#Arecanut | ಅಸ್ಸಾಂನಲ್ಲಿಯೂ ಅಕ್ರಮವಾಗಿ ಬರ್ಮಾ ಅಡಿಕೆ ಸಾಗಾಟ ಪತ್ತೆ |

September 12, 2023
10:51 PM
ಅಸ್ಸಾಂನ ಚುರೈಬರಿ ಪೊಲೀಸರು ಕರೀಮ್‌ಗಂಜ್‌ನಿಂದ ಧರ್ಮನಗರಕ್ಕೆ ಅಕ್ರಮವಾಗಿ ಬರ್ಮಾ ಅಡಿಕೆಗಳನ್ನು ಸಾಗಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಇತ್ತೀಚೆಗೆ ಈಶಾನ್ಯ ರಾಜ್ಯಗಳ ಮೂಲಕ ಬರ್ಮಾ ಅಡಿಕೆ ಕಳ್ಳಸಾಗಾಣಿಕೆ ವಿಪರೀತವಾಗಿ ನಡೆಯುತ್ತಿದೆ.  ಇದೀಗ ಅಸ್ಸಾಂನಲ್ಲಿಯೂ ಬರ್ಮಾ ಅಡಿಕೆ ಕಳ್ಳಸಾಗಾಣಿಕೆ ಪ್ರಕರಣ ಪತ್ತೆಯಾಗಿದೆ. ಅಸ್ಸಾಂನ ಚುರೈಬರಿ ಪೊಲೀಸರು ಕರೀಮ್‌ಗಂಜ್‌ನಿಂದ ಧರ್ಮನಗರಕ್ಕೆ ಅಕ್ರಮ ಬರ್ಮಾ ಅಡಿಕೆಗಳನ್ನು ಸಾಗಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದೆ.

ವರದಿಯ ಪ್ರಕಾರ, ಅಸ್ಸಾಂನ ಕರೀಮ್‌ಗಂಜ್‌ನಿಂದ  ಮೊಟ್ಟೆಗಳ  ಪೆಟ್ಟಿಗೆ ರವಾನೆಯೊಂದಿಗೆ  ಬರ್ಮಾದ ಅಡಿಕೆಯನ್ನು ಸಾಗಿಸಲಾಗುತ್ತಿತ್ತು. ಸುಮಾರು  ಹತ್ತು ಚೀಲಗಳಲ್ಲಿದ್ದ ಅಡಿಕೆ ವಶಕ್ಕೆ ಪಡೆಯಲಾಗಿದೆ. ಸುಮಾರು ಎರಡೂವರೆ ಲಕ್ಷ ರೂಪಾಯಿ ಮೌಲ್ಯದ ಅಡಿಕೆ ವಶಕ್ಕೆ ಪಡೆಯಲಾಗಿದೆ.ಅಕ್ರಮ ವ್ಯಾಪಾರದಲ್ಲಿ ತೊಡಗಿರುವ  ಜುಲ್ಫಿಕರ್ ಅಲಿ (30) ಮತ್ತು ಪ್ರಸೇನ್‌ಜಿತ್ ದೇಬ್ (28) ಎಂದು ಗುರುತಿಸಲಾಗಿದೆ. ಇಬ್ಬರೂ ವ್ಯಕ್ತಿಗಳು ತ್ರಿಪುರಾ ರಾಜ್ಯದವರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಜೀವ ವೈವಿಧ್ಯ ಅನುದಾನ ಬಿಡುಗಡೆ – ಕರ್ನಾಟಕಕ್ಕೆ ₹10.49 ಲಕ್ಷ; ದೇಶದ 30 ಮಂಡಳಿಗಳಿಗೆ ₹1.19 ಕೋಟಿ
October 19, 2026
4:09 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 19-10-2026 | ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಲಕ್ಷಣ
October 19, 2026
3:45 PM
by: ದ ರೂರಲ್ ಮಿರರ್.ಕಾಂ
ಹಲವು ರಾಜ್ಯಗಳಲ್ಲಿ ಮುಂದಿನ 2 ದಿನ ಭಾರೀ ಮಳೆ ಸಾಧ್ಯತೆ – ಆರೆಂಜ್ ಅಲರ್ಟ್
October 17, 2026
7:30 AM
by: ದ ರೂರಲ್ ಮಿರರ್.ಕಾಂ
ಬರಪೀಡಿತ ವಿಜಯಪುರದಲ್ಲಿ ಹಸಿರಿನ ಕ್ರಾಂತಿ
October 17, 2026
7:23 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror