ ಸವಾಲುಗಳು ತಿಳಿದು ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎನ್ನುತ್ತಾರೆ.

Advertisement
Advertisement

ಒಂದು ಸಮಯದಲ್ಲಿ ತೋಟದ ಕಾಳುಮೆಣಸು ಕೊಯ್ಯಲು ಜನ ಸಿಗದೇ ಇದ್ದಾಗ ನಾನೇ ಸ್ವತ: ಆರಂಭಿಸಿದೆ, ಈಗ ಅಭ್ಯಾಸವಾಗಿದೆ ಎನ್ನುತ್ತಾರೆ ಶ್ರೀನಂದನ.

ಮನೆಯಲ್ಲೂ ಮನೆಯಾಕೆಗೂ ಕೃಷಿ, ಹಳ್ಳಿ ಪ್ರದೇಶ ಇಷ್ಟವಾದ ಕಾರಣ ಕೃಷಿ ಬದುಕು ಸಂತೃಪ್ತವಾಗಿದೆ, ನಾನು ಕೃಷಿಕ ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದು ಹೇಳುತ್ತಾರೆ.

Advertisement
Advertisement
ನಿಮ್ಮ ಆಸುಪಾಸಿನ ಯುವಕೃಷಿಕರ ಬಗ್ಗೆ ನಮಗೆ ವಾಟ್ಸಪ್‌ ಮೂಲಕ ಮಾಹಿತಿ ನೀಡಿ. ವಾಟ್ಸಪ್‌ ಸಂಖ್ಯೆ 9449125447

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "#ನಾನುಕೃಷಿಕ | ನೀವು ಕೃಷಿಗೆ ಇಳಿಯುವ ಪ್ಲಾನ್‌ ಇದ್ದರೆ ಬೇಗನೆ ಇಳಿದು ಬಿಡಿ | ಕೃಷಿಗೆ ಇಳಿದ ಯುವಕ ಶ್ರೀನಂದನ ಮಾತು |"

Leave a comment

Your email address will not be published.


*